ಮೆಕ್ಸಿಕೋ, ಸೆ.20- ಮೆಕ್ಸಿಕೋ ದೇಶದ ಪಶ್ಚಿಮ ಭಾಗದಲ್ಲಿ ಭಾರೀ ಪ್ರಮಾಣದ ಭೂಕಂಪ ಸಂಭವಿಸಿದೆ. ಮೀಚೌಕನ್ ರಾಜ್ಯದ ಲಾಲ್ ಪಸಿಟಾ ಡೇ ಮೋರೆಲಾಸ್‍ನ ಆಗ್ನೇಯ ಕಿರು ಪ್ರದೇಶದ ಸುಮಾರು 46ಕಿಮೀ ದೂರದಲ್ಲಿ ಅಂದಾಜು 10ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ಶಾಸ್ತ್ರ ತಜ್ಞರು ತಿಳಿಸಿದ್ದಾರೆ.
ಕಂಪನದ ತೀವ್ರತೆಗೆ ನೂರಾರು ಕಟ್ಟಡಗಳು ಅಲುಗಾಡಿರುವ ಅನುಭವವಾಗಿದೆ. ಕಾಕತಾಳೀಯವೆಂಬಂತೆ 1985 ಮತ್ತು 2017ರಲ್ಲಿ ನಡೆದ ಭಾರೀ ಭೂಕಂಪನದ ದಿನದಂದೇ ದುರ್ಘಟನೆ ಮರುಕಳಿಸಿದೆ ಎಂದು ಭೂಕಂಪನ ಶಾಸ್ತ್ರ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಭಾರತದ ರಾಯಭಾರ ಕಚೇರಿಗೆ ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿ
ಇಲ್ಲಿಯವರೆಗೆ ಈ ಘಟನೆಯಿಂದ ಯಾವುದೇ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ ಎಂದು ಮೆಕ್ಸಿಕನ್ ಅಕಾರಿಗಳು ತಿಳಿಸಿದ್ದಾರೆ.
1985ರ ಸೆ.19ರಂದು ರಿಕ್ಟರ್ ಮಾಪನದಲ್ಲಿ 8.1ರ ತೀವ್ರತೆಯ ಭೂಕಂಪನ ಸಂಭವಿಸಿ 10 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು. ನೂರಾರು ಕಟ್ಟಡಗಳು ನೆಲಸಮವಾಗಿದ್ದವು. ನಂತರ 2017ರಲ್ಲಿ ಅದೇ ದಿನ ಭೂಕಂಪನ ಸಂಭವಿಸಿ 370 ಮಂದಿ ಸಾವಿಗೀಡಾಗಿದ್ದರು.