ರಾಜಕೀಯ ಪಕ್ಷಾಂತರದಲ್ಲಿ ಗೋವಾ ದಾಖಲೆ

Social Share

ಪಣಜಿ, ಜ.22- ಗೋವಾದ 24 ಶಾಸಕರು ಅಂದರೆ ರಾಜ್ಯ ವಿಧಾನಸಭೆಯ 40 ಸದಸ್ಯಬಲದ ಶೇ.60ರಷ್ಟು ಸದಸ್ಯರು ಕಳೆದ ಐದು ವರ್ಷಗಳಲ್ಲಿ ಪಕ್ಷಾಂತರ ಮಾಡಿದ್ದಾರೆ ಎಂದು ಸಂಘಟನೆಯೊಂದು ನೀಡಿರುವ ವರದಿ ತಿಳಿಸಿದೆ.
ದಿ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾಮ್ರ್ಸ್ (ಎಡಿಆರ್) ತನ್ನ ವರದಿಯಲ್ಲಿ ಈ ವಿಷಯ ತಿಳಿಸಿದ್ದು, ಇದರೊಂದಿಗೆ ಭಾರತೀಯ ಪ್ರಜಾಸತ್ತೆಯ ಇತಿಹಾಸದಲ್ಲಿ ಗೋವಾ ಒಂದು ವಿಶಿಷ್ಟ ದಾಖಲೆ ಸ್ಥಾಪಿಸಿದೆ ಎಂದು ಹೇಳಿದೆ. ಫೆ.14ರಂದು ಗೋವಾ ವಿಧಾನಸಭೆ ಚುನಾವಣೆಗಳು ನಡೆಯಲಿವೆ.

Articles You Might Like

Share This Article