Saturday, September 23, 2023
Homeಇದೀಗ ಬಂದ ಸುದ್ದಿಬೆಂಗಳೂರಿನಲ್ಲಿ 5ನೇ ಬಂಗಾಳಿ ಕನ್ನಡ ಚಲನಚಿತ್ರೋತ್ಸವ

ಬೆಂಗಳೂರಿನಲ್ಲಿ 5ನೇ ಬಂಗಾಳಿ ಕನ್ನಡ ಚಲನಚಿತ್ರೋತ್ಸವ

- Advertisement -

ಬೆಂಳೂರು, ಸೆ.2- ಸತ್ಯಜಿತ್ ರೇ ಫಿಲ್ಮ್ ಸೊಸೈಟಿ ವತಿಯಿಂದ 5ನೇ ಬೆಂಗಳೂರು ಬೆಂಗಾಲಿ ಕನ್ನಡ ಚಲನಚಿತ್ರೋತ್ಸವವನ್ನು ಆರಂಭಿಸಿದ್ದು ಸೆ.3ರ ತನಕ ನಡೆಸಲು ಉದ್ದೇಶಿಸಿದೆ.ಇದು ಭಾರತದ ಅತಿದೊಡ್ಡ ಪ್ರಾದೇಶಿಕ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. 5ನೇ ಬೆಂಗಳೂರು ಬೆಂಗಾಲಿ ಕನ್ನಡ ಚಲನಚಿತ್ರೋತ್ಸವವನ್ನು ನೆನ್ನೆಯಿಂದ ಆರಂಭಿಸಲಾಗಿದೆ.

- Advertisement -

ಚಿತ್ರೋದ್ಯಮಕ್ಕೆ ಹೆಚ್ಚಿನ ಪೊ್ರೀತ್ಸಾಹ ನೀಡಲು ಮತ್ತು ಕಲೆಗೆ ಸಹಕಾರ ನೀಡಿ ಚಿತ್ರರಂಗವನ್ನು ಒಗ್ಗೂಡಿಸುವ ಕಾರ್ಯವನ್ನು ಸತ್ಯಜಿತ್ ರೇ ಫಿಲಂ ಸೊಸೈಟಿ ಮುಂಚೆಯಿಂದಲೂ ಮಾಡುತ್ತಾ ಬಂದಿದ್ದು ಈ ಬಾರಿಯ ಶನಿಮೋತ್ಸವ ಕೂಡ ಇದರ ಭಾಗವಾಗಿದೆ.

ಬೆಂಗಳೂರಿನ ಟ್ರಿನಿಟಿಯ ಲಿಡೋ ಮಾಲ್ನಲ್ಲಿ ಸತ್ಯಜಿತ್ ರೇ ಫಿಲ್ಮ್ ಸೊಸೈಟಿ ರಾಷ್ಟ್ರೀಯ ಮನ್ನಣೆ ಪಡೆದ ಕನ್ನಡ, ಹಿಂದಿ, ಬಂಗಾಳಿ ಮತ್ತು ಕಾಶ್ಮೀರಿ ಭಾಷೆಗಳ ಪುನಾಚ, ಘಾಸ್ ಜೋಮಿ, ಯಥೋಸ್ ಆಫ್ ಡಾಕ್ರ್ನೆಸ್, ಮಾಸ್ಟರ್ ಅಂಶುಮನ್, ಲೋಕಿರ್ ಪಾ,ಚಾದ್ ಮುಂತಾದ ಪ್ರಮುಖ ಚಿತ್ರಗಳು ಮೂರು ದಿನಗಳ ಕಾಲ ಪ್ರದರ್ಶನ ಕಾಣಲಿವೆ.

ಹುಟ್ಟು ಹಬ್ಬದ ಖುಷಿಯಲ್ಲಿ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ಕಿಚ್ಚ

ಕಳೆದ 2017ರಿಂದ ಸತ್ಯಜಿತ್ ರೇ ಫಿಲ್ಮ್ ಸೊಸೈಟಿ ಬೆಂಗಳೂರು ಬಂಗಾಳಿ ಕನ್ನಡ ಚಲನಚಿತ್ರೋತ್ಸವವನ್ನು ನಡೆಸಿಕೊಂಡು ಬಂದಿದ್ದು, ಅದರಂತೆ ಈ ಬಾರಿ ಸೆ.1ರಿಂದ ಎರಡು ದಿನಗಳ ಚಲನಚಿತ್ರೋತ್ಸವನ್ನು ಆರಂಭಿಸಲಾಗಿದೆ ಎಂದು ಸತ್ಯಜಿತ್ ರೇ ಫಿಲ್ಮ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಡಾ.ಮಧುಶ್ರೀ ತಿಳಿಸಿದ್ದಾರೆ.

ನಾವು ಪ್ರಖ್ಯಾತ ಚಲನಚಿತ್ರ ನಿರ್ಮಾಪಕರು, ಶ್ರೀಮಂತ ಚಲನಚಿತ್ರ ವಿಮರ್ಶಕರು ಮತ್ತು ಪ್ರಸಿದ್ಧ ನಟರೊಂದಿಗೆ ಒಳನೋಟವುಳ್ಳ ಟಾಕ್ ಶೋಗಳು ಮತ್ತು ಪ್ಯಾನಲ್ ಚರ್ಚೆಗಳೊಂದಿಗೆ ವಿಶ್ವ- ಮನ್ನಣೆ ಪಡೆದ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

#BengaliKannadaFilmFestival, #Bangalore,

- Advertisement -
RELATED ARTICLES
- Advertisment -

Most Popular