ಬೆಂಗಳೂರು, ನ.30- ಮದುವೆಯಾಗುವುದಾಗಿ ನಂಬಿಸಿ ವಿಧವೆಯೊಬ್ಬರ ವಿಶ್ವಾಸಗಳಿಸಿ ಅವರ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಪ್ರದೀಪ್(35) ಬಂಧಿತ ಆರೋಪಿ. ಈತ ಬಸವೇಶ್ವರ ನಗರದಲ್ಲಿ ವಾಸವಾಗಿದ್ದನು. ದಾಸರಹಳ್ಳಿಯಲ್ಲಿ ವಾಸವಾಗಿ ರುವ ವಿಧವೆಯೊಬ್ಬರು ಮನೆ ಬಾಡಿಗೆಯಿಂದ ಜೀವನ ನಡೆಸುತ್ತಿದ್ದಾರೆ. ಈ ಮಹಿಳೆಗೆ ಮೂರು ತಿಂಗಳಿನಿಂದ ಪ್ರದೀಪ್ ಎಂಬಾತನ ಪರಿಚಯವಾಗಿ ಸ್ನೇಹಕ್ಕೆ ತಿರುಗಿದೆ.
ಇವರಿಬ್ಬರು ಆಗಾಗ್ಗೆ ಮಾತ ನಾಡುತ್ತಾ ಆತ್ಮೀಯರಾಗಿದ್ದು, ಈ ಮಹಿಳೆಯ ವಿಶ್ವಾಸಗೊಳಿಸಿ ನಾನು ನಿಮ್ಮನ್ನು ಮದುವೆಯಾಗುವುದಾಗಿ ನಂಬಿಸಿ, ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದನು. ಆ ಸಂದರ್ಭದಲ್ಲಿ ಗೊತ್ತಾಗದ ಹಾಗೆ ಸುಮಾರು 7.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾನೆ.
ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್..?
ಕೆಲದಿನಗಳ ಬಳಿಕ ಚಿನ್ನಾಭರಣ ಕಳ್ಳತನವಾಗಿರುವುದು ಗಮನಿಸಿ ಮಹಿಳೆ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇವರ ಮನೆಗೆ ಬಂದು ಹೋಗುತ್ತಿದ್ದವರ ಬಗ್ಗೆ ಮಾಹಿತಿ ಪಡೆದು ತನಿಖೆ ಕೈಗೊಂಡಾಗ ಆರೋಪಿ ಪ್ರದೀಪ್ ಪೊಲೀಸರ ಬಲೆಗೆ ಬಿದ್ದಿದ್ದು, ಆತನಿಂದ 7.50 ಲಕ್ಷ ರೂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಅನುಮತಿ ಇಲ್ಲದೆ ರಸ್ತೆ ಅಗೆದ ಎಜೆನ್ಸಿಗಳಿಗೆ 25 ಲಕ್ಷರೂ. ದಂಡ
ಈಗಾಗಲೇ ಪ್ರದೀಪ್‍ನಿಗೆ ಮದುವೆಯಾಗಿದ್ದರೂ, ವಿಧವೆ ಯನ್ನು ಮದುವೆಯಾಗುವುದಾಗಿ ನಂಬಿಸಿ ಅವರ ಮನೆಯಲ್ಲೇ ಕಳ್ಳತನ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
7.50lakh, gold, jewelery, theft,