UP Election: 6ನೇ ಹಂತದ ಮತದಾನ, ಸಿಎಂ ಯೋಗಿ ಸೇರಿ ಪ್ರಮುಖರ ಭವಿಷ್ಯ ನಿರ್ಧಾರ

Social Share

ಲಕ್ನೋ, ಮಾ.3 -ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಆರನೇ ಹಂತದ ಮತದಾನ ಇಂದು ಬೆಳಗ್ಗೆ ಆರಂಭಗೊಂಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಪ್ರಮುಕರ ಭವಿಷ್ಯಕ್ಕೆ ಮತದಾರರು ಮುದ್ರೆ ಒತ್ತಿದ್ದಾರೆ.  ರಾಜ್ಯದ 10 ಜಿಲ್ಲಾಗಳಲ್ಲಿ 57 ಸ್ಥಾನಗಳಿಗೆ 676 ಅಭ್ಯರ್ಥಿಗಳು ಸ್ರ್ಪಧಿಸಿದ್ದು ಭಾರಿ ಕುತೂಹಲ ಕೆರಳಿಸಿದೆ.
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನದಲ್ಲಿ ಜನರು ಉತ್ಸಾಹದಿಮದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು. ಸುಮಾರು 2.15 ಕೋಟಿ ಜನರು ಮತದಾನದ ಹಕ್ಕು ಪಡೆದಿದ್ದು ಸರಾಸರಿ ಶೆ.60ರಷ್ಟು ಮತದಾನವಾಗುವ ಸಾಧ್ಯತೆ ಇದೆ.  ಇಲ್ಲಿಯವರೆಗೆ 403 ವಿಧಾನಸಭಾ ಸ್ಥಾನಗಳ ಪೈಕಿ 292 ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ. ಉಳಿದ 54 ಸ್ಥಾನಗಳಿಗೆ ಅಂತಿಮ ಹಂತದ ಚುನಾವಣೆ ಮಾರ್ಚ್ 7 ರಂದು ನಡೆಯಲಿದೆ.
ಅಂಬೇಡ್ಕರ್ ನಗರ, ಬಲರಾಂಪುರ, ಸಿದ್ಧಾರ್ಥ್ ನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜನಜï, ಗೋರಖ್ಪುರ, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲಾಗಳಲ್ಲಿ ಇಂದು ನಡೆದಿದೆ. ಗೋರಖ್‍ಪುರ ನಗರದಿಂದ ಸಿಎಂ ಯೋಗಿ ಆದಿತ್ಯನಾಥ್‍ಗೆ ಸಮಾಜವಾದಿ ಪಕ್ಷದಿಂದ ಬಿಜೆಪಿಯ ಮಾಜಿ ನಾಯಕ ದಿವಂಗತ ಉಪೇಂದ್ರ ದತ್ ಶುಕ್ಲಾ ಅವರ ಪತ್ನಿ ಹಾಗು ಆಜಾದ್ ಸಮಾಜ ಪಕ್ಷದ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಸ್ರ್ಪಧಿಸಿದ್ದಾರೆ.
ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ್ದು, ಫಾಜಿಲನಗರದಿಂದ ಸ್ರ್ಪಧಿಸುತ್ತಿದ್ದಾರೆ.ಮತ್ತು ತಮ್ಕುಹಿ ರಾಜ್ ಕ್ಷೇತ್ರದಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಸ್ಪರ್ದಿಸಿದ್ದಾರೆ.
ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ವಿರುದ್ಧ ಗೋರಖ್ಪುರ ನಗರದಿಂದ ಸ್ರ್ಪಸುತ್ತಿದ್ದಾರೆ. ಈ ಹಂತದಲ್ಲಿ ಹಲವು ಉಸ್ತುವಾರಿ ಸಚಿವರ ಭವಿಷ್ಯ ನಿರ್ಧಾರವಾಗಲಿದೆ.ಅವರಲ್ಲಿ ಪಥರ್ದೇವನಿಂದ ಸೂರ್ಯ ಪ್ರತಾಪ್ ಶಾಹಿ, ಇಟ್ವಾದಿಂದ ಸತೀಶ್ ಚಂದ್ರ ದ್ವಿವೇದಿ, ಬಂಸಿಯಿಂದ ಜೈ ಪ್ರತಾಪ್ ಸಿಂಗï, ಖಜÁನಿಯಿಂದ ಶ್ರೀ ರಾಮ್ ಚೌಹಾನ್ ಮತ್ತು ರುದ್ರಪುರದಿಂದ ಜೈ ಪ್ರಕಾಶ್ ನಿಶಾದ್ ಸೇರಿದ್ದಾರೆ.

Articles You Might Like

Share This Article