ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ, 6 ಮಂದಿ ಸಾವು

Social Share

ಕಠ್ಮಂಡು/ನವದೆಹಲಿ, ನ.9-ನೇಪಾಳ ಗಡಿಯ ಉತ್ತರಾಖಂಡದ ಪಿಥೋರಗಢ ಸಮೀಪ ಹಿಮಾಲಯ ಪ್ರದೇಶದಲ್ಲಿ ಇಂದು ಮುಂಜಾನೆ 6.3 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ.

ಉತ್ತರ ಭಾರತ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಪ್ರಬಲ ಕಂಪನಗಳು ಸಂಭವಿಸಿದೆ, ನಸುಕಿನ 1.57ಕ್ಕೆ ಸಂಭವಿಸಿದ 6.3 ತೀವ್ರತೆಯ ಭೂಕಂಪದ ಕೇಂದ್ರಬಿಂದು ಪಿಥೋರಗಢ್‍ನಿಂದ ಪೂರ್ವ ಆಗ್ನೇಯಕ್ಕೆ 90 ಕಿಮೀ ದೂರದಲ್ಲಿರುವ ನೇಪಾಳದಲ್ಲಿದೆ ಎಂದು ಭಾರತೀಯ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‍ಸಿಎಸ್) ತಿಳಿಸಿದೆ.

ನೇಪಾಳದ ರಾಷ್ಟ್ರೀಯ ಭೂಕಂಪ ನಿಗಾ ಕೇಂದ್ರದ ಪ್ರಕಾರ 6.6 ತೀವ್ರತೆಯ ಭೂಕಂಪವು ಮುಂಜಾನೆ 2.12 ಕ್ಕೆ ಸಂಭವಿಸಿದೆ ,ದೋತಿ ಜಿಲ್ಲಾಯಲ್ಲಿ ಕೇಂದ್ರಬಿಂದು ಇತ್ತೆಂದುತಿಳಿಸಿದೆ. ನೇಪಾಳದಲ್ಲಿ ಮಂಗಳವಾರ ರಾತ್ರಿ 9.07 ಕ್ಕೆ 5.7-ತೀವ್ರತೆಯ ಕಂಪನ ಮತ್ತು 9.56 ಕ್ಕೆ 4.1-ತೀವ್ರತೆಯ ಒಂದು ಕಂಪನ ಸಂಭವಿಸಿದೆ ಹಲವು ಮನೆಗಳು ಕುಸಿದಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ನೇಪಾಳದ ದೋಟಿಯಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿಯ ಕಾರ್ಯನಿರ್ವಾಹಕ ಮುಖ್ಯಸ್ಥ ಭೋಲಾ ಭಟ್ಟ ಹೇಳಿದ್ದಾರೆ.

ದೆಹಲಿ ,ಗಾಜಿಯಾಬಾದ್,ಗುರುಗ್ರಾಮ್‍ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಲಕ್ನೋದಲ್ಲಿ ಕಂಪನದ ಅನುಭವವಾಗಿದ್ದು, ಜನರು ವಿಚಲಿತರಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನಗಳು ಸಂಭವಿಸುತ್ತಿದ್ದಂತೆ ಹಲವಾರು ಜನರು ತಮ್ಮ ಮನೆಗಳಿಂದ ಹೊರಗೆ ಧಾವಿಸಿದರು.

ಕನ್ನಡ ಚಿತ್ರರಂಗದ ಮೇರು ನಟ ಲೋಹಿತಾಶ್ವ ವಿಧಿವಶ

ನೇಪಾಳದ ದಿಪಾಯಲ್‍ನಿಂದ 21 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ (ಯುಎಸ್‍ಜಿಎಸï) ತಿಳಿಸಿದೆ. ಉತ್ತರಾಖಂಡ-ನೇಪಾಳ ಪ್ರದೇಶದಲ್ಲಿ ಮುಂಜಾನೆ 3:15 ಮತ್ತು 6:27 ಕ್ಕೆ ಲಘು ಕಂಪನಗಳು ಸಂಭವಿಸಿವೆ.

ಭಾನುವಾರ ಉತ್ತರಾಖಂಡದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಉತ್ತರಕಾಶಿಯ ಪೂರ್ವ-ಆಗ್ನೇಯಕ್ಕೆ 17 ಕಿಮೀನಲ್ಲಿ ಕೇಂದ್ರಬಿಂದುವಿತ್ತು.ನೇಪಾಳದ ಹಲವು ಪ್ರದೇಶದಲ್ಲಿ ಕಟ್ಟಡಗಳು ಕುಸಿದಿದೆ. ಜನರು ಆತಂಕಗೊಂಡಿದ್ದಾರೆ .

Articles You Might Like

Share This Article