6ನೇ ಬಾರಿ ಗ್ರ್ಯಾಮಿ ಪ್ರಶಸ್ತಿ ವಂಚಿತ ಅನೌಷ್ಕ ಶಂಕರ್, ಅಡೆಲ್‍ಗೆ 5 ಪುರಸ್ಕಾರ

Award--01

ಲಾಸ್ ಏಂಜೆಲಿಸ್, ಫೆ.13-ವಿಶ್ವವಿಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಪುತ್ರಿ ಅನೌಷ್ಕ ಶಂಕರ್ ಆರನೇ ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ.
ಅಮೆರಿಕದ ಲಾಸ್ ಏಂಜಲಿಸ್‍ನಲ್ಲಿ ಕಳೆದ ರಾತ್ರಿ ನಡೆದ 2017ನೇ ಸಾಲಿನ ವರ್ಣರಂಜಿತ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಬ್ರಿಟಿಷ್ ಗಾಯಕಿ ಅಡೆಲ್ ಅತ್ಯುತ್ತಮ ಪಾಲ್ ಸೋಲೊ, ವೋಕಲ್ ಅಲ್ಬಂ ಸೇರಿದಂತೆ ಎಲ್ಲ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಪ್ರತಿಭಾನ್ವಿತ ಗಾಯಕ ಬೆಯೊನ್ಸ್ ಏರಡು ಪ್ರಶಸ್ತಿಗಳಿಗೆ ತೃಪ್ತರಾಗಬೇಕಾಯಿತು.

ಸಿತಾರ್ ವಾದಕಿ ಅನೌಷ್ಕ ಈ ಸಾಲಿನ ಪುರಸ್ಕಾರಕ್ಕಾಗಿ ನಾಮನಿರ್ದೇಶನಗೊಂಡಿದ್ದರೂ, ಆ ಗೌರವಕ್ಕೆ ಪಾತ್ರವಾಗುವ ಅದೃಷ್ಟ ಒಲಿಯಲಿಲ್ಲ. ಜಾಗತಿಕ ನಿರಾಶ್ರಿತರ ಬಿಕ್ಕಟ್ಟು ಕುರಿತ ಲ್ಯಾಂಡ್ ಆಫ್ ಗೋಲ್ಡ್ ಆಲ್ಬಂಗಾಗಿ 35 ವರ್ಷದ ಅನೌಷ್ಕ ಹೆಸರನ್ನು ಪರಿಗಣಿಸಲಾಗಿತ್ತು (ನಾಮಿನೇಷನ್). ಆದರೆ ವಿಶ್ವ ಸಂಗೀತ ವಿಭಾಗದ ಈ ಪ್ರಶಸ್ತಿಯು ಸಿಂಗ್ ಮಿ ಹೋಮ್‍ಗಾಗಿ ಸಂಗೀತ ಸಾಧಕರಾದ ಯೋ ಯೋ ಮಾ ಅವರಿಗೆ ಲಭಿಸಿದೆ. ತಬಲಾ ವಾದಕ ಸಂದೀಪ್ ಈ ತಂಡದಲ್ಲಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಈ ಪ್ರಶಸ್ತಿಯೊಂದಿಗೆ ಯೋ ಯೋ ಮಾ ಇದುವರೆಗೂ 19 ಗ್ರ್ಯಾಮಿ ಪುರಸ್ಕಾರ ಪಡೆದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin