ಹೆಚ್ಚು ಅಪಘಾತವಾಗುವ 50 ತಾಲ್ಲೂಕುಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನಕ್ಕೆ 5 ಕೋಟಿ ರೂ. ಅನುದಾನ

Social Share

ಬೆಂಗಳೂರು,ಸೆ.19- ರಾಮನಗರ, ಕನಕಪುರ, ಮದ್ದೂರು, ದೇವನಹಳ್ಳಿ, ಹೊಸಕೋಟೆ ಸೇರಿದಂತೆ ರಾಜ್ಯದ 50 ತಾಲ್ಲೂಕುಗಳಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ 50 ತಾಲ್ಲೂಕುಗಳಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಒಂದು ದಿನದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ನಡೆಸಲು ತೀರ್ಮಾನಿಸಿದ್ದು, ಇದಕ್ಕಾಗಿ 5 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಚಿತ್ರಗಳು, ಕಿರುಚಿತ್ರಗಳ ಪ್ರದರ್ಶನ, ಘೋಷ ವಾಖ್ಯಗಳ ಘೋಷಣೆ, ಬಸ್ಸು, ಟೆಂಫೋ, ಲಾರಿ ನಿಲ್ದಾಣಗಳಲ್ಲಿ ಬೀದಿನಾಟಕ, ಎಲ್‍ಇಡಿ ವಾಹನದ ಮೂಲಕ ರಸ್ತೆ ಸುರಕ್ಷತಾ ಕಿರುಚಿತ್ರಗಳ ಪ್ರದರ್ಶನ, ರಸ್ತೆ ಸುರಕ್ಷತಾ ಗೀತೆಗಳ ಗಾಯನ, ಅಪಘಾತಗಳಿಂದಾಗುವ ಅಡ್ಡಪರಿಣಾಮಗಳ ಮತ್ತು ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಎಲ್ಲ ಇಲಾಖೆಯ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಅಕಾರಿಗಳಿಂದ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ಒದಗಿಸುವುದು, ಸುವರ್ಣ ಸಮಯದ ಬಗ್ಗೆ ತಿಳುವಳಿಕೆ ಮೂಡಿಸುವುದು ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಪ್ರತಿ ತಾಲ್ಲೂಕಿಗೆ 10 ಲಕ್ಷ ರೂ.ನಂತೆ ಹಣ ಒದಗಿಸಲಾಗಿದೆ. ಪಿರಿಯಾಪಟ್ಟಣ, ಕಲಬುರಗಿ, ಬಾಲ್ಕಿ, ವಿಜಯಪುರ, ಚಿಂತಾಮಣಿ, ಯರಗಟ್ಟಿ, ಜೇವರ್ಗಿ, ಹುಮ್ನಾಬಾದ್, ಸಿಂದಗಿ, ಗೌರಿಬಿದನೂರು, ಸಿಂದನೂರು, ಬಾಗಲಕೋಟೆ, ಇಳಕಲ್, ಕಲ್ಲಘಟಗಿ ತಾಲ್ಲೂಕುಗಳನ್ನು ಹೆಚ್ಚು ಅಪಘಾತವಾಗುವ ಪ್ರದೇಶಗಳೆಂದು ಗುರುತಿಸಲಾಗಿದೆ.

ನವಲಗುಂದ, ಯಲ್ಲಾಪುರ, ನಾಗಮಂಗಲ, ಸಕಲೇಶಪುರ, ಶ್ರೀನಿವಾಸಪುರ, ಚೆನ್ನಗಿರಿ, ಕೊರಟಗೆರೆ, ಬಂಟ್ವಾಳ, ಹೊಳಲ್ಕೆರೆ, ಗುಂಡ್ಲುಪೇಟೆ, ಯಳಂದೂರು, ಕೂಡ್ಲಿಗಿ, ತರೀಕೆರೆ, ಕುಂದಾಪುರ, ಲಿಂಗಸಗೂರು, ಹುನಗುಂದ ಹೆಚ್ಚು ಅಪಘಾತ ಸಂಭವಿಸುವ ತಾಲ್ಲೂಕುಗಳಾಗಿವೆ.

ಶಿವಮೊಗ್ಗ, ಧಾರವಾಡ, ಹೊನ್ನಾವರ, ಚನ್ನರಾಯಪಟ್ಟಣ, ಮುಳಬಾಗಿಲು, ಹರಿಹರ, ತಿಪಟೂರು, ಹಿರಿಯೂರು, ಮೊಳಕಾಲ್ಮೂರು, ಕೊಳ್ಳೆಗಾಲ, ಶಿರಗುಪ್ಪ, ಬಳ್ಳಾರಿ, ಉಡುಪಿ, ಹೊಸಪೇಟೆ ತಾಲ್ಲೂಕುಗಳಲ್ಲಿ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

Articles You Might Like

Share This Article