ರಾಜ್ಯದಲ್ಲಿ 60 ಲಕ್ಷ ನಕಲಿ ಮತದಾರರು ಪಟ್ಟಿಯಿಂದ ಹೊರಕ್ಕೆ

Social Share

ಬೆಂಗಳೂರು,ನ.9-ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಯಾವುದೇ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಈವರೆಗೂ 60 ಲಕ್ಷ ನಕಲಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ತಿಳಿಸಿದ್ದಾರೆ.

ಎರಡೆರಡು ಕಡೆ ಹೆಸರು ನೊಂದಾಯಿಸಿರುವುದು, ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅಗತ್ಯವಿರುವ ದಾಖಲೆಗಳನ್ನು ನೀಡದೆ ನಕಲಿಯಾಗಿ ಸೇರ್ಪಡೆಯಾಗಿದ್ದು ಒಟ್ಟು 60 ಲಕ್ಷ ನಕಲಿ ಮತದಾರರನ್ನು ಕೈಬಿಡಲಾಗಿದೆ. ಇದರ ಸಂಖ್ಯೆ ಇನ್ನು ಹೆಚ್ಚಾಗಬಹುದೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.1ರಿಂದ ಈವರೆಗೂ 27 ಲಕ್ಷ ನಕಲಿ ಮತದಾರರ ಹೆಸರನ್ನು ರದ್ದುಪಡಿಸಲಾಗಿದೆ. ಎರಡೆರಡು ಕಡೆ ಹೆಸರುಗಳನ್ನು ನೊಂದಾಯಿಸಿರುವುದು ಆಧಾರ್ ಸಂಖ್ಯೆಯ ನೊಂದಣಿಯಿಂದ ಕಂಡುಬಂದಿದೆ. ಇವರನ್ನು ಸಹ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದರು.

ಅಪಪ್ರಚಾರಗಳಿಂದ ನೊಂದಿರುವೆ : ನೋವು ತೋಡಿಕೊಂಡ ರಶ್ಮಿಕ ಮಂದಣ್ಣ

17 ವರ್ಷ ತುಂಬಿದ ಯುವಕ-ಯುವತಿಯರು ಮತದಾರರ ಪಟ್ಟಿಗೆ ಒಂದು ವರ್ಷ ಮೊದಲೇ ಸೇರ್ಪಡೆಯಾಗಲು ಅವಕಾಶವಿದೆ. ಆದರೆ ಜ.1ಕ್ಕೆ 18 ವರ್ಷ ತುಂಬಿದರೆ ಮಾತ್ರ ಅವರು ಮತದಾನ ಮಾಡಲು ಅವಕಾಶವಿದೆ. ಇದನ್ನು ಹೊರತುಪಡಿಸಿದರೆ ಮತ ದಾನದ ಹಕ್ಕು ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಪೂರ್ಣ ಮತದಾರರ ಪಟ್ಟಿಯು ಮಾ.31ರೊಳಗೆ ಸಂಪೂರ್ಣ ಮತದಾರರ ಪಟ್ಟಿ ಆಧಾರ್ ಲಿಂಕ್ ಮಾಡಲೇಬೇಕು. ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲ ಅಧಿಕಾರಿಗಳು ಮನವಿ ಮಾಡಲಾಗಿದೆ. ಗುಲ್ಬರ್ಗ, ಮೈಸೂರು, ಬೆಂಗಳೂರಿನಲ್ಲಿ ಮಾತ್ರ ಬಾಕಿ ಇದೆ ಎಂದು ವಿವರಿಸಿದರು.

ಮಾ.31ರೊಳಗೆ ಪ್ರತಿಯೊಬ್ಬ ಮತದಾರರ ಹೆಸರು ಆಧಾರ್‍ಗೆ ಲಿಂಕ್ ಆಗಲೇಬೇಕೆಂದು ಸೂಚಿಸಿದ್ದೇವೆ. ಎಲ್ಲಿಲ್ಲಿ ಬಾಕಿ ಇದೆಯೋ ಅಲ್ಲಿಲ್ಲಿ ಶೀಘ್ರಗೊಳಿಸಲಾಗುವುದು. ಜನವರಿ ತಿಂಗಳವರೆಗೆ ನಾನು ಮನವಿ ಮಾಡುತ್ತೇವೆ. ಇದು ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2022 ಅಂತಿಮ ಮತದಾರರ ಒಟ್ಟು ಮತಗಟ್ಟೆ ಸಂಖ್ಯೆ 58,179 ಇತ್ತು. 2023ಕ್ಕೆ ಹೊಸದಾಗಿ 225 ಮತಗಟ್ಟೆ ಸೇರ್ಪಡೆ ಆಗುವುದರಿಂದ ಒಟ್ಟು ಮತಗಟ್ಟೆ ಸಂಖ್ಯೆ 58,282 ಆಗಲಿದೆ. ಮತದಾರರು ಕೂಡಲೇ ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ವೆಬ್‍ಸೈಟ್‍ನಲ್ಲಿ ತಿಳಿದುಕೊಳ್ಳಬಹುದು. ತಮ್ಮ ಹಾಗೂ ಕುಟುಂಬದ ಇತರ ಸದಸ್ಯರ ಹೆಸರು, ವಿಳಾಸವನ್ನು ಹಾಕಲಾಗುತ್ತದೆ. ಮತದಾರರು ಇದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪೀಣ್ಯ-ನಂದಿನಿ ಬಡಾವಣೆ ಸಂಪರ್ಕ ಕೆಳಸೇತುವೆಗೆ ಗ್ರಹಣ : ಬಿಡಿಎ ಮೊಂಡುತನಕ್ಕೆ ಜನ ಹೈರಾಣ

ಮತದಾನ ನಡೆಯುವ ವೇಳೆ ವಿಕಲಚೇತನರು, ಮತದಾನ ಮಾಡಲು ಅನುಕೂಕಲವಾಗುವಂತೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಕಲಚೇತನರು ತಮಗೆ ಯಾವ ರೀತಿ ವ್ಯವಸ್ಥೆ ಬೇಕೆಂದು ಮೊದಲೇ ಮನವಿ ಮಾಡಿದರೆ ಮತಗಟ್ಟೆಯಲ್ಲಿ ವ್ಯವಸ್ಥೆ ಕಲ್ಪಿಸುತ್ತೇವೆ. ಇದಕ್ಕಾಗಿ ಆಯೋಗ ಸಿದ್ದತೆಯನ್ನು ಮುಂಚಿತವಾಗಿ ಮಾಡಿಕೊಳ್ಳಲಿದೆ ಎಂದರು.

ಲೈಂಗಿಕ ಕಾರ್ಯಕರ್ತೆಯರು, ಲಿಂಗ ಪರಿವರ್ತಿತರು ಅವರನ್ನು ಸಹ ಮತ ಪಟ್ಟಿಗೆ ಸೇರಿಸಲಾಗುವುದು. ಅವರು ಕೂಡ ಬಿಪಿಎಲ್, ಆಧಾರ್ ಸೇರಿದಂತೆ ಯಾವುದಾದರೊಂದು ದಾಖಲೆ ನೀಡಬೇಕು. ಈಗಾಗಲೆ 4 ಸಾವಿರ ಜನರು ಈ ರೀತಿ ಹೆಸರು ನೊಂದಾಣಿ ಮಾಡಿಕೊಂಡಿದ್ದಾರೆ. ಅಧಿಕೃತ ದಾಖಲೆ ನೀಡಿ ಹೆಸರು ನೊಂದಾಯಿಸಿಕೊಳ್ಳಲಿ ಎಂದರು.

Voter Helpline Mobile App ಹೊಸ ಆಪ್ ಬಿಡುಗಡೆ ಮಾಡಿದ್ದು, ಡೌನ್ ಲೋಡ್ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರಿದೆಯಾ ಎಂದು ಪರೀಕ್ಷೆ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಅಪರ ಚುನಾವಣಾ ಆಯುಕ್ತರು, ವೆಂಕಟೇಶ್ ನಾಯಕ್ ಮತ್ತು ವಾರ್ತಾ ಇಲಾಖೆ ಆಯುಕ್ತರು ಡಾಕ್ಟರ್ ಪಿ ಎಸ್ ಹರ್ಷ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Articles You Might Like

Share This Article