BREAKING : ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್..!

Social Share

ನವದೆಹ: ಜ.8 : ಬಹುನಿರೀಕ್ಷಿತ ದೇಶದ ಪಂಚ ರಾಜ್ಯಗಳ ವಿಧಾನಸಭೆಗೆ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಇಂದು ಘೋಷಿಸಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಇದೇ ಪ್ರಥಮ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹಾಗೂ ಇತರೆ ಆಯುಕ್ತರು ಕೋವಿಂದ್ ಸಂದರ್ಭದಲ್ಲಿ ಸುರಕ್ಷತೆಯಿಂದ ಚುನಾವಣೆ ನಡೆಸಲು ಎಲ್ಲಾ ರೀತಿಯ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮನೆ ಮನೆ ಪ್ರಚಾರದಲ್ಲಿ ಕೇವಲ 5ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ 7ಹಂತಗಳಲ್ಲಿ ಈ ಪಂಚರಾಜ್ಯಗಳ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.  ಉತ್ತರ ಪ್ರದೇಶದಲ್ಲಿ ಚುನಾವಣೆ ಮೊದಲು ಆರಂಭಗೊಳ್ಳುತ್ತದೆ, ಫೆಬ್ರವರಿ 10 ರಿಂದ ಚುನಾವಣಾ ಪರ್ವ ಆರಂಭಗೊಳ್ಳಲಿದೆ ಮಾರ್ಚ್ 7ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಯಲಿದ್ದು ಮಾರ್ಚ್ ಹತ್ತು ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ, ಉತ್ತಾರಾಖಾಂಡ , ಗೋವಾ, ಮಣಿಪುರ, ಪಂಜಾಬ್ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು ತತ್ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಈ ಬಾರಿ 18.34 ಕೋಟಿ ಜನರು ಮತದಾನದ ಹಕ್ಕು ಪಡೆದಿದ್ದು ಇದರಲ್ಲಿ 24ಲಕ್ಷಕ್ಕೂ ಹೆಚ್ಚು ಜನರು ಹೊಸದಾಗಿ ಮತದಾನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಪ್ರತಿಯೊಂದು ವಿಧಾನಸಭಾ ಕ್ಷೇತ್ರದ 1ಮತಗಟ್ಟೆಯ ಸಂಪೂರ್ಣವಾಗಿ ಮಹಿಳಾ ಚುನಾವಣಾ ಸಿಬ್ಬಂದಿಗಳೇ ಇರುತ್ತಾರೆ 1ಮತಗಟ್ಟೆಗೆ ಕನಿಷ್ಠ 1ಸಾವಿರ ಮಂದಿ ಮತದಾರರು ಇರುವಂತೆಯೇ ನೋಡಿಕೊಳ್ಳಲಾಗುತ್ತಿದೆ ಅದರಂತೆಯೇ ಈಗ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮಹತ್ವದ ನಿರ್ಧಾರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕವೇ ನಾಮಪತ್ರ ಸಲ್ಲಿಸಬಹುದಾಗಿದೆ.ಕೊರೊನಾ ದಿಂದ ಬಳಲುತ್ತಿರುವವರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಬಹುದಾಗಿದೆ .ಅಪರಾಧ ಪ್ರಕರಣ ಉಳ್ಳ ಅಭ್ಯರ್ಥಿಗಳ ಬಗ್ಗೆ ಆಯಾ ರಾಜಕೀಯ ಪಕ್ಷ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಕೋವಿಂದ್ ಹಿನ್ನೆಲೆಯಲ್ಲಿ ಮತದಾನದ ಅವಧಿಯನ್ನು ಕೂಡ 1ಗಂಟೆ ಹೆಚ್ಚಳ ಮಾಡಲಾಗಿದೆ. ಚುನಾವಣಾ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಬೂಸ್ಟರ್ ಡೋಸ್ ನೀಡಲಾಗುವುದು.
ಚುನಾವಣೆ ನಿಯಮ ಉಲ್ಲಂಘನೆ ಕುರಿತಂತೆ ರಾಜಕೀಯ ಪಕ್ಷಗಳು ನೀಡುವ ನೀತಿ ಸಂಹಿತೆ ದೂರುಗಳನ್ನು ಸಾಧ್ಯವಾದಷ್ಟು ಹೊಸದಾಗಿ ಬಿಡುಗಡೆ ಮಾಡುವ ಆ್ಯಪ್ ಮೂಲಕವೇ ನೀಡಬೇಕೆಂದು ಚುನಾವಣಾ ಆಯುಕ್ತರು ಮನವಿ ಮಾಡಿದ್ದಾರೆ.
ಯಾವುದೇ ರೀತಿಯ ರೋಡ್ ಷೋ ಆಗಲಿ ಮೆರವಣಿಗೆ ಆಗಲಿ ಯಾವುದೇ ದ್ವಿಚಕ್ರ ವಾಹನ ಮೆರವಣಿಗೆ ನಡೆಸಬಾರದು ಎಂಬ ಕಟ್ಟಾಜ್ಞೆ ಹೊರಡಿಸಲಾಗಿದೆ.

Articles You Might Like

Share This Article