Tuesday, January 7, 2025
Homeರಾಜಕೀಯ | Politics"ಕಾಂಗ್ರೆಸ್ ಸರ್ಕಾರದಲ್ಲಿ 60% ಕಮಿಷನ್ ನಿಗದಿಪಡಿಸಲಾಗಿದೆ": ಎಚ್ಡಿಕೆ ಗಂಭೀರ ಆರೋಪ

“ಕಾಂಗ್ರೆಸ್ ಸರ್ಕಾರದಲ್ಲಿ 60% ಕಮಿಷನ್ ನಿಗದಿಪಡಿಸಲಾಗಿದೆ”: ಎಚ್ಡಿಕೆ ಗಂಭೀರ ಆರೋಪ

"60% Commission fixed in Congress government": HDK makes serious allegations

ಬೆಂಗಳೂರು, ಜ.5– ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿ ಇಲಾಖೆಯಲ್ಲಿ ಪರ್ಸೆಂಟೇಜ್ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ, ನೀರಾವರಿ ಇಲಾಖೆ ಮಾತ್ರವಲ್ಲ ಎಲ್ಲಾ ಇಲಾಖೆಗ ಳಲ್ಲೂ ಪರ್ಸೆಂಟೇಜ್ ನಿಗದಿಪಡಿಸ ಲಾಗಿದೆ ಎಂದರು.
ಮನೆಗಳ ಹಂಚಿಕೆಗೂ ಮಂತ್ರಿಗಳಿಗೆ ಹಣ ಕೊಡಬೇಕಾದ ಪರಿಸ್ಥಿತಿ ಶುರುವಾಗಿದೆ.

ವಿಧಾನಸೌಧದಿಂದಲೇ ಪರ್ಸೆಂಟೇಜ್ ಪ್ರಾರಂಭವಾಗಿದೆ. ಮನೆ ಹಂಚಿಕೆಗೆ ಸಂಬಂಧಿಸಿದಂತೆ ಕೆಲವೊಂದು ಪಿಡಿಓ ಹಣ ಪಡೆಯುತ್ತಿದ್ದರು. ಈಗ ಸಚಿವರಿಗೇ ಹಣ ಕೊಟ್ಟು ಮನೆ ಹಂಚಿಕೆ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದ ಪರ್ಸೆಂಟೇಜ್ ಆರೋಪವನ್ನು ಈ ತನಕ ಸಾಬೀತು ಪಡಿಸಿಲ್ಲ. ಸರ್ಕಾರದ ಪರ್ಸೆಂಟೇಜ್ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಗುತ್ತಿಗೆದಾರರೇ ಆರೋಪಿಸಿದ್ದಾರೆ. ತುಮಕೂರಿನಲ್ಲಿ ಗುತ್ತಿಗೆದಾರರೊಬ್ಬರು ಶೇ.60ರಷ್ಟು ದಾಟಿದೆ ಎಂದು ಹೇಳಿದ್ದಾರೆ. ದುಡ್ಡು ತಿನ್ನಲು ಇತಿ-ಮಿತಿ ಬೇಡವೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ನೌಕರರು, ಗುತ್ತಿಗೆದಾರರು ಆತಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ ಆತಸಾಕ್ಷಿಗೆ ಉತ್ತರ ಕೊಡಿ. ನಿಮ ಪಟಾಲಂ ಬೆಂಗಳೂರಿನಲ್ಲಿ ಜನತೆಯ ಸಂಪತ್ತು ಲೂಟಿ ಮಾಡುತ್ತಿದೆ. ಮುಂದೆ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದರು.

ಆಕ್ರೋಶ: ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿದ್ದರಾಮಯ್ಯ ಸಹಿ ಮಾಡಿ ಮನೆ ಮನೆಗೆ ಗ್ಯಾರಂಟಿ ಪತ್ರ ಹಂಚಿದ್ದರು. ರಾಜ್ಯದಲ್ಲಿ ಹೆಚ್ಚಿನ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಹಮತಿ ಮೇರೆಗೆ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ ಎಂದು ಹೇಳಿದರು.

ನುಡಿದಂತೆ ನಡೆದಿದ್ದೇವೆ, ಸತ್ಯಮೇವ ಜಯತೆ ಎಂದು ಪದೇ ಪದೇ ಹೇಳುವ ನೀವು ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ಯಾವ ಸಾಧನೆ ಮಾಡಲು ಹೊರಟ್ಟೀದ್ದೀರಿ. ಬಸ್ಸಿನಲ್ಲಿ ಪ್ರಯಾಣಿಸುವವರು ಕೂಲಿ ಕಾರ್ಮಿಕರು, ರೈತರು, ಶ್ರಮಜೀವಿಗಳೇ ಹೊರತು ಸಚಿವರ ಮಕ್ಕಳಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ನಿಲ್ಲಿಸುವ ಹುನ್ನಾರ: ಗ್ಯಾರಂಟಿ ಹೆಸರಿನಲ್ಲಿ ಐದಾರು ಪಟ್ಟು ಹೆಚ್ಚಳ ಮಾಡಲಾಗಿದೆ. ಮುದ್ರಾಂಕ ಶುಲ್ಕ, ಆಸ್ತಿ ಮೌಲ್ಯ ಹೆಚ್ಚಳ, ಡೀಸೆಲ್, ಪೆಟ್ರೋಲ್ ಮೇಲಿನ ಸೆಸ್ ಏರಿಕೆ ಮಾಡಲಾಗಿದೆ. ಈಗ ಹಾಲು ಮತ್ತು ನೀರಿನ ದರವನ್ನು ಹೆಚ್ಚಿಸಲಾಗುತ್ತದೆ ಎಂಬ ಮಾಹಿತಿ ಇದೆ. ಇಂತಹ ಕೆಟ್ಟ ರೀತಿಯ ನಿರ್ಧಾರ ಮಾಡಿದ ಸರ್ಕಾರ ದೇಶದ ಇತಿಹಾಸದಲ್ಲಿ ಕಂಡಿರಲಿಲ್ಲ. ಮುಂದಿನ ದಿನಗಳಲ್ಲಿ ಸಬೂಬು ಕೊಟ್ಟು ಗ್ಯಾರಂಟಿ ಯೋಜನೆ ನಿಲ್ಲಿಸುವ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದರು.

ಗ್ಯಾರಂಟಿ ಯೋಜನೆ ನಿಲ್ಲಿಸದೇ ಮುಂದುವರಿಸಿ. ಇದರಿಂದ ಕೆಲವು ವರ್ಗದವರಿಗೆ ಅನುಕೂಲವಾಗಿದೆ. ಆದರೆ, ಮಾಂಸದ ಬೆಲೆ ದುಬಾರಿಯಾಗಿದ್ದರೂ ಖರೀದಿಸುತ್ತಾರೆ. ಬಸ್ ದರ ಏರಿಕೆಗೆ ಆಕ್ಷೇಪಿಸುತ್ತಾರೆಂಬ ಸಚಿವರೊಬ್ಬರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕುಮಾರಸ್ವಾಮಿ, ತಿಂಗಳಲ್ಲಿ ಒಮೆ ಮಕ್ಕಳ ಆಸೆ ಈಡೇರಿಸಲಾಗದ ಪರಿಸ್ಥಿತಿ ಕೆಲವು ಕುಟುಂಬಗಳಲ್ಲಿದೆ. ಮಕ್ಕಳ, ತಾಯಂದಿರ ಅಪೌಷ್ಠಿಕತೆ ನಿವಾರಣೆಗೆ ಎಷ್ಟು ಶ್ರಮ ಹಾಕುತ್ತಿದ್ದಾರೆ ಎಂಬುದನ್ನು ಸಚಿವರು ಗಮನಿಸಿದ್ದರೆ ಅಂತಹ ಹೇಳಿಕೆ ನೀಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News