ನವದೆಹಲಿ,ಜು.31- ಅತಿ ವೇಗದ ಇಂಟರ್‍ನೆಟ್ ಸೇವೆಯ ವೇದಿಕೆಯಾಗಿರುವ 5ಜಿ ತರಾಂಗತರಗಳ ಹರಾಜು ಪ್ರಕ್ರಿಯೆ 6ನೇ ದಿನವೂ ಮುಂದುವರೆದಿದ್ದು, 31ನೇ ಸುತ್ತಿನಲ್ಲಿ ಬಿಡ್‍ನ ಆದಾಯ 1.5 ಲಕ್ಷ ಕೋಟಿಗೆ ತಲುಪಿದೆ.
ಭಾನುವಾರ ಬೆಳಗ್ಗೆ ಹರಾಜು ಪ್ರಕ್ರಿಯೆ ಮತ್ತೆ ಶುರುವಾಗಿದೆ. ಉತ್ತರಪ್ರದೇಶದ ಪಶ್ಚಿಮ ವೃತ್ತದ 1800 ಮೆಗಾಹಟ್ರ್ಸ್ ತರಂಗಾಂತರಗಳು ದುಬಾರಿ ಬೇಡಿಕೆಗೆ ಸೃಷ್ಟಿಸಿಕೊಂಡಿದ್ದವು. ಈಗ ಹರಾಜಿನ ಕಾವು ತಣ್ಣಗಾಗುತ್ತಿದ್ದು, ಬಹುತೇಕ ಕೊನೆಯ ಹೆಜ್ಜೆಯತ್ತ ಸಾಗಿದೆ ಎನ್ನಲಾಗಿದೆ.
ಶನಿವಾರದ ಹರಾಜಿನಲ್ಲಿ 1,49,966 ಕೋಟಿ ಬಿಡ್‍ಗಳನ್ನು ಸ್ವೀಕರಿಸಲಾಗಿತ್ತು. ರಿಲೆಯನ್ಸ್, ಜಿಯೊ, ಭಾರತಿ ಏರ್‍ಟೇಲ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಹರಾಜಿನಲ್ಲಿ ಭಾಗವಹಿಸಿವೆ. ನಿನ್ನೆ ಒಂದೇ ದಿನ 112 ಕೋಟಿ ರೂ.ಗೂ ಹೆಚ್ಚಿನ ಆದಾಯ ಹರಿದುಬಂದಿತ್ತು. ಇಂದು ಸುಮಾರು 1.5 ಲಕ್ಷ ಕೋಟಿ ಮೀರಿದ ಆದಾಯದ ನಿರೀಕ್ಷೆ ಹುಟ್ಟಿವೆ.