ಅರಬ್ಬಿ ಸಮುದ್ರದಲ್ಲಿ 200 ಕೋಟಿ ರೂ. ಡ್ರಗ್ಸ್ ವಶ, 6 ಪಾಕ್ ಪ್ರಜೆಗಳ ಬಂಧನ

Social Share

ಅಹಮದಾಬಾದ್,ಸೆ.14-ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆಯಲ್ಲಿ ಇಂದು ಬೆಳಿಗ್ಗೆ ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಮೀನುಗಾರಿಕಾ ದೋಣಿಯಿಂದ 200 ಕೋಟಿ ರೂ. ಮೌಲ್ಯದ 40 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ.

ದೋಣಿಯಲ್ಲಿದ್ದ ಆರು ಪಾಕಿಸ್ತಾನಿ ಸಿಬ್ಬಂದಿಯನ್ನು ಸಹ ಬಂಧಿಸಲಾಗಿದೆ ಎಂದು ಹಿರಿಯ ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಚ್ ಜಿಲ್ಲೇಯ ಜಖೌ ಬಂದರಿನ ಬಳಿ ಕೋಸ್ಟ್ ಗಾರ್ಡ್ ಮತ್ತು ಎಟಿಎಸ್ ಜಂಟಿ ತಂಡ ಮೀನುಗಾರಿಕಾ ದೋಣಿಯನ್ನು ಸಮುದ್ರದ ಮಧ್ಯದಲ್ಲಿ ತಡೆದಿದೆ. ನಂತರ ತಪಾಸಣೆ ವೇಳೆ ಡ್ರಗ್ಸ್ ಪ್ಯಾಕೆಟ್‍ಗಳು ಪತ್ತೆಯಾಗಿವೆ.

ಮಾದಕ ಹೆರಾಯಿನ್ ಅನ್ನು ಗುಜರಾತ್ ಕರಾವಳಿಯಲ್ಲಿ ಇಳಿಸಿದ ನಂತರ ರಸ್ತೆ ಮೂಲಕ ಪಂಜಾಬ್‍ಗೆ ಸಾಗಿಸಲು ಉದ್ದೇಶಿಸಲಾಗಿತ್ತು. ನಿರ್ದಿಷ್ಟ ಸುಳಿವಿನ ಆಧಾರದ ಮೇಲೆ ನಾವು ಪಾಕಿಸ್ತಾನದಿಂದ ಹೊರಟಿದ್ದ ದೋಣಿಯನ್ನು ತಡೆದು ಪರಿಶೀಲಿಸಿದಾಗ ಮಾದಕ ವಸ್ತು ಪತ್ತೆಯಾಗಿದೆ ಎಂದು ಅಕಾರಿ ತಿಳಿಸಿದ್ದಾರೆ.

ವಶಪಡಿಸಿಕೊಂಡ ದೋಣಿಯೊಂದಿಗೆ ಎಟಿಎಸ್ ಮತ್ತು ಕೋಸ್ಟ್ ಗಾರ್ಡ್ ಅಕಾರಿಗಳು ಶೀಘ್ರವಾಗಿ ಜಖೌ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಎಟಿಎಸ್ ಮತ್ತು ಕೋಸ್ಟ್ ಗಾರ್ಡ್ ಈ ಹಿಂದೆ ಕೂಡ ಮಾದಕವಸ್ತು ಕಳ್ಳಸಾಗಣೆಯಂತಹ ಪ್ರಯತ್ನಗಳನ್ನು ವಿಫಲಗೊಳಿಸಿದ್ದರು ಮತ್ತು ಗುಜರಾತ್ ಕರಾವಳಿಯ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲು ಯೋಜಿಸಿದ್ದ ಭಾರೀ ಪ್ರಮಾಣದ ಮಾದಕವಸ್ತುಗಳೊಂದಿಗೆ ವಿದೇಶಿ ಪ್ರಜೆಗಳನ್ನು ಹಿಡಿದಿದ್ದಾರೆ.

Articles You Might Like

Share This Article