ಫಿಲಿಪೈನ್ಸ್‌ನಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ..!

Social Share

ಮನಿಲಾ, ಜುಲೈ 27 – ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು,ರಾಜಧಾನಿ ಮನಿಲಾ ಸೇರಿದಂತೆ ಕೆಲವು ಪ್ರದೇಶದಲ್ಲಿ ಕಟ್ಟಡಡಗಳು ಉರುಳಿದ್ದು ಭಾರಿ ಹಾನಿ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 7.3 ತೀವ್ರತೆಯ ಭೂಕಂಪವು ಪರ್ವತ ಪ್ರದೇಶದ ಅಬ್ರಾ ಪ್ರಾಂತ್ಯದ ಸುತ್ತಲೂ ಸುಮಾರು 25 ಕಿಲೋಮೀಟರ್ ಆಳದಲ್ಲಿ ಕೇಂದ್ರೀಕೃತವಾಗಿತ್ತು ಮತ್ತು ಹಲವಾರು ಬಾರಿ ಭೂಮಿ ಕಂಪಿಸಿದೆ ಎಂದು ಫಿಲಿಪೈನ್ ಜ್ವಾಲಾಮುಖಿ ಮತ್ತು ಭೂಕಂಪನಶಾಸ್ತ್ರ ಸಂಸ್ಥೆ ತಿಳಿಸಿದೆ.

ಬಲವಾದ ಕಂಪನದಿಂದಾಗಿ ಕಟ್ಟಡಗಳು ಮತ್ತು ಮನೆಗಳಲ್ಲಿ ಬಿರುಕು ಉಂಟಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಖಿ.ಖ. ಭೂವೈಜ್ಞಾನಿಕ ಸಮೀಕ್ಷೆಯು ಭೂಕಂಪದ ಬಲವನ್ನು 7.0 ಮತ್ತು ಆಳವನ್ನು 10 ಕಿಲೋಮೀರ್ಟ (6 ಮೈಲುಗಳು) ನಲ್ಲಿ ಅಳೆಯಿತು. ಆಳವಿಲ್ಲದ ಭೂಕಂಪಗಳು ಹೆಚ್ಚು ಹಾನಿಯನ್ನುಂಟು ಮಾಡಿದೆ.

ಪೆಸಿಫಿಕ್ ಮಹಾಸಾಗರದ ಸುತ್ತಲೂ ಭೂಕಂಪ ಪೀಡಿತ ಪ್ರದೇಶವಾಗಿದ್ದು ಇಲ್ಲಿ ಪ್ರತಿ ವರ್ಷ ಸುಮಾರು 20 ಟೈಫೂನ್‍ಗಳು ಮತ್ತು ಉಷ್ಣವಲಯದ ಬಿರುಗಾಳಿ ಅಪ್ಪಳಿಸುತ್ತದೆ, ಇದು ವಿಶ್ವದ ಅತ್ಯಂತ ವಿಪತ್ತುಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ.

ನೂರಾರು ಮಂದಿ ಗಾಯಗೊಂಡಿದ್ದು ತಕ್ಷಣಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಕಾರಿಗಳು ತಿಳಿಸಿದ್ದಾರೆ. ಈ ಹಿಂದೆ 1990 ರಲ್ಲಿ 7.7 ತೀವ್ರತೆಯ ಭೂಕಂಪನ ಸಂಭವಿಸಿ ಸುಮಾರು 2,000 ಜನರು ಸಾವನ್ನಪ್ಪಿದ್ದರು.

Articles You Might Like

Share This Article