ಉಕ್ರೇನ್ ನಿಂದ ಆಗಮಿಸಿದ 249 ಭಾರತೀಯರಿದ್ದ 5ನೇ ವಿಮಾನ

Social Share

ನವದೆಹಲಿ, ಫೆ.28- ರಷ್ಯಾದ ಸೇನಾ ದಾಳಿಯ ನಡುವೆ ಉಕ್ರೇನ್‍ನಲ್ಲಿ ಸಿಲುಕಿರುವ 249 ಭಾರತೀಯ ಪ್ರಜೆಗಳೊಂದಿಗೆ ಏರ್ ಇಂಡಿಯಾದ ಐದನೇ ವಿಮಾನ ಸೋಮವಾರ ಬೆಳಿಗ್ಗೆ ದೆಹಲಿಗೆ ಬಂದಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಭಾರತವು ತನ್ನ ಪ್ರಜೆಗಳನ್ನು ಉಕ್ರೇನ್ ನ ನೆರೆಯ ರಾಷ್ಟ್ರಗಳಾದ ರೊಮೇನಿಯಾ ಮತ್ತು ಹಂಗೇರಿಯಿಂದ ಸ್ಥಳಾಂತರಿಸಲು ಶನಿವಾರದಿಂದ ಪ್ರಾರಂಭಿಸಿದೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನದಲ್ಲಿ ಇದುವರೆಗೆ ಐದು ಸ್ಥಳಾಂತರಿಸುವ ವಿಮಾನಗಳಲ್ಲಿ ಒಟ್ಟು 1,156 ಭಾರತೀಯ ಪ್ರಜೆಗಳನ್ನು ಆಪರೆಷನ್ ಗಂಗಾದಡಿ ಕರೆ ತರಲಾಗಿದೆ.
ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‍ನಿಂದ ಇಂದು ಬೆಳಗ್ಗೆ 249 ಪ್ರಜೆಗಳಿದ್ದ ವಿಮಾನ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಇದೇ ದಿನ ಮತ್ತೊಂದು ವಿಮಾನ ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ತಾಯ್ನಾಡಿಗೆ ಆಗಮಿಸಿರುವ ವಿದ್ಯಾರ್ಥಿಗಳು ಹಾಗೂ ನಾಗರಿಕರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ನಮ್ಮಂತೆ ಇನ್ನೂ ಹಲವು ಮಂದಿ ಕ್ಯಿವ್ ಹಾಗೂ ಇತರ ಪ್ರದೇಶಗಳಲ್ಲಿ ಸಿಲುಕಿದ್ದಾರೆ. ಸಂಘರ್ಷ ಪೀಡಿತ ಪ್ರದೇಶದಲ್ಲಿ ಭಾರತೀಯ ಮೂಲದ ತಾಯಿ ಮತ್ತು ಮಗು ಸಿಲುಕಿದೆ. ಅವರನ್ನು ಸುರಕ್ಷಿತವಾಗಿ ಕರೆ ತರುವಂತೆ ಮನವಿ ಮಾಡಿದ್ದಾರೆ.

Articles You Might Like

Share This Article