ಇರಾನ್‍ನಲ್ಲಿ ಪ್ರಬಲ ಭೂಕಂಪ, 7 ಮಂದಿ ಸಾವು

Social Share

ಟೆಹ್ರಾನ್(ಇರಾನ್),ಜ.29-ಇರಾನ್ ಕೊಯ್ ನಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಏಳು ಜನ ಮೃತಪಟ್ಟು 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕೊಯ್ ನಗರದಲ್ಲಿ ಭೂಕಂಪನದ ತೀವ್ರತೆ ರಿಕ್ಟಟರ್ ಮಾಪನದಲ್ಲಿ 5.59 ದಾಖಲಾಗಿದೆ ಎಂದು ಯು.ಎಸ್.ಜಿಯಾಲಾಜಿಕಲ್ ಸರ್ವೆ ತಿಳಿಸಿದೆ.ನಿನ್ನೆ ರಾತ್ರಿ 11.44ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಕಂಪನದ ಕೇಂದ್ರಬಿಂದು ಸುಮಾರು 10 ಕಿ.ಮೀ ಆಳದಲ್ಲಿತ್ತು. ಒಟ್ಟು 14 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ನಡುಗಿದ ಅನುಭವವಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-01-2023)

ಭೂಕಂಪನದಿಂದ ಹಲವೆಡೆ ಕಟ್ಟಡಗಳಿಗೆ ಧಕ್ಕೆಯಾಗಿದೆ. 7ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನೂರಾರು ಮಂದಿ ಗಾಯಗೊಂಡು ಚಿಕಿತ್ಸೆಗೆ ದಾಖಲಿಸಲಾಗಿದೆ. ಇರಾನ್ ಪಶ್ಚಿಮ ಭಾಗದ ಅಜೆಬೈರ್ಜಾನ್ ಪ್ರಾಂತ್ಯದ ಹಲವು ಪ್ರದೇಶಗಳಲ್ಲೂ ಕೂಡ ಕಂಪನದ ಅನುಭವವಾಗಿದೆ.

#Earthquake, #NorthwestIran, #IranEarthquake,

Articles You Might Like

Share This Article