ಇಟ್ಟಿಗೆ ಭಟ್ಟಿ ಕಾರ್ಖಾನೆಯಲ್ಲಿ ಉಸಿರುಗಟ್ಟಿ 5 ಕಾರ್ಮಿಕರ ಸಾವು

Social Share

ಭೋಪಾಲ್, ಮಾ.15- ಇಟ್ಟಿಗೆ ಭಟ್ಟಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಐದು ಮಂದಿ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಛತ್ತಿಸ್‍ಗಢದಲ್ಲಿ ಸಂಭವಿಸಿದೆ. ಛತ್ತೀಸ್‍ಗಢದ ಬಸ್ನಾ ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕನಿಷ್ಠ ಐವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಟ್ಟಿಗೆ ಸುಡಲು ಬಳಸಿದ ಬೆಂಕಿಯ ಹೊಗೆಯಿಂದಾಗಿ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಐವರು ಕಾರ್ಮಿಕರು ಬಸ್ನಾ ಜಿಲ್ಲೆಯ ಗಧುಲಾರ್ಝ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದಾರೆ.

H3N2 ಸೋಂಕಿಗೆ ಮತ್ತಿಬ್ಬರು ಬಲಿ

ಕಾರ್ಮಿಕರು ತಾವು ನಿರ್ಮಿಸಿದ ಕೆಲವು ಇಟ್ಟಿಗೆಗಳ ಮೇಲೆ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

5 workers, found, dead, brick, kiln, Chhattisgarh,

Articles You Might Like

Share This Article