ಟರ್ಕಿ ರಾಜಧಾನಿ ಇಸ್ತಾನ್‍ಬುಲ್‍ನಲ್ಲಿ ಬಾಂಬ್ ಸ್ಪೋಟ, 6 ಮಂದಿ ಸಾವು

Social Share

ಇಸ್ತಾನ್‍ಬುಲï, ನ.14- ಟರ್ಕಿ ರಾಜಧಾನಿ ಇಸ್ತಾನ್‍ಬುಲ್‍ನ ಹೃದಯಭಾಗದ ಪಾದಚಾರಿ ಮಾರ್ಗವೊಂದರಲ್ಲಿ ಬಾಂಬ್ ಸ್ಪೋಟಗೊಂಡು ಆರು ಜನರು ಸಾವನ್ನಪ್ಪಿದ್ದಾರೆ,ಹಲವಾರು ಜನರು ಗಾಯಗೊಂಡಿದ್ದಾರೆ.

ಪ್ರಸಿದ್ಧವಾದ ತಕ್ಸಿಮ್ ಸ್ಕ್ವಯರ್ ಬಳಿ ಈ ಘಟನೆ ನಡೆದಿದ್ದು ರೆಸ್ಟೋರೆಂಟ್‍ಗಳಿಂದ ಕೂಡಿದ ಜನಪ್ರಿಯ ಮಾರ್ಗದಲ್ಲಿ ಬಾಂಬ್ ಸ್ಪೋಟಿಸಿದ್ದು ,ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಿ ಹತಿರದದ ಮಳಿಗೆಗಳ ಒಳಗೆ ಜೀವ ಉಳಿಸಿಕೊಳ್ಳಲು ಅವಿತುಕೊಂಡರು ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದರು.

ತುರ್ತು ವಾಹನಗಳುಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಆದರೆ 6 ಮಂದಿ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಗಾಯಗೊಂಡವರ ಸಂಖ್ಯೆಯನ್ನು 81 ಕ್ಕೆ ಏರಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.

ಸಂಗೊಳ್ಳಿ ರಾಯಣ್ಣ ಸಮಾಧಿಗೆ ತರಳಬಾಳು ಶ್ರೀಗಳಿಂದ ಗೌರವ ಪ್ರಾರ್ಥನೆ

ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಸ್ಪೋಟವನ್ನು ದೇಶ ದ್ರೋಹಿ ದಾಳಿ ಎಂದು ಕರೆದಿದ್ದಾರೆ ಮತ್ತು ಅಪರಾಧಿಗಳನ್ನು ಶಿಕ್ಷಿಸಲಾಗುವುದು, ಭಯೋತ್ಪಾದನೆ ದಾಳಿ ಶಂಕೆ ಇದೆ ಆದರೆ ್ತ ಇನ್ನೂ ಖಚಿತವಾಗಿಲ್ಲ ಎಂದು ಹೇಳಿದರು.

ಕಡಲೆಕಾಯಿ ಪರಿಷೆಯಲ್ಲಿ ಬಡವರ ಬಾದಾಮಿ ಸವಿದ ಬೆಂಗಳೂರಿಗರು

ಇಂತಹ ದಾಳಿಗಳು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ ಟರ್ಕಿಯ ಜನರ ಸುರಕ್ಷತೆಯ ಕಾಳಜಿಗೆ ಆಘಾತಕಾರಿ ಜ್ಞಾಪನೆಯಾಗಿದೆ ಎಂದು ಹೇಳಲಾಗುತ್ತಿದೆ. ಗಗನಕ್ಕೇರುತ್ತಿರುವ ಹಣದುಬ್ಬರ ಮತ್ತು ಇತರ ಆರ್ಥಿಕ ತೊಂದರೆಗಳ ಮಧ್ಯೆ, ಮುಂದಿನ ವರ್ಷ ನಡೆಯುವ ಅಧ್ಯಕ್ಷೀಯ ಮತ್ತು ಸಂಸತ್ತಿನ ಚುನಾವಣೆಗಳಿಗೆ ಎರ್ಡೋಗನ್ ಅವರ ಭಯೋತ್ಪಾದನಾ ವಿರೋಧಿ ಅಭಿಯಾನವು ಸವಾಲಾಗಿದೆ.

Articles You Might Like

Share This Article