7.25 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ವಶ : ಮೂವರ ಸೆರೆ

Spread the love

9
ಬೆಳಗಾವಿ,ಫೆ.22- ಸುಮಾರು 7.25 ಲಕ್ಷ ಮೌಲ್ಯದ ಕಳವು ಮಾಲನ್ನು ನಿನ್ನೆ ಘಟಪ್ರಭಾ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ.ನಿನ್ನೆ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಧಾರವಾಡ ಎಸ್.ಪಿ. ಸದ್ಯ ನಗರದ ಇನ್‍ಚಾರ್ಜ್ ಎಸ್.ಪಿ. ಧರ್ಮೇಂದ್ರಕುಮಾರ ಮೀನಾ ಘಟಪ್ರಭಾ ಪಿಎಸ್‍ಐ ಜಿ.ವಿ. ಹಳ್ಳೂರ ಗಸ್ತಿಯಲ್ಲಿದ್ದಾಗ ಮಲ್ಲಾಪೂರ ಪಿಜಿ ಮುಗಳಖೋಡ ಶಾಖಾ ಮಠದ ಹತ್ತಿರ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ 3 ಜನರನ್ನು ಕರೆತಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದರು.

ರವಿ ರಾಮೇಶ ಭೋವಿ (20), ಭರತ ನಾಗರಾಜ ಭೋವಿ (22), ವೆಂಕಟೇಶ ರಂಗಪ್ಪ ಭೋವಿ (28) ಎಂಬುವವರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಖಚಿತವಾಗಿದೆ ಎಂದು ತಿಳಿಸಿದರು. ಮೂವರು ಚಿತ್ರದುರ್ಗ ಜಿಲ್ಲೆ ಹೊಸದುರ್ಗದವರಾಗಿದ್ದು ಘಟಪ್ರಭಾ ಠಾಣೆ ವ್ಯಾಪ್ತಿಯಲ್ಲಿ 4 ಹಾಗೂ ಗೋಕಾಕ ವ್ಯಾಪ್ತಿಯಲ್ಲಿ 5 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದರು.ಜತೆಗೆ ವೆಂಕಟೇಶನ ಸಂಬಂಧಿ ಇನ್ನೊಬ್ಬ ವೆಂಕಟೇಶ ನಾಗಪ್ಪ ಭೈೂೀವಿ(33) ಬಂಧಿತನಾಗಿದ್ದಾನೆ. ಒಟ್ಟು 9 ಪ್ರಕರಣಗಳಲ್ಲಿ 393 ಗ್ರಾ. ಚಿನ್ನಾಭರಣ, 750 ಗ್ರಾ ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದರು.ಹೆಚ್ಚುವರಿ ಎಸ್ ಪಿ ರವೀಂದ್ರ ಗಡಾದಿ, ಪಿಎಸ್ ಐ ಗೋಪಾಲ ಹಳ್ಳೂರ, ಎಎಸ್ ಐ ಪಿ. ಆರ್. ಹನುಮನ್ನವರ ಇತರ ಸಿಬ್ಬಂಧಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin