ಕಳೆದ 8 ವರ್ಷದಲ್ಲಿ ದ್ವೇಷಾಧಾರಿತ ಭಾಷಣಗಳ ಪ್ರಮಾಣ ಶೇ.500 ರಷ್ಟು ಹೆಚ್ಚಳ

Social Share

ನವದೆಹಲಿ, ನ.16- ಕಳೆದ 8 ವರ್ಷಗಳಿಂದ ದೇಶದಲ್ಲಿ ರಾಜಕೀಯ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದ್ವೇಷಾಧಾರಿತ ಭಾಷಣಗಳ ಪ್ರಮಾಣ ಶೇ. 500 ರಷ್ಟು ಹೆಚ್ಚಾಗಿದೆ ಎಂದು ವರದಿ ಸಲ್ಲಿಸಲಾಗಿದೆ. ಸಚಿವ ಸ್ಥಾನದಂತಹ ಜವಾಬ್ದಾರಿಯಲ್ಲಿರುವವರು ಸೇರಿದಂತೆ ಹಲವಾರು ಮಂದಿ ದ್ವೇಷಪೂರಿತ ಭಾಷಣಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಬುಲಂದರೇಶ್ವರದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ವೇಳೆ ಅರ್ಜಿದಾರರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಸಚಿವರೊಬ್ಬರು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದರು.
ಈ ವಿಚಾರಣೆ ವೇಳೆ ಹಲವಾರು ಮಾಹಿತಿಗಳು ಬೆಳಕಿಗೆ ಬಂದಿವೆ. 2014ರ ಮೇ ವೇಳೆಗೆ ದೇಶದಲ್ಲಿ 21 ದ್ವೇಷಪೂರಿತ ಭಾಷಣದ ಪ್ರಕರಣಗಳು ದಾಖಲಾಗಿದ್ದವು.

ಡಾನ್ಸ್ ಮಾಡಲು ನಿರಾಕರಿಸಿದ ಇಬ್ಬರ ಮೇಲೆ ಗುಂಡಿನ ದಾಳಿ

ಪ್ರಸ್ತುತ 45 ರಾಜಕಾರಣಿಗಳು ಮತ್ತು ಗಣ್ಯರ ಮೇಲೆ 124 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಪ್ರಮುಖವಾಗಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರಿಂದ ನೀಡಲ್ಪಟ್ಟಿರುವ ಅಳಿಸಿ ಹಾಕಿ ಎಂಬ ಹೇಳಿಕೆ ಗಮನಾರ್ಹವಾಗಿದೆ.
ಈ ರೀತಿ ಹೇಳಿಕೆಗಳ ಹಿಂದೆ ಗುಪ್ತ ಕಾರ್ಯಸೂಚಿ ಮತ್ತು ಕ್ರೌರ್ಯವನ್ನು ಹೆಚ್ಚಿಸುವ ದುರದ್ದೇಶ ಅಡಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಭಾಷಣಗಳು ವೈರಲ್ ಆಗಿ ಸಮಾಜದ ಶಾಂತಿ ಕೆಡಸುತ್ತಿವೆ ಎಂದು ಆರೋಪಿಸಲಾಗಿದೆ. ಈಗಿರುವ ಕಾನೂನುಗಳು ಈ ರೀತಿಯ ಭಾಷಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ನಿಷ್ಪಕ್ಷಪಾತ ಮತ್ತು ಪರಿಣಾಮಕಾರಿ ಕಾನೂನು ಜಾರಿಯಾಗುತ್ತಿಲ್ಲ. ಹೀಗಾಗಿ ದ್ವೇಷ ಹರಡುವ ಪ್ರಕರಣಗಳ ತನಿಖೆಗಾಗಿ ಓಂಬಡ್ಸ್ ಮನ್ ಅಗತ್ಯವಿದೆ. ನ್ಯಾಯಾಲಯದ ನೇರ ಉಸ್ತುವಾರಿಗಳಲ್ಲಿ ತನಿಖೆ ನಡೆಯಬೇಕು ಎಂದು ಮನವಿ ಮಾಡಲಾಗಿದೆ.

ಕ್ಯಾನ್ಸರ್‌ಗೆ ನಕಲಿ ಔಷಧಿ ತಯಾರಿಸುತ್ತಿದ್ದ ವೈದ್ಯರು ಸೇರಿ 7 ಮಂದಿ ಬಂಧನ

ಸಚಿವರು, ಶಾಸಕರು ಹಾಗೂ ಗಣ್ಯರ ಭಾಷಣಗಳಿಗೆ ನೀತಿ ಸಂಹಿತೆಯ ಚೌಕಟ್ಟು ರೂಪಿಸುವ ಕಾನೂನು ಅಗತ್ಯ ಇದೆ ಎಂದು ಅರ್ಜಿದಾರರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದಾರೆ.

Articles You Might Like

Share This Article