5,000 ನ್ಯಾಯಾಧೀಶರ ಕೊರತೆಯಿಂದ ಬಾಕಿ ಉಳಿದಿವೆ 2.81 ಕೋಟಿ ಪ್ರಕರಣಗಳು..!

Spread the love

Judge-02

ನವದೆಹಲಿ, ಜ.15- ಭಾರತದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ 2.81 ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ ಹಾಗೂ ಸುಮಾರು 5,000 ನ್ಯಾಯಾಧೀಶರ ಕೊರತೆ ಇದೆ. ಸುಪ್ರೀಂಕೋರ್ಟ್‍ನಿಂದ ನೀಡಲಾಗಿರುವ ಎರಡು ವರದಿಗಳಲ್ಲಿ ಗಂಭೀರ ಚಿಂತನೆಗೆ ಎಡೆ ಮಾಡಿಕೊಡುವ ಈ ಅಂಕಿ-ಅಂಶಗಳಿವೆ.  ಭಾರತೀಯ ನ್ಯಾಯಾಂಗ ವಾರ್ಷಿಕ ವರದಿ 2015-16 ಹಾಗೂ ಭಾರತದ ಕೆಳ ನ್ಯಾಯಾಲಯಗಳು : ನ್ಯಾಯ ನಿರ್ಣಯ ಪಡೆಯುವ ಕುರಿತು ಒಂದು ವರದಿ 2016-ಈ ಎರಡು ವರದಿಗಳಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಕೊರತೆಗಳನ್ನು ವಿವರಿಸಲಾಗಿದೆ. ಮುಂಬರುವ ವರ್ಷಗಳಲ್ಲಿ 15,000ಕ್ಕೂ ಹೆಚ್ಚು ನ್ಯಾಯಾಧೀಶರನ್ನು ನೇಮಕ ಮಾಡಿ ಈ ಗಂಭೀರ ಬಿಕ್ಕಟ್ಟನ್ನು ನಿವಾರಿಸಲು ನ್ಯಾಯಾಂಗ ಮಾನವ ಸಂಪನ್ಮೂಲವನ್ನು ಏಳು ಪಟ್ಟು ಹೆಚ್ಚಿಸುವ ಅಗತ್ಯವಿದೆ ಎಂಬ ಸಲಹೆಗಳನ್ನು ಈ ಎರಡು ವರದಿಗಳು ನೀಡಿವೆ.

ಈ ಗಂಭೀರ ಸನ್ನಿವೇಶವನ್ನು ನಿಭಾಯಿಸಲು ಮುಂದಿನ ಮೂರು ವರ್ಷಗಳಲ್ಲಿ 15,000ಕ್ಕೂ ಹೆಚ್ಚು ನ್ಯಾಯಾಧೀಶರ ಅಗತ್ಯವಿದೆ ಎಂದು ವರದಿಗಳಲ್ಲಿ ಮುಖ್ಯವಾಗಿ ಪ್ರಸ್ತಾಪಿಸಲಾಗಿದ್ದು, ನ್ಯಾಯಾಲಯಗಳಲ್ಲಿರುವ ನ್ಯಾಯಾಂಗ ಅಧಿಕಾರಿಗಳ ಕೊರತೆ, ಹಾಗೂ ಇನ್ನಿತರ ಪ್ರಮುಖ ನ್ಯೂನತೆಗೆಳ ಮೇಲೆ ಬೆಳಕು ಚೆಲ್ಲಲಾಗಿದೆ.  ದೇಶದಾದ್ಯಂತ ಇರುವ ಜಿಲ್ಲಾ ನ್ಯಾಯಾಲಯಗಳಲ್ಲಿ ಜುಲೈ 1, 2015 ರಿಂದ ಜೂನ್ 30, 2016ರ ನಡುವಣ ಅವಧಿಯಲ್ಲಿ 1,89,04,222 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಆದರೆ, ಇನ್ನೂ 2,81,25,066 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೆಳ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆಯೇ ಇಷ್ಟು ದೊಡ್ಡ ಪ್ರಮಾಣದ ವಿವಾದಗಳು ಬಾಕಿ ಉಳಿಯಲು ಕಾರಣ. ನ್ಯಾಯಾಲಯಗಳಲ್ಲಿ 21,324 ನ್ಯಾಯಾಧೀಶರ ಸಾಮಥ್ರ್ಯ ಹೆಚ್ಚಿಸಲು ಅನುಮೋದನೆ ನೀಡಿದಾಗಲೇ ಅವುಗಳಲ್ಲಿ 4,954 ನ್ಯಾಯಾಧೀಶರ ಕೊರತೆ ಇತ್ತು ಎಂಬ ಗಂಭೀರ ವಿಷಯವನ್ನೂ ಸಹ ಈ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin