ಜಕಾರ್ತ,ಜ.10- ಇಂಡೋನೇಷ್ಯಾದ ತನಿಂಬಾರ್ ಪ್ರದೇಶದಲ್ಲಿ ಇಂದು ಮುಂಜಾನೆ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಕಂಪನವು ಭೂಮಿಯ ಮೇಲ್ಮೈನಿಂದ 97 ಕಿಲೋಮೀಟರ್ ಆಳದಲ್ಲಿತ್ತು ಎಂದು ಅಮೆರಿಕದ ಭೂಗರ್ಭ ಇಲಾಖೆ ತಿಳಿಸಿದೆ.
ಭೂಕಂಪ ಸಂಭವಿಸಿದ ನಂತರ ಇಂಡೋನೇಷ್ಯಾದಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಿತ್ತು. ಆದರೆ ಸಮುದ್ರ ಮಟ್ಟದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ದಾಖಲಾದ ಹಿನ್ನಲೆ ಆತಂಕ ದೂರವಾಗಿದೆ.
ನಾಲ್ಕು ಭಾರಿ ಭೂಮಿ ಕಂಪಿಸಿದೆ ಎಂದು ವರದಿಯಾಗಿವೆ, ಇದು ಉತ್ತರ ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ ಇಂಡೋನೇಷ್ಯಾದ ವಿಪತ್ತು ಏಜೆನ್ಸಿಯ ವರದಿಗಳು ಪ್ರಕಾರ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿಸಿದೆ.
“ಸೂರ್ಯಕುಮಾರ್ ಅಂತಹ ಆಟಗಾರ100 ವರ್ಷಕ್ಕೆ ಒಬ್ಬರು ಸಿಕ್ತಾರೆ”
ಮುಂಜಾನೆ ಸುಮಾರು 2:47 ಗಂಟೆಗೆ ಭೂಮಿ ಕಂಪಿಸಿದೆ ಎಂದು ದೇಶದ ಜಿಯೋಫಿಸಿಕ್ಸ್ ಸಂಸ್ಥೆ ತಿಳಿಸಿದೆ. ಸುನಾಮಿ ಎಚ್ಚರಿಕೆಯನ್ನು ಮುಂಜಾನೆ 5:43ಕ್ಕೆ ಹಿಂತೆಗೆದುಕೊಳ್ಳಲಾಯಿತು.
#Magnitude, #Earthquake, #Strikes, #Indonesia,