7 ಮಂದಿ ಬಂಧನ, 5 ಕೋಟಿ ರೂ. ಮೌಲ್ಯ ಮಾದಕ ವಶ

Social Share

ಬೆಂಗಳೂರು, ಸೆ.13- ನಗರದ ದಕ್ಷಿಣ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ 7 ಮಂದಿಯನ್ನು ಬಂಧಿಸಿ 5 ಕೋಟಿ ರೂ. ಮೌಲ್ಯದ 556 ಕೆಜಿ ಗಾಂಜಾ ಹಾಗೂ 6 ಕೆಜಿ ಆ್ಯಶಿಶ್ ಆಯಿಲ್, ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕೆಂಪೇಗೌಡ ನಗರ- 5 ಮಂದಿ ಬಂಧನ: ನಂಜಾಂಬ ಅಗ್ರಹಾರ ಕೆಂಪಾಬುದಿಕೆರೆಯ ನಾರ್ತ್‍ಗೇಟ್ ರಸ್ತೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ ನಾಲ್ಕೈದು ಮಂದಿ ಆಟೋರಿಕ್ಷಾ ಮತ್ತು ಒಂದು ಸ್ಕೂಟರ್ ನಿಲ್ಲಿಸಿಕೊಂಡು ಭಾರೀ ಪ್ರಮಾಣದ ಮಾದಕ ವಸ್ತು ಗಾಂಜಾ ಮಾರಾಟ ಮಾಡಲು ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಕೆಂಪೇಗೌಡ ನಗರ ಠಾಣೆ ಪೊಲೀಸರು ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಐದು ಮಂದಿಯನ್ನು ಬಂಧಿಸಿದ್ದಾರೆ.

ಗೋರಿಪಾಳ್ಯದ ನಯಾಜ್‍ಪಾಷ, ಕೊಟ್ಟಿಗೆಪಾಳ್ಯದ ನೂರ್ ಅಹಮ್ಮದ್, ದೊಡ್ಡಬಸ್ತಿಯ ಮಹಿಳಾ ಆರೋಪಿ ಮುಬಾರಕ್, ವಾಲ್ಮೀಕಿನಗರದ ಇಮ್ರಾನ್ ಪಾಷ ಮತ್ತು ಕೆಪಿ ಅಗ್ರಹಾರದ ಕಿರಣ್ ಅಲಿಯಾಸ್ ಬಂಗಾರಪ್ಪ ಬಂಧಿತರು.

ಆರೋಪಿಗಳು ಭಾರೀ ಪ್ರಮಾಣದ ಮಾದಕ ವಸ್ತು ಗಾಂಜಾವನ್ನು ಒರಿಸ್ಸಾ ರಾಜ್ಯದ ಮಲ್ಕಾನ್‍ಗಿರಿಯಿಂದ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ. ಒರಿಸ್ಸಾದಲ್ಲಿ ಆರೋಪಿಗಳು 10 ಕೆಜಿ ಹಾಗೂ 20 ಕೆಜಿಯಂತೆ ಗಾಂಜಾವನ್ನು ಬ್ಯಾಗ್‍ಗಳಲ್ಲಿ ಪ್ಯಾಕ್ ಮಾಡಿ ರೈಲಿನ ಸೀಟಿನ ಕೆಳಗೆ ಇಟ್ಟು ಬೆಂಗಳೂರಿಗೆ ಕಳುಹಿಸುತ್ತಿದ್ದರು.

ರೈಲು ಕೆಆರ್ ಪುರದ ಬಳಿ ರೈಲು ಬರುತ್ತಿದ್ದಂತೆ ಆರೋಪಿಗಳು ಕಾದು ನಂತರ ಗಾಂಜಾ ಇದ್ದ ಬ್ಯಾಗ್‍ಗಳನ್ನು ಇಳಿಸಿಕೊಳ್ಳುತ್ತಿದ್ದುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿಗಳು ನೀಡಿದ ಮಾಹಿತಿಯಂತೆ ಕೆಂಗೇರಿಯ ಮನೆಯೊಂದರಲ್ಲಿ ಸಂಗ್ರಹಿಸಿಡಲಾಗಿದ್ದ 2 ಕೋಟಿ ಮೌಲ್ಯದ 506 ಕೆಜಿ ಗಾಂಜಾ ಮತ್ತು ಸಾಗಾಟಕ್ಕೆ ಉಪಯೋಗಿಸುತ್ತಿದ್ದ ಆಟೋ ರಿಕ್ಷಾ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಜಯನಗರ: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿ, ಬನಶಂಕರಿಯ ನಯಾಜ್ ಪಾಷ ಎಂಬಾತನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ ಆತ ನೀಡಿದ ಮಾಹಿತಿ ಮೇರೆಗೆ ಆಂಧ್ರ ಪ್ರದೇಶಕ್ಕೆ ತೆರಳಿದ ತಂಡ ಇಬ್ಬರನ್ನು ಬಂಧಿಸಿ 20 ಲಕ್ಷ ರೂ. ಮೌಲ್ಯದ 50 ಕೆಜಿ ಗಾಂಜಾ ಮತ್ತು 3 ಕೋಟಿ ಮೌಲ್ಯದ 6 ಕೆಜಿ ಆ್ಯಶಿಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶದ ಸಾಗರ್ ಸಾಹೋ ಮತ್ತು ಶೇಷಗಿರಿ ಬಂಧಿತ ಆರೋಪಿಗಳು.

ಆ.30ರಂದು ಗಾಂಜಾ ಸೇವನೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡು ಆತ ನೀಡಿದ ಮಾಹಿತಿ ಮೇರೆಗೆ ಆಂಧ್ರ ಪ್ರದೇಶದ ಗೊಪ್ಪಿಲಿಗೆ ತೆರಳಿದ ಇನ್‍ಸ್ಪೆಕ್ಟರ್ ಮಂಜುನಾಥ್, ಸಬ್‍ಇನ್ಸ್‍ಪೆಕ್ಟರ್ ಸಚಿನ್ ತಂಡದವರು ಆರೋಪಿಗಳ ಇರುವಿಕೆಯನ್ನು ಭಾತ್ಮಿದಾರರ ಸಹಾಯದಿಂದ ಪತ್ತೆಹಚ್ಚಿ ದಾಳಿ ಮಾಡಿದ್ದಾರೆ.

ಪೊಲೀಸರಿದ್ದ ಟೆಂಪೆಪೋಟ್ರಾವೆಲ್ ವಾಹನದ ಮೇಲೆ ಇಬ್ಬರು ಆರೋಪಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದು, ಇನ್ನಿಬ್ಬರನ್ನು ಬಂಸಿದ ಪೋಲೀಸರು ಗಾಂಜಾ ಮತ್ತು ಆ್ಯಶಿಶ್ ಆಯಿಲ್ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ. ದಕಿಣ ವಿಭಾಗದ ಉಪ ಪೆÇಲೀಸ್ ಆಯುಕ್ತರಾದ ಕೃಷ್ಣಕಾಂತ್ ಮಾರ್ಗದರ್ಶನದಲ್ಲಿ ವಿವಿ ಪುರಂ ಉಪವಿಭಾಗದ ಸಹಾಯಕ ಪೋಲೀಸ್ ಆಯುಕ್ತರಾದ ಬಿ.ಎಲ್.ಶ್ರೀನಿವಾಸಮೂರ್ತಿ ಹಾಗೂ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಕೆ.ವಿ.ಶ್ರೀನಿವಾಸ್ ಅವರುಗಳ ನೇತೃತ್ವದಲ್ಲಿ ಕೆಜಿ ನಗರ ಮತ್ತು ಜಯನಗರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಮತ್ತು ಅಧಿಕಾರಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಅಭಿನಂದನೆ: ಆರೋಪಿಗಳನ್ನು ಬಂಸುವಲ್ಲಿ ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್‍ರೆಡ್ಡಿ ಹಾಗೂ ಪಶ್ಚಿಮ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರು ಈ ಉತ್ತಮ ಕಾರ್ಯವನ್ನು ಅಭಿನಂದಿಸಿದ್ದಾರೆ.

Articles You Might Like

Share This Article