ಬ್ಯಾಂಕಾಕ್, ಜ. 25- ದಕ್ಷಿಣ ಚೀನಾ ಸಮುದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದ ಅಮೆರಿಕ ನೌಕಾಪಡೆಯ ಎಫ್ 35 ಸಿ ಲೈಟ್ನಿಂಗ್ ಐಐ ಯುದ್ಧ ವಿಮಾನ ಇಳಿಯಲು ಪ್ರಯತ್ನಿಸುತ್ತಿದ್ದಾಗ ಪತನಗೊಂಡಿದ್ದು, ಏಳು ನಾವಿಕರು ಗಾಯಗೊಂಡಿದ್ದಾರೆ. ಅಮೆರಿಕದ ವಿಮಾನವಾಹಕ ನೌಕೆಯ ಡೆಕ್ ಮೇಲೆ ಲ್ಯಾಂಡಿಂಗ್ ವೇಳೆ ಅಪಘಾತ ಸಮಯದಲ್ಲಿ ಪೈಲಟ್ ಹೊರ ಜಿಗಿದಿದ್ದಾರೆ,ನಂತರ ಅವರನ್ನು ಸೇನಾ ಹೆಲಿಕಾಪ್ಟರ ಮೂಲಕ ರಕ್ಷಿಸಲಾಗಿದೆ , ಅವರ ಸ್ಥಿತಿ ಸ್ಥಿರವಾಗಿದೆ.
ಏಳು ನಾವಿಕರು ಗಾಯಗೊಂಡರು, ಮೂವರನ್ನು ಫಿಲಿಪೈನ್ಸ್ ನ ಮನಿಲಾದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಬೇಕಾಗಿದೆ ಮತ್ತು ಹಡಗಿನಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ಸಿಗುತ್ತಿಲ್ಲ , ಇದು ತನಿಖೆಯಲ್ಲಿ ಉಳಿದಿದೆ ಎಂದು ಅಮೆರಿಕ ಸೇನಾ ಅಧಿಕಾರಿಗಳು ಹೇಳಿದ್ದಾರೆ.
14,000 ಕ್ಕೂ ಹೆಚ್ಚು ನಾವಿಕರು ಮತ್ತು ನೌಕಾಪಡೆಗಳೊಂದಿಗೆ ಎರಡು ಅಮೇರಿಕನ್ ಕ್ಯಾರಿಯರ್ ಸ್ಟ್ರÉೈಕ್ ತಂಡಗಳು ದಕ್ಷಿಣ ಚೀನಾ ಸಮುದ್ರದಲ್ಲಿ ವ್ಯಾಯಾಮಗಳನ್ನು ನಡೆಸುತ್ತಿವೆ.
ಚೀನೀ ಪೈಲಟ್‍ಗಳು ತೈವಾನಿನತ್ತ ಪ್ರತಿದಿನವೂ ವಿಮಾನ ಹಾರುತ್ತಿದ್ದಾರೆ ಬೀಜಿಂಗ್ ಸ್ವಯಂ ಆಳ್ವಿಕೆಯಲ್ಲಿರುವ ದ್ವೀಪವನ್ನು ಪ್ರತ್ಯೇಕಿಸಲು ಮತ್ತು ರಾಜತಾಂತ್ರಿಕ ಮತ್ತು ಮಿಲಿಟರಿ ಒತ್ತಡ ವಿಧಾನಗಳನ್ನು ಅಮೆರಿಕ ಬಳಸಿದೆ, ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಮೂಲಕ ತೈವಾನ್‍ಗೆ ಬೆಂಬಲ ನೀಡುವುದನ್ನು ಮುಂದುವರೆಸಿದೆ.
