ರಾಜೀವ್‍ಗಾಂಧಿ ಹಂತಕರ ಬಿಡುಗಡೆ ಭಾಗ್ಯ

Social Share

ನವದೆಹಲಿ,ನ.11- ಮಾಜಿ ಪ್ರಧಾನಮಂತ್ರಿ ರಾಜೀವ್‍ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವ ಶಿಕ್ಷೆ ಅನುಭವಿಸುತ್ತಿದ್ದ ಆರು ಮಂದಿ ಅಪರಾಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.

ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ಬಿ.ಆರ್.ಗವೈ, ಬಿ.ವಿ.ನಾಗರತ್ನ ಅವರ ಪೀಠ ಇಂದು ತೀರ್ಪು ನೀಡಿದ್ದು, ಪ್ರಮುಖ ಆರೋಪಿಗಳಾದ ನಳಿನಿ, ಸಂತಾನ್, ಮುರುಘನ್, ಶ್ರೀಹರನ್, ರಾಬರ್ಟ್ ಪಯಾಸ್, ರವಿಚಂದ್ರನ್ ಅವರುಗಳನ್ನು ಬಂಧ ಮುಕ್ತಗೊಳಿಸಿದೆ.

ಈ ಹಿಂದೆ ಮತ್ತೊಬ್ಬ ಆರೋಪಿ ಎ.ಜಿ.ಪೆರರೀವಲನ್ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆ ವೇಳೆ ಅಪರಾಧಿಗಳು ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಗಳ ಇತ್ಯರ್ಥಕ್ಕೆ ಅನುಸರಿಸಿದ ವಿಳಂಬವನ್ನು ಉಲ್ಲೇಖಿಸಲಾಗಿತ್ತು.
ಇಂದು ಹೊಸ ಆದೇಶದಲ್ಲಿ ಆರು ಮಂದಿ ಆರೋಪಿಗಳನ್ನು ಬಿಡುಗಡೆ ಮಾಡಲು ಸೂಚಿಸಲಾಗಿದ್ದು, ಇವರ ಮೇಲೆ ಬೇರೆ ಯಾವುದೇ ಪ್ರಕರಣಗಳು ಇಲ್ಲದೇ ಇದ್ದರೆ ಬಂಧ ಮುಕ್ತಗೊಳಿಸಬಹುದು ಎಂದಿದೆ.

ಕಾರ್ಯಕ್ರಮಕ್ಕೆ ದೇವೇಗೌಡರಿಗಿಲ್ಲ ಆಹ್ವಾನ, ಜೆಡಿಎಸ್ ಆಕ್ರೋಶ

ಜೈಲಿನಲ್ಲಿ ಅಪರಾಧಿಗಳ ಸನ್ನಡತೆಯನ್ನು ನ್ಯಾಯಾಲಯ ಗಮನಿಸಿದೆ. 1991 ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಬಾಂಬ್ ಸ್ಪೋಟಿಸಿ ರಾಜೀವ್‍ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು.

Articles You Might Like

Share This Article