ಹೈದರಾಬಾದ್,ಮಾ.17- ಇಲ್ಲಿನ ಸಿಕಂದರಾಬಾದ್‍ನ ಬಹುಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆಯಿಂದಾಗಿ ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.
ಸ್ವಪ್ನಲೋಕ ಕಾಂಪ್ಲೆಕ್ಸ್ ಕಟ್ಟಡದ ಐದನೇ ಮಹಡಿಯ ಕೊಠಡಿಯಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿತ್ತು. ಸಂಪೂರ್ಣ ಹೊಗೆ ಆವರಿಸಿದ್ದ ಕಟ್ಟಕ್ಕೆ ತಲುಪಲು ಹೈಡ್ರಾಲಿಕ್ ಪ್ಲಾಟ್‍ಫಾರ್ಮ್ ಬಳಸಲಾಯಿತು.
ಕಟ್ಟಡದಲ್ಲಿದ್ದವರು ಮೊಬೈಲ್ ಟಾರ್ಚ್ ಬೆಳಗಿಸಿ ಸಹಾಯಯಾಚಿಸಿದರು. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ 12 ಜನರನ್ನು ರಕ್ಷಿಸಿದ್ದಾರೆ. ಅವರಲ್ಲಿ ಆರು ಮಂದಿ ಉಸಿರುಕಟ್ಟುವಿಕೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತರು ತೆಲಂಗಾಣದ ವಾರಂಗಲ್, ಮಹಬೂಬಾಬಾದ್ ಮತ್ತು ಖಮ್ಮಂ ಜಿಲ್ಲೆಗಳಿಗೆ ಸೇರಿದವರು. ಅವರು ಕಾಂಪ್ಲೆಕ್ಸ್‍ನಲ್ಲಿ ಕಚೇರಿ ಹೊಂದಿದ್ದ ಮಾರ್ಕೆಟಿಂಗ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬರೋಬ್ಬರಿ 4 ಸಾವಿರ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸುತ್ತಿದೆ ಕಬ್ಜ ಚಿತ್ರ
ಮೃತರೆಲ್ಲರೂ 25 ವರ್ಷದೊಳಗಿನವರಾಗಿದ್ದು, ಇತ್ತೀಚೆಗೆ ಕಂಪನಿಗೆ ಸೇರಿದ್ದರು ಎಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಹಲವಾರು ಖಾಸಗಿ ಕಚೇರಿಗಳು, ಗಾರ್ಮೆಂಟ್ಸ್ ಮತ್ತು ಎಲೆಕ್ಟ್ರಾನಿಕ್ ಅಂಗಡಿಗಳನ್ನು ಹೊಂದಿರುವ ಸಂಕೀರ್ಣದಲ್ಲಿ ರಾತ್ರಿ 7.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಎಂಟು ಅಂತಸ್ತಿನ ಕಟ್ಟಡದ ಒಂದು ಮಹಡಿಯಿಂದ ಬೃಹತ್ ಜ್ವಾಲೆಗಳು ಹೊರಬಂದಿದ್ದವು, ಹೊಗೆ ಹೊರಹೊಮ್ಮಿದ್ದರಿಂದ ಬೆಂಕಿಯನ್ನು ನಂದಿಸಲು 10 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿವೆ.
ಮಧ್ಯರಾತ್ರಿಯ ನಂತರ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿ ತಿಳಿಸಿದ್ದಾರೆ. ಕಟ್ಟಡದ ಐದನೇ ಮಹಡಿಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಜಿಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ
ಈ ಜನವರಿಯಲ್ಲಿ ಸಿಕಂದರಾಬಾದ್‍ನ ಐದು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ದೊಡ್ಡ ಬೆಂಕಿಯಲ್ಲಿ ಮೂರು ಜನರು ಸಾವನ್ನಪ್ಪಿದರು. ಬೆಂಕಿಯು ಕಟ್ಟಡವನ್ನು ಧ್ವಂಸಗೊಳಿಸಿತು ಮತ್ತು ನಂತರ ಅದನ್ನು ಕೆಡವಲಾಯಿತು.
#suffocate, #death, #massivefire, #Secunderabad, #highrisebuilding,