ಬೆಂಗಳೂರು, ಜು.17- ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಯೋಗಥಾನ್ 2022ಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಚಾಲನೆ ನೀಡಿದರು. ಮ್ಯಾರಥಾನ್ ಮಾದರಿಯಲ್ಲಿ ಯೋಗಥಾನ್- 2022 ಹಮ್ಮಿಕೊಳ್ಳಲಾಗಿದ್ದು ಆಗಸ್ಟ್ 28ರಂದು ರಾಜ್ಯಾದ್ಯಂತ ಐದು ಲಕ್ಷ ಜನರು ಏಕಕಾಲಕ್ಕೆ ಯೋಗ ಮಾಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
ಅದರ ಭಾಗವಾಗಿ ಪ್ರತಿ ಭಾನುವಾರ ರಾಜ್ಯದ 31 ಜಿಲ್ಲೆಗಳಲ್ಲಿ ಯೋಗಾಭ್ಯಾಸ ನಡೆಯಲಿದ್ದು, ಇಂದು ಸಚಿವ ಡಾ.ನಾರಾಯಣಗೌಡ ಅವರು ಚಾಲನೆ ನೀಡಿದ್ದಾರೆ.
ಈ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ನಿವೃತ್ತ ಐಎಎಸ್ ಅಕಾರಿ ಎಸ್ ಎಂ ರಾಜು, ಎನ್‍ವೈಕೆ ರಾಜ್ಯ ನಿರ್ದೇಶಕ ನಟರಾಜ್ ಮತ್ತಿತರರು ಭಾಗವಹಿಸಿದ್ದರು.