58 ಜಿಂಕೆ ಕೊಂಬು ವಶ, ಮೂವರ ಬಂಧನ

CCB-Police

ಬೆಂಗಳೂರು, ಮಾ.28-ನಗರದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 58 ಜಿಂಕೆ ಕೊಂಬುಗಳು ಮತ್ತು ಆಟೋವನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ ವಿನೋದ್ (26), ಬೆಂಗಳೂರಿನ ಹೊಸೂರು ರಸ್ತೆಯ ಮಂಜುನಾಥ ಅಲಿಯಾಸ್ ಮಂಜು (35) ಹಾಗೂ ನೆಲಮಂಗಲ ತಾಲ್ಲೂಕಿನ ಶೇಖರ್ (35) ಎಂಬುವರನ್ನು ಬಂಧಿಸಲಾಗಿದೆ.   ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಯಶವಂತಪುರ 5ನೇ ಮುಖ್ಯರಸ್ತೆ, 1ನೇ ಕ್ರಾಸ್‍ನಲ್ಲಿ ನಂ.128 ಕಟ್ಟಡದ ಬಳಿ ಜಿಂಕೆ ಕೊಂಬುಗಳನ್ನು ಆಟೋದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕ್ಷಿಪ್ರ ದಾಳಿ ನಡೆಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ ನಿರ್ದೇಶನದಂತೆ, ಡಿಸಿಪಿ ಎಚ್.ಡಿ. ಆನಂದ್‍ಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿಮಹದೇವ್ಪ ಮತ್ತು ಇನ್ಸ್‍ಪೆಕ್ಟರ್‍ಗಳಾದ ಬಿ.ರಾಜು, ಭಾನುಪ್ರಸಾದ್ ಮತ್ತು ಸಿಬ್ಬಿಂದ ಈ ಕಾರ್ಯಾಚರಣೆ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin