ಬೆಂಗಳೂರು, ಮಾ.7- ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಾದಕ ವಸ್ತು ಹ್ಯಾಶಿಶ್ ಆಯಿಲ್‍ಖರೀದಿಸಿಕೊಂಡು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಮೂವರನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12 ಕೆಜಿ 940 ಗ್ರಾಂ ತೂಕದ 7.76 ಕೋಟಿ ರೂ.
ಮೌಲ್ಯದ ಹ್ಯಾಶಿಸ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಬಿಟಿಎಂ ಲೇಔಟ್ 4ನೆ ಹಂತ, ಅರಕೆರೆ ಗ್ರಾಮದ ಕಾರ್ ಪಾರ್ಕ್ ಬಳಿ ಮಾದಕ ವಸ್ತು ಹ್ಯಾಶಿಸ್ ಆಯಿಲ್ ಅನ್ನು ವಶದಲ್ಲಿ ಮಾರಾಟ ಮಾಡುತ್ತಿದ್ದ ಮಡಿವಾಳದ ಮಾರುತಿ ನಗರ ನಿವಾಸಿಯನ್ನು ಬಂಸಿ, 80 ಗ್ರಾಂ ತೂಕದ ಹ್ಯಾಶಿಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ.
ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇನ್ನಿಬ್ಬರು ಸಹಚರರ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಆಧಾರ ಮೇರೆಗೆ ಮೂಲತಹ ಕೇರಳದ ಕೊಟ್ಟಾಯಂ ನಿವಾಸಿ ಹಾಗೂ ತಮಿಳುನಾಡು ರಾಜ್ಯದ ನಿವಾಸಿಯನ್ನು ಬಂಧಿಸಿ 10 ಕೆಜಿ 500 ಗ್ರಾಂ ತೂಕದ ಹ್ಯಾಶಿಸ್ ಆಯಿಲ್ ವಶಪಡಿಸಿಕೊಂಡಿದ್ದಾರೆ.
ಒಟ್ಟಾರೆ ಮೂವರು ಆರೋಪಿಗಳಿಂದ 12 ಕೆಜಿ 940 ಗ್ರಾಂ ತೂಕದ 7.76 ಕೋಟಿ ರೂ. ಮೌಲ್ಯ ಹ್ಯಾಶಿಸ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಹ್ಯಾಶಿಸ್ ಆಯಿಲ್ ಖರೀದಿಸಿಕೊಂಡು ಬಂದು ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕಂಟೈನರ್‍ಗಳಲ್ಲಿ ತುಂಬಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರೆದಿದೆ.
