6 ದಿನದಲ್ಲಿ 50 ಕೋಟಿ ಟ್ರಾಫಿಕ್ ದಂಡ ಸಂಗ್ರಹ

Social Share

ಬೆಂಗಳೂರು,ಫೆ.8- ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಸಲು ನೀಡಲಾಗಿರುವ ರಿಯಾಯಿತಿ ಸೌಲಭ್ಯಕ್ಕೆ ವಾಹನ ಚಾಲಕರು ಮತ್ತು ಮಾಲೀಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಂದು ಸಂಜೆ ವೇಳೆಗೆ ದಂಡದ ಮೊತ್ತ 50 ಕೋಟಿ ದಾಟುವ ನಿರೀಕ್ಷೆ ಇದೆ.

ನ್ಯಾಯಾಲಯದ ಲೋಕ ಅದಾಲತ್‍ನ ನಿರ್ಣಯದಂತೆ ಬೆಂಗಳೂರು ಪೊಲೀಸರು ಸಂಚಾರ ನಿಯಮಗಳ ದಂಡ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಣೆ ಮಾಡಿ ಫೆ.3ರಿಂದ 11ರವರೆಗೆ ಪಾವತಿಗೆ ಕಾಲಾವಕಾಶ ನೀಡಿದ್ದಾರೆ.

ಮೊದಲ ದಿನದಿಂದಲೂ ದಂಡ ಸಂಗ್ರಹದ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಇಂದು ಮಧ್ಯಾಹ್ನದವರೆಗೆ 45 ಕೋಟಿ ರೂಪಾಯಿ ಸಂಗ್ರಹವಾಗಿದೆ. ಸಂಚಾರ ನಿರ್ವಹಣೆ ಮಾಡುವ ಪೊಲೀಸರ ಬಳಿ ಮತ್ತು ಆನ್‍ಲೈನ್ ಹಾಗೂ ಮೊಬೈಲ್ ಆ್ಯಪ್‍ಗಳಲ್ಲಿ ಹೆಚ್ಚು ಮಂದಿ ದಂಡ ಪಾವತಿಸುತ್ತಿದ್ದಾರೆ. ಟಿಎಂಸಿ ಮತ್ತು ಬೆಂಗಳೂರು ಒನ್ ಸೆಂಟರ್‍ನಲ್ಲೂ ಸಾಕಷ್ಟು ಮಂದಿ ದಂಡ ಪಾವತಿಸಿದ್ದಾರೆ.

ಕಾನೂನು ಮಾಪಕ ಇಲಾಖೆಯ ಅಧಿಕಾರಿ ಲೋಕಾಯುಕ್ತ ಬಲೆಗೆ

ನಿನ್ನೆಯವರೆಗೂ ಒಂದುವರೆಗೆ ಕೋಟಿ ಪ್ರಕರಣಗಳು ಇತ್ಯರ್ಥಗೊಂಡಿವೆ. ಸರ್ವರ್ ಸ್ಲೋ ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳ ಹೊರತಾಗಿಯೂ ಜನ ದಂಡ ಪಾವತಿಗೆ ಮುಗಿ ಬಿದ್ದಿದ್ದಾರೆ. ಪಾವತಿ ಸೌಲಭ್ಯಗಳು ಬಹು ಮಾದರಿಯಲ್ಲಿ ಇರುವುದರಿಂದ ಜನ ಸಂದಣಿ ಕಂಡು ಬರುತ್ತಿಲ್ಲ.

ಇದೇ ಮೊದಲ ಬಾರಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ಜನ ಸಾಲುಗಟ್ಟಿ ನಿಲ್ಲದೆ ವ್ಯವಸ್ಥಿತವಾಗಿ ಸೇವೆ ಪಡೆಯುವ ವಾತಾವರಣ ಕಂಡು ಬರುತ್ತಿದೆ. ಆರು ದಿನಗಳಲ್ಲಿ ಲಕ್ಷಾಂತರ ಮಂದಿ ಕುಳಿತಲ್ಲೇ ತಮ್ಮ ತಪ್ಪಿಗೆ ದಂಡ ಪಾವತಿಸಿ ಪೊಲೀಸರ ಪಟ್ಟಿಯಿಂದ ವಿಮುಕ್ತಿ ಪಡೆದಿದ್ದಾರೆ. ರಿಯಾಯಿತಿ ಸೌಲಭ್ಯದ ಕಾಲಾವಕಾಶ ಮುಕ್ತಾಯವಾಗುವ ವೇಳೆಗೆ ಬಹುತೇಕ ಪ್ರಕರಣಗಳು ಮುಕ್ತಾಯಗೊಳ್ಳುವ ನಿರೀಕ್ಷೆಗಳಿವೆ.

ಭವಿಷ್ಯದ ಅಪರಾಧ ತಗ್ಗಿಸಲು ಸಹಕಾರಿ:
ಪ್ರಸ್ತುತ ನಡೆಯುತ್ತಿರುವ ಅಭಿಯಾನದಲ್ಲಿ ನಕಲಿ ನಂಬರ್ ಪ್ಲೇಟ್‍ಗಳ ಸಾವಿರಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅವುಗಳ ವಿರುದ್ಧ ವಿಶೇಷ ಕಾರ್ಯಪಡೆ ತನಿಖೆಗೆ ಮುಂದಾಗಿದೆ. ಈ ಮೂಲಕ ಸಂಚಾರಿ ವಲಯದಲ್ಲಿ ನಡೆಯುವ ಮತ್ತೊಂದು ಅಕ್ರಮಕ್ಕೂ ಮುಂದಿನ ದಿನಗಳಲ್ಲಿ ಬ್ರೇಕ್ ಬೀಳುವ ಸಾಧ್ಯತೆ ಇದೆ.

ಕೆಲವು ವಾಹನಗಳ ಮೇಲೆ ದಾಖಲಾಗಿದ್ದ ದಂಡ ಅದರ ವಾಸ್ತವ ಮೌಲ್ಯಕ್ಕಿಂತಲೂ ದುಬಾರಿಯಾಗಿತ್ತು. ಹಾಗೆಂದು ವಾಹನವನ್ನು ಗುಜರಿಗೆ ಹಾಕಲು ಮನಸ್ಸಿಲ್ಲದೆ ಮಾಲೀಕರು ಅವುಗಳನ್ನು ಮೂಲೆಯಲ್ಲಿ ಕದ್ದು ಮುಚ್ಚಿ ಅಡಗಿಸಿಟ್ಟಿದ್ದರು. ರಿಯಾಯಿತಿ ಸೌಲಭ್ಯ ಇಂತಹ ಮಾಲೀಕರಿಗೆ ವರದಾನವಾಗಿದೆ. ಮೌಲ್ಯಕ್ಕಿಂತಲೂ ದಂಡ ದುಬಾರಿಯಾಗಿದ್ದರೂ ಮುಲ್ಲಾಜಿಲ್ಲದೆ ಹಣ ಪಾವತಿ ಮಾಡಿ, ಉದ್ದನೆಯ ರಶೀದಿಯೊಂದಿಗೆ ನಿಂತು ಫೋಟೋಗೆ ಫೋಸ್ ನೀಡುತ್ತಿದ್ದಾರೆ.

ವಿಜಯನಗರದಲ್ಲಿ ವರದಿಯಾದ ಮೂರು ಪ್ರಕರಣಗಳಲ್ಲಿ ಇಂತಹ ಆಸಕ್ತಿದಾಯಕ ವಿಷಯ ಕಂಡು ಬಂದಿದೆ. ಐದು ಸಾವಿರ ರೂಪಾಯಿಯೂ ಬೆಲೆ ಬಾಳದ ಆಕ್ಟಿವಾ ಹೊಂಡಾ ದ್ವಿಚಕ್ರ ವಾಹನದ ಮೇಲೆ 105 ಪ್ರಕರಣಗಳು ದಾಖಲಾಗಿದ್ದವು, ದಂಡದ ಮೊತ್ತ 53 ಸಾವಿರ ರೂಪಾಯಿ ದಾಟಿತ್ತು. ವಾಹನದ ಮಾಲೀಕರಿಗೆ ಆ ವಾಹನಯೊಂದಿಗೆ ಭಾವನಾತ್ಮಕ ನಂಟಿತ್ತು. ತಾವು ಕೆಲಸಕ್ಕೆ ಸೇರಿದ ಬಳಿಕ ಮೊದಲ ಸಂಬಳದಲ್ಲಿ ಖರೀದಿಸಿದ ವಾಹನ ಎಂಬ ಕಾರಣಕ್ಕೆ ಜೀವನದ್ದುದ್ದಕ್ಕೂ ಕಾಪಾಡಿಕೊಂಡು ಬಂದಿದ್ದರು.

ಕೇಂದ್ರ ಸರ್ಕಾರ ಸಂಚಾರಿ ನಿಯಮಗಳ ದಂಡದ ಮೊತ್ತವನ್ನು ನಾಲ್ಕು ಪಟ್ಟು ಹೆಚ್ಚಿಸಿದ ಬಳಿಕ, ಆರಂಭದಲ್ಲಿ ಅಷ್ಟೇನು ಗಂಭಿರವಾಗಿ ತೆಗೆದುಕೊಳ್ಳದೆ ಹೆಲ್ಮೆಟ್ ಧರಿಸದೆ, ಸಂಚಾರಿ ದೀಪಗಳನ್ನು ಅನುಸರಿಸದೆ ಯತ್ತೇಚವಾಗಿ ನಿಯಮಗಳನ್ನು ಉಲ್ಲಂಘಿಸಿದ್ದರು.

ಪರಿಸರ ಸ್ನೇಹಿ ಧರಿಸಿನೊಂದಿಗೆ ಸಂಸತ್ ಕಲಾಪದಲ್ಲಿ ಪ್ರಧಾನಿ ಭಾಗಿ

ಇದರಿಂದಾಗಿ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು, ದಂಡದ ಮೊತ್ತ ಅರ್ಧ ಲಕ್ಷಕ್ಕೂ ಮೀರಿತ್ತು. ರಸ್ತೆಗಳಲ್ಲಿ ಸಂಚರಿಸುವಾಗ ಪೊಲಿಸರು ವಾಹನವನ್ನು ಅಡ್ಡ ಹಾಕಿ ದಂಡ ವಸೂಲಿಗೆ ಯತ್ನಿಸುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಕಳ್ಳ ಮಾರ್ಗ ಅನುಸರಿಸುವುದು, ಕದ್ದು ಮುಚ್ಚಿ ಓಡಾಡುವುದು, ಇಲ್ಲವಾದರೆ ವಾಹನವನ್ನು ಮೂಲೆಯಲ್ಲಿ ನಿಲ್ಲಿಸಿ ತುಕ್ಕು ಹಿಡಿಸುವುದು ಅವರಿಗೆ ಅನಿವಾರ್ಯವಾಗಿತ್ತು.

ಹಾಗೆಂದು ಅಷ್ಟು ದುಬಾರಿ ದಂಡ ಪಾವತಿಸಲು ಮನಸ್ಸು ಒಪ್ಪುತ್ತಿರಲಿಲ್ಲ. ಇತ್ತ ವಾಹನವನ್ನು ಕಳೆದುಕೊಳ್ಳಲು ಭಾವನಾತ್ಮಕವಾಗಿ ಸಾಧ್ಯವಾಗದೆ ತೊಳಲಾಟದಲ್ಲಿದ್ದರು. ಅವರಿಗೆ ಈಗ ನಿರಾಳ ಭಾವನೆ ಮೂಡಿದೆ. ಪೊಲೀಸ್ ಠಾಣೆಗೆ ತೆರಳಿ ದಂಡ ಪಾವತಿಸಿ ತಮ್ಮ ವಾಹನವೊಂದೆ ಉದ್ದನೆಯ ರಸೀದಿ ಹಿಡಿದು ಹೆಮ್ಮೆಯಿಂದ ಫೋಸು ಕೊಟ್ಟಿದ್ದಾರೆ.

ಇದೇ ರೀತಿ 10 ಸಾವಿರ ರೂಪಾಯಿಯೂ ಬಾಳದ ಮತ್ತೊಂದು ವಾಹನದ ಮೇಲೆ 75 ಪ್ರಕರಣಗಳಲ್ಲಿ 21 ಸಾವಿರ ದಂಡವಿತ್ತು. ಮತ್ತೊಬ್ಬರ ವಾಹನದ ಮೇಲೆ 52 ಸಾವಿರದಷ್ಟಿದ್ದ ದಂಡದ ಪ್ರಮಾಣ 26 ಸಾವಿರಕ್ಕಿಳಿದಿತ್ತು.

ಭಯೋತ್ಪಾದಕರ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ

ಇಂತಹ ಅನೇಕರು ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಿದ್ದಾರೆ. ಇನ್ನೂ ಮುಂದೆ ತಮ್ಮ ನೆಚ್ಚಿನ ವಾಹನಗಳೊಂದಿಗೆ ಧೈರ್ಯವಾಗಿ ಸಂಚರಿಸಬಹುದು ಎಂಬ ಸಮಧಾನ ಒಂದೆಡೆಯಾದರೆ, ದುಬಾರಿ ದಂಡದ ಬಿಸಿ ಕಲಿಸಿದ ಪಾಠ ಇನ್ನೂ ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಕಠಿಣ ಎಚ್ಚರಿಕೆಯನ್ನೇ ನೀಡಿದೆ.

ಬಹಳಷ್ಟು ಮಂದಿ ಹಳೆಯ ಮಾದರಿಯ ವಾಹನಗಳ ಮೇಲೆ ಇದ್ದ ದಂಡವನ್ನು ಪಾವತಿಸಿ ಭಾವನಾತ್ಮಕ ವಾಹನಗಳೊಂದಿಗೆ ಖಷಿಯಿಂದ ಸವಾರಿ ಮಾಡುವ ಅವಕಾಶ ಪಡೆದಿದ್ದಾರೆ.

50 crore, traffic, fine, collection, Bengaluru,

Articles You Might Like

Share This Article