ಬೆಂಗಳೂರು,ಜ.14- ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರ ಮೊಬೈಲ್ ಹಾಗೂ ಹಣ ಕಳ್ಳತನ ಮಾಡುತ್ತಿದ್ದ ಮತ್ತು ಕಳವು ಮಾಲು ಸ್ವೀಕರಿಸುತ್ತಿದ್ದ ಆರು ಮಂದಿಯನ್ನು ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿ30 ಲಕ್ಷ ರೂ. ಬೆಲೆಯ 150 ಮೊಬೈಲ್ ಫೋನ್ ಹಾಗೂ 25 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಜಾಫರ್ ಸಿದ್ದಿಕ್ ಅಲಿಯಾಸ್ ಜಾಫರ್ (26), ಸೈಯದ್ ಅಖಿಲ್ ಅಲಿಯಾಸ್ ಸಮೀರ್ (40), ರೆಹಮಾನ್ ಶರೀಫ್ (42), ಮುಸ್ತಾಕ್ ಅಹಮದ್ ಅಲಿಯಾಸ್ ಮುಸ್ತಾಕ್ ಅಲಿಯಾಸ್ ಮುಸ್ತಿ (45), ಇಮ್ರಾನ್ ಪಾಷಾ (34) ಮತ್ತು ರಫೀಕ್ ಅಹಮ್ಮದ್ ಅಲಿಯಾಸ್ ಮೌಲ (38) ಬಂಧಿತರು.
ಈ ಪ್ರಕರಣದಲ್ಲಿ ಮೊಹಮ್ಮದ್ ಜವಾನ್, ನಹೀಂ ಪಾಷ, ಅಫ್ಜಲ್ , ಸಂಶೀರ್ ಪಾಷಾ, ಮುಜಾಯೀದ್ ಪಾಷಾ ಮತ್ತು ವಾಸೀಮ್ ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರೆದಿದೆ. ಹೊಸೂರು ರಸ್ತೆ ಮೂಲಕ ಸೆಂಟ್ಜಾನ್ಸ್ ಕಡೆಗೆ ಹೋಗುವ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಜೇಬಿನಿಂದ 50 ಸಾವಿರ ಹಣವನ್ನು ಕಳ್ಳತನ ಮಾಡಿದ್ದ ಬಗ್ಗೆ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬ ಅವರ ನಿರ್ದೇಶನದಲ್ಲಿ ಮೈಕೋಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮಾರುತಿ ಜಿ.ನಾಯಕ ಅವರನ್ನೊಳಗೊಂಡ ಸಿಬ್ಬಂದಿ ತಂಡವನ್ನು ರಚಿಸಲಾಗಿತ್ತು.
ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಸದಿದ್ರೆ ಜೆಡಿಎಸ್ ಪಕ್ಷ ವಿಸರ್ಜಿಸುತ್ತೇನೆ : ಹೆಚ್ಡಿಕೆ
ಈ ವಿಶೇಷ ತಂಡವು ಆರೋಪಿಗಳ ಚಲನವಲನಗಳ ಬಗ್ಗೆ ಕಲೆ ಹಾಕಿ ಆರು ಮಂದಿ ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳು ಆರು ತಿಂಗಳಿನಿಂದ ನಗರದ ವಿವಿಧ ಏರಿಯಾಗಳಲ್ಲಿ ಸಂಚರಿಸುವ ಬಿಎಂಟಿಸಿ ಬಸ್ನಲ್ಲಿ ಜನಸಂದಣಿ ಇರುವುದನ್ನು ಗಮನಿಸಿ ಅಂತಹ ಬಸ್ಗಳಲ್ಲಿ ಪ್ರಯಾಣಿಕರಂತೆ ಸಂಚರಿಸಿ ಸಾರ್ವಜನಿಕರ ಮೊಬೈಲ್ಗಳನ್ನು ಮತ್ತು ಹಣವನ್ನು ಕಳವು ಮಾಡುತ್ತಿದ್ದದು ವಿಚಾರಣೆಯಿಂದ ಗೊತ್ತಾಗಿದೆ.
ಕಳವು ಮಾಡುತ್ತಿದ್ದ ಮೊಬೈಲ್ಗಳನ್ನು ವಿಲೇವಾರಿ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಪೊಲೀಸರು ಕಳವು ಮೊಬೈಲ್ಗಳನ್ನು ಮಾರಾಟ ಮಾಡಲು ಸ್ವೀಕರಿಸುತ್ತಿದ್ದ ಗ್ಯಾಂಗ್ನ್ನು ಪತ್ತೆಹಚ್ಚಿದ್ದಾರೆ.
ಆರೋಪಿಗಳಿಂದ ಸ್ಯಾಮ್ಸಂಗ್, ವಿವೋ, ಹಾನರ್, ಒನ್ ಪ್ಲಸ್, ಒಪೊೀ, ಮೋಟಾರೊಲಾ, ರಿಯಲ್ ಮಿ, ಪೆನಾಸೋನಿಕ್, ಏಸಸ್, ಲೆನೊವೊ ಕಂಪನಿಗಳಿಗೆ ಸಂಬಂಸಿದ 30 ಲಕ್ಷ ರೂ. ಬೆಲೆ ಬಾಳುವ ಒಟ್ಟು 150 ಮೊಬೈಲ್ ಫೆÇೀನ್ಗಳನ್ನು ಹಾಗೂ 25 ಸಾವಿರ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಅಪರ ಪೊಲೀಸ್ ಆಯುಕ್ತರು ಪ್ರಶಂಸಿಸಿರುತ್ತಾರೆ.
#BengaluruPolice, #BMTC, #MobileTheft,