ರಾಜ್ಯದ 68 ವಸತಿ ಶಾಲೆಗಳಿಗೆ ಅಂಬೇಡ್ಕರ್ ಹೆಸರು

Social Share

ಬೆಂಗಳೂರು, ಜ.2- ಸಮಾಜಕಲ್ಯಾಣ ಇಲಾಖೆಯ ಅೀಧಿನದಲ್ಲಿ ನಡೆಯುತ್ತಿರುವ 68 ವಸತಿ ಶಾಲೆಗಳಿಗೆ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳೆಂದು ನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಅ.25ರಂದು ಸರ್ಕಾರಕ್ಕೆ ಪತ್ರ ಬರೆದಿದ್ದು, ಇಲಾಖೆಯಿಂದ ರಾಜ್ಯಾದ್ಯಂತ 68 ವಸತಿ ಶಾಲೆಗಳನ್ನು ನಿರ್ವಹಿಸಲಾಗುತ್ತಿದೆ. ಪ್ರತಿ ತರಗತಿಗೆ 25ರಂತೆ 5 ತರಗತಿಗಳಿಂದ 125 ವಿದ್ಯಾರ್ಥಿಗಳು ಒಂದು ಶಾಲೆಯಲ್ಲಿದ್ದಾರೆ. ಒಟ್ಟು 68 ಶಾಲೆಗಳಿಂದ 8500 ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ವಸತಿ, ಭೋಜನ, ಸಮವಸ್ತ್ರ ಇತ್ಯಾದಿ ಸವಲತ್ತುಗಳನ್ನು ನೀಡಲಾಗುತ್ತಿದೆ.
ಸದರಿ ಶಾಲೆಗಳಿಗೆ ಸಂವಿಧಾನ ಶಿಲ್ಪಿ, ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರು ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ. ಅದನ್ನು ಆಧರಿಸಿ ಸರ್ಕಾರ ವಸತಿ ಶಾಲೆಗಳಿಗೆ ಮರು ನಾಮಕರಣ ಮಾಡಿದೆ.
ಈ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅಂಬೇಡ್ಕರ್ ಅವರ ಹೆಸರು ನಾಮಕರಣ ಮಾಡಿರುವುದನ್ನು ಕೆಲವರು ಸ್ವಾಗತಿಸಿದರೆ ಈ ಸರ್ಕಾರ ಹೆಸರು ಬದಲಾವಣೆಯಲ್ಲೇ ಚಾಂಪಿಯನ್‍ಶಿಪ್ ಗಳಿಸಲಿದೆ ಎಂಬ ಕುಹಕಗಳು ಕೇಳಿಬಂದಿವೆ.
ವಸತಿ ಶಾಲೆಗಳ ಸೌಲಭ್ಯ ವೃದ್ಧಿಗೆ ಆದ್ಯತೆ ನೀಡುವ ಬದಲು ಹೆಸರು ಬದಲಾವಣೆ ಮೂಲಕ ಸರ್ಕಾರ ತನ್ನ ಇರುವಿಕೆಯನ್ನು ಸಾಬೀತುಮಾಡುವ
ಪ್ರಯತ್ನ ನಡೆಸಿದೆ. ಪ್ರತಿ ಯೋಜನೆ ಮತ್ತು ಕಾರ್ಯಕ್ರಮಗಳಿಗೂ ಹೆಸರು ಬದಲಾವಣೆಯನ್ನೇ ಸಾಧನೆ ಎಂದು ಸರ್ಕಾರ ನಂಬಿರುವಂತಿದೆ ಎಂಬ ಟೀಕೆಗಳು ಕೇಳಿಬಂದಿವೆ.

Articles You Might Like

Share This Article