ಬೆಂಗಳೂರು, ಸೆ.15- ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಜಯಗಳಿಸಿ ಸ್ಪಷ್ಟ ಬಹುಮತದ ಸರ್ಕಾರ ರಚನೆ ಮಾಡಿದರೂ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಇಂದು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಪಕ್ಷದಲ್ಲಿನ ಬಣ ರಾಜಕೀಯ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಬರಗಾಲ, ಜಲಾಶಯಗಳು ಖಾಲಿ ಆಗಿರುವುದು, ಬೆಲೆ ಏರಿಕೆ ಮುಂತಾದ ಸಮಸ್ಯೆಗಳು ಕರ್ನಾಟಕ ರಾಜ್ಯವನ್ನು ಕಾಡುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಡುತ್ತಿರುವ 5 ಸಮಸ್ಯೆಗಳು ಬೇರೆ ಇವೆ ಎಂದು 5 ಸಮಸ್ಯೆಗಳ ಪಟ್ಟಿಯನ್ನು ನೀಡಿದೆ.
ಏಳಿ, ಎದ್ದೇಳಿ ನಿದ್ದೆಯಿಂದ ಹೊರ ಬನ್ನಿ ಸಿದ್ದರಾಮಯ್ಯ! ಬಿಜೆಪಿಯ ಟ್ವೀಟ್ ರಾಜ್ಯದ ಜನರನ್ನು ಕಾಡುತ್ತಿರುವ 5 ಸಮಸ್ಯೆಗಳು ಬರಗಾಲ, ಬರಿದಾದ ಜಲಾಶಯಗಳು, ಬೆಲೆ ಏರಿಕೆ, ಕಲುಷಿತ ನೀರು ಪೂರೈಕೆ, ರೈತರ ಆತ್ಮಹತ್ಯೆ ಎಂದು ಉಲ್ಲೇಖಿಸಿದೆ.
161 ಬರಪೀಡಿತ ತಾಲೂಕುಗಳ ಪಟ್ಟಿ ಇದೇ ಸಿದ್ದರಾಮಯ್ಯ ಅವರನ್ನು ಕಾಡುತ್ತಿರುವ 5 ಸಮಸ್ಯೆಗಳು ಬಿ. ಕೆ. ಹರಿಪ್ರಸಾದ್, ಡಿ. ಕೆ. ಶಿವಕುಮಾರ್, ಬಿ. ಕೆ. ಹರಿಪ್ರಸಾದ್ , ಡಿ. ಕೆ. ಶಿವಕುಮಾರ್, ಬಿ. ಕೆ. ಹರಿಪ್ರಸಾದ್ ಎಂದು ಬಿಜೆಪಿ ಟ್ವೀಟ್‍ನಲ್ಲಿ ಹೇಳಿದೆ.
#BJP, #Siddaramaiah, #CongressGovt,. #DKShivakumar,