ಅಜ್ಜಿಗೆ ಗುಂಡಿಟ್ಟು ಕೊಂದ 6 ವರ್ಷದ ಬಾಲಕಿ

Social Share

ವಾಷಿಂಗ್ಟನ್,ಫೆ.18- ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರು ವರ್ಷದ ಬಾಲಕಿಯೊಬ್ಬಳು ತನ್ನ ಅಜ್ಜಿಯನ್ನು ಗುಂಡಿಟ್ಟು ಕೊಂದಿರುವ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಚಲಿಸುತ್ತಿದ್ದ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಬಾಲಕಿ ತನ್ನ 57 ವರ್ಷದ ಅಜ್ಜಿಯನ್ನು ಗುಂಡಿಟ್ಟು ಕೊಂದಿದ್ದಾಳೆ ಎಂದು ಫ್ಲೋರಿಡಾ ಪೊಲೀಸರು ತಿಳಿಸಿದ್ದಾರೆ.

ಅಜ್ಜಿಯ ಗನ್ ಹೊರ ತೆಗೆದ ಬಾಲಕಿ ಕಾರು ಓಡಿಸುತ್ತಿದ್ದ ತನ್ನ ಅಜ್ಜಿಯ ಬೆನ್ನಿಗೆ ಶೂಟ್ ಮಾಡಿದ್ದಾಳೆ ಗುಂಡೇಟು ಬಿದ್ದರು ಸಾವರಿಸಿಕೊಂಡ ಅಜ್ಜಿ ತುರ್ತು ಸಹಾಯವಾಣಿ ಸಂಖ್ಯೆ 911 ಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸಹಾಯವಾಣಿ ಸಿಬ್ಬಂದಿಗಳು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ನಗದುರಹಿತ ವಹಿವಾಟು ನಡೆಸಿ ದಾಖಲೆ ಬರೆದ ಭಾರತ

ಅಜ್ಜಿಗೆ ಗುಂಡಿಟ್ಟು ಕೊಂದ ಬಾಲಕಿ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕದಲ್ಲಿ ಬಂದೂಕು ಸುರಕ್ಷತೆಗೆ ಪ್ರಾಮುಖ್ಯತೆ ನೀಡದಿರುವುದು ದುರದೃಷ್ಟಕರ ಎಂದು ಪೊಲೀಸ್ ಮುಖ್ಯಸ್ಥ ಟಾಡ್ ಗ್ಯಾರಿಸನ್ ಬೇಸರ ವ್ಯಕ್ತಪಡಿಸಿದ್ದಾರೆ.

ಗಡಿಯಲ್ಲಿ ಕಳ್ಳಸಾಗಣಿಕೆ ಯತ್ನ ತಡೆದ ಬಿಎಸ್‍ಎಫ್ ಯೋಧರು

ಇತ್ತಿಚೆಗೆ ಅಮೆರಿಕದಾದ್ಯಂತ ಹಲವಾರು ಗುಂಡಿನ ದಾಳಿಗಳು ನಡೆದಿರುವುದು ಇಲ್ಲಿ ಉಲ್ಲೇಖಾರ್ಹ ವಿಚಾರವಾಗಿದೆ.

6-year-old, girl, shoots, driving, grandmother, Florida,

Articles You Might Like

Share This Article