ಮಣಿಪುರದಲ್ಲಿ 6 ಕಾಂಗ್ರೆಸ್ ಶಾಸಕರ ರಾಜೀನಾಮೆ..!

Spread the love

ಇಂಫಾಲ್, ಆ.11- ಈಶಾನ್ಯ ರಾಜ್ಯ ಮಣಿಪುರದಲ್ಲಿ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯಾಗಿದ್ದು, ಪಕ್ಷದ ಆರು ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ.

ಪಕ್ಷದ ಆರು ಶಾಸಕರು ಧಾನ ಸಭಾಧ್ಯಕ್ಷರಿಗೆ ತಮ್ಮ ತ್ಯಾಗಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಎಂಎಲ್‍ಎ ಓ ಹೆನ್ರಿ ಸಿಂಗ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬೀರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದ ವಿಶ್ವಾಸ ಮತಯಾಚನೆಗಾಗಿ ನಿನ್ನೆ ನಡೆದ ಒಂದು ದಿನದ ವಿಧಾನಸಭೆ ವಿಶೇಷ ಅವೇಶನದ ಸಂಬಂಧ ಕಾಂಗ್ರೆಸ್ ನೀಡಿದ್ದ ವ್ಹಿಪ್‍ನನ್ನು ಈ ಆರು ಮಂದಿ ಸೇರಿದಂತೆ ಪಕ್ಷದ ಎಂಟು ಶಾಸಕರು ಉಲ್ಲಂಘಿಸಿ ಸದನಕ್ಕೆ ಗೈರಾಗಿದ್ದರು.

ನಿನ್ನೆ ನಡೆದ ವಿಶೇಷ ಅವೇಶನದಲ್ಲಿ ಮುಖ್ಯಮಂತ್ರಿ ಸಿಂಗ್ ವಿಶ್ವಾಸಮತ ಸಾಬೀತು ಪಡಿಸಿದರು. ಓ ಹೆನ್ರಿ ಸಿಂಗ್ ಅವರಲ್ಲದೇ ಒನಾಮ್ ಲುಖೋ, ಮಹಮದ್‍ಅಬ್ದುಲ್ ನಾಸಿರ್, ಪವೋನಾಮ್ ಬ್ರೋಜೆನ್, ಗಮ್‍ತಾಂಗ್ ಹಾವೋಕಿಪ್ ಹಾಗೂ ಜಿನ್‍ಸೌನ್‍ಹವು ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕರು.

ವಿಧಾನಸಭೆ ಅವೇಶನ ನಂತರ ನಿನ್ನೆ ತಡರಾತ್ರಿ ಈ ಆರು ಶಾಸಕರು ವಿಧಾನಸಭಾಧ್ಯಕ್ಷ ಯುಮ್‍ನಾಮ್‍ಕೇಮ್‍ಚಂದ್ ಸಿಂಗ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು. ಈ ಶಾಸಕರು ಇಂದು ಸಂಜೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಲಿದ್ದಾರೆ.

Facebook Comments

Sri Raghav

Admin