ಕರ್ನಾಟಕದಲ್ಲಿ ಕರೋನಾ ತಾಂಡವ..! ಒಂದೇ ದಿನ 515 ಪಾಸಿಟಿವ್, ಬೆಚ್ಚಿಬಿದ್ದ ಉಡುಪಿ..!

ಬೆಂಗಳೂರು-ಕರ್ನಾಟಕದಲ್ಲಿ ಇಂದು ಒಂದೇ ದಿನ 515 ಹೊಸ ಪ್ರಕರಣಗಳು ಪತ್ತೆಯಾಗಿವೆ.ಇದು ಇಲ್ಲಿಯವರೆಗೂ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣಗಳಾಗಿವೆ.

ಈ ಮೂಲಕ ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 4,835 ಕ್ಕೇರಿದೆ.ಇಂದಿನ 515 ಪ್ರಕರಣಗಳ ಪೈಕಿ 482 ಮಂದಿ ಹೊರಗಿನಿಂದ ಬಂದವರೇ ಆಗಿದ್ದಾರೆ
ಈ ನಡುವೆ, ಶುಕ್ರವಾರ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಅದರಲ್ಲೂ ಕಳೆದ 3 ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದ ಉಡುಪಿಯಲ್ಲಿ ಇಂದು ಕೂಡ 204 ಹೊಸ ಪ್ರಕರಣಗಳು ದೃಢವಾಗಿದೆ.

ಇದರಿಂದ ಕೃಷ್ಣನಗರಿ ಜನತೆಯಲ್ಲಿ ಭೀತಿ ಮೂಡಿಸಿದೆ.
ಯಾದಗಿರಿಯಲ್ಲೂ 74 ಜನರಿಗೆ ಸೋಂಕು ಅಂಟಿಕೊಂಡಿದೆ.

ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ
ಪ್ರಕಟಣೆಯಲ್ಲಿ ಕಲಬುರಗಿ 42, ಬೀದರ್​​ 39, ವಿಜಯಪುರ 53, ಬೆಂಗಳೂರು ನಗರದಲ್ಲಿ 10, ಬೆಳಗಾವಿ 36, ಮಂಡ್ಯ 13, ಬೆಂಗಳೂರು ಗ್ರಾಮಾಂತರ 12, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ಚಿಕ್ಕಬಳ್ಳಾಪುರ 3, ಹಾಸನ 3, ಧಾರವಾಡ 3, ಹಾವೇರಿ 2, ರಾಮನಗರ 2, ದಾವಣಗೆರೆ, ಬಾಗಲಕೋಟೆ, ಬಳ್ಳಾರಿ, ಕೋಲಾರ ಜಿಲ್ಲೆಯಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿದೆ.

ಶಿವಮೊಗ್ಗ, ಚಿತ್ರದುರ್ಗ, ಗದಗ, ತುಮಕೂರು, ರಾಯಚೂರು, ಹಾಗೂ ಕೊಪ್ಪಳ, ಚಿಕ್ಕಮಗಳೂರು, ಕೊಡಗಿನಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.
ಈ ಪೈಕಿ 482 ಮಂದಿ ಅಂತರ್ ರಾಜ್ಯ ಪ್ರಯಾಣಿಕರಾಗಿದ್ದಾರೆ.

ಈ ಪೈಕಿ 482 ಮಂದಿ ಅಂತಾರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದು, 472 ಜನರು ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಓರ್ವ ವ್ಯಕ್ತಿ ಅಂತಾರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ್ದಾರೆ.

ಇಂದು ಪರೀಕ್ಷೆ ಮಾಡಿದ 13,627 ಮಾದರಿಗಳಲ್ಲಿ 12,797 ನೆಗೆಟಿವ್ ಬಂದಿದ್ದು, 36,787 ಮಂದಿ ಕಾರಂಟೈನ್‍ನಲ್ಲಿದ್ದಾರೆ. ರಾಜ್ಯದಲ್ಲಿ ಇದುವರೆಗೂ 3,60,720 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಒಟ್ಟು 3,49,951 ಮಾದರಿಗಳು ನೆಗೆಟಿವ್ ಬಂದಿದೆ. 4,835 ಪಾಟಿಸಿಟಿವ್ ವರದಿಗಳು ದೃಢವಾಗಿದೆ.

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂದು 64 ಮಾದರಿಗಳನ್ನು ತಪಾಸಣೆ ಮಾಡಲಾಗಿದೆ. ಒಟ್ಟಾರೆ ಈವರೆಗೆ ಏರ್ ಪೋರ್ಟ್‍ನಲ್ಲಿ 14,6731 ತಪಾಸಣೆ ಮಾಡಿದ್ದಾರೆ.

ಒಟ್ಟು 768 ಪ್ರಕರಣಗಳಿಂದ ಉಡುಪಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, 552 ಪ್ರಕರಣಗಳೊಂದಿಗೆ ಕಲಬುರಗಿ ಎರಡನೇ ಸ್ಥಾನದಲ್ಲಿದೆ. 434 ಪ್ರಕರಣಗಳಿಂದ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಯಾದಗಿರಿ, ರಾಯಚೂರು, ಮಂಡ್ಯ, ಬೆಳಗಾವಿ ನಂತರದ ಸ್ಥಾನಗಳಲ್ಲಿವೆ.

Sri Raghav

Admin