ಜಕಾರ್ತ, ಜ.16- ಪಶ್ಚಿಮ ಇಂಡೋನೇಷ್ಯಾದಲ್ಲಿ ಇಂದು ಬೆಳಗ್ಗೆ ಪ್ರಬಲವಾದ ಭೂಕಂಪ ಸಂಭವಿಸಿದೆ.
ಸುಮಾರು 6.0 ತೀವ್ರತೆಯ ಭೂಕಂಪವು ಸಿಂಗಿಲ್ನ ಆಗ್ನೇಯಕ್ಕೆ ಅಚೆ ಪ್ರಾಂತ್ಯದ ಕರಾವಳಿ ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದು ಭೂಮಿಯ 48 ಕಿಲೋಮೀಟರ್ ಆಳದಲ್ಲಿದೆ ಕಂಪನವಾಗಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ.
ಆದರೆ ಇಂಡೋನೇಷ್ಯಾದ ಹವಾಮಾನ ಇಲಾಖೆ ಮತ್ತು ಜಿಯೋಫಿಸಿಕ್ಸ್ ಏಜೆನ್ಸಿಯಿಂದ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಇಂಡೋನೇಷ್ಯಾದ ವಿಶಾಲವಾದ ದ್ವೀಪಸಮೂಹದಲ್ಲಿ 270 ಮಿಲಿಯನ್ಗಿಂತಲೂ ಹೆಚ್ಚು ಜನರು ವಾಸಿಸುತ್ತಿದ್ದು , ರಿಂಗ್ ಆಫ್ ಫೈಯರ್ನ ಪದರದಲ್ಲಿದ್ದು ಇದರಿಂದ ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಪೋಟ ಘಟನೆಗಳು ನಡೆಯುತ್ತಿರುತ್ತದೆ.
ಸಿದ್ದರಾಮಯ್ಯ ಆಡಳಿತದಲ್ಲಿ ಭರವಸೆ ಉಚಿತ, ಸಾಲ ಖಚಿತ
ಕಳೆದ ನವೆಂಬರ್ 21 ರಂದು ಪಶ್ಚಿಮ ಜಾವಾದ ಸಿಯಾಂಜೂರ್ ನಗರದಲ್ಲಿ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಸುಮಾರು 331 ಜನರು ಸಾವನ್ನಪ್ಪಿದರು ಮತ್ತು ಸುಮಾರು 600 ಜನರು ಗಾಯಗೊಂಡರು.
ಇಂದಿನ ಕಂಪನದಲ್ಲಿ ಗಂಭೀರ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ತಕ್ಷಣದ ವರದಿಗಳಿಲ್ಲ.
Indonesia, Earthquake, Magnitude,