ಇಸ್ರೇಲ್,ಜ.28- ಪೂರ್ವ ಜೆರುಸಲೆಮ್‍ನ ಸಿನಗಾಗ್ ಪ್ರದೇಶದಲ್ಲಿ ಪ್ಯಾಲೆಸ್ತಾನಿ ಬಂದೂಕುಧಾರಿಯೊಬ್ಬ ಮನ ಬಂದಂತೆ ಗುಂಡು ಹಾರಿಸಿ ಏಳು ಮಂದಿಯನ್ನು ಹತ್ಯೆ ಮಾಡಿದ್ದಾನೆ.
ಜೆರುಸಲೇಮ್ ಪಶ್ಚಿಮ ದಂಡೆಯಲ್ಲಿ ರಾಕೆಟ್ ದಾಳಿ ನಡೆಸಿ ಒಂಬತ್ತು ಜನರನ್ನು ಹತ್ಯೆಗೈದ ಘಟನೆ ಬೆನ್ನಲ್ಲೆ ಬಂದೂಕುಧಾರಿ ಈ ರೀತಿಯ ಕೃತ್ಯ ನಡೆಸಿರುವುದು ಇಸ್ರೇಲಿಗರ ಮೇಲೆ ಪ್ಯಾಲೆಸ್ತಾನಿಯರಿಗೆ ಇರುವ ಆಕ್ರೋಶವನ್ನು ಹೊರ ಹಾಕಿದೆ.
ಪ್ಯಾಲೇಸ್ಟೇನಿಯರು ಇಸ್ರೇಲಿಗರನ್ನು ಗುರಿಯಾಗಿರಿಸಿಕೊಂಡು ನಡೆಸುತ್ತಿರುವ ದಾಳಿಗಳು ಹೆಚ್ಚಾಗಿದ್ದು, ಇಂದು ನಡೆಸಿರುವ ದಾಳಿ ಅತ್ಯಂತ ಕೆಟ್ಟ ದಾಳಿಯಾಗಿದೆ ಎಂದು ಇಸ್ರೇಲ್ ಪೊಲೀಸ್ ಮುಖ್ಯಸ್ಥ ಕೋಬಿ ಶಬ್ಟೈ ತಿಳಿಸಿದ್ದಾರೆ.
ಜೆರುಸಲೆಮ್‍ನ ಯಕೋವ್ ಬೊಲೆವಾರ್ಡ್‍ನಲ್ಲಿರುವ ಸಿನ್‍ಗಾಗ್‍ಗೆ ಆಗಮಿಸಿದ ಭಯೋತ್ಪಾದಕ ಇದ್ದಕ್ಕಿದ್ದಂತೆ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ ಇತರ ಹಲವಾರು ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ.
ಲವ್ ಫೇಲ್ಯೂರ್, ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಯತ್ನಿಸಿದ ವೈದ್ಯ
ದಾಳಿ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಹಂತಕನನ್ನು ಬೆನ್ನಟ್ಟಿ ಹತ್ಯೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ. ಹಂತಕನನ್ನು 1967 ರ ಆರು ದಿನಗಳ ಯುದ್ಧದ ನಂತರ ಇಸ್ರೇಲ್ ಸ್ವಾೀಧಿನಪಡಿಸಿಕೊಂಡ ಪೂರ್ವ ಜೆರುಸಲೆಮ್‍ನ ಪ್ಯಾಲೇಸ್ಟಿನಿಯನ್ ನಿವಾಸಿ ಎಂದು ಪತ್ತೆ ಹಚ್ಚಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ದೂರದರ್ಶನದಲ್ಲಿ ಮಾತನಾಡಿದ ನೆತನ್ಯಾಹು ಅವರು ತಮ್ಮ ಭದ್ರತಾ ಕ್ಯಾಬಿನೆಟ್ ಶೀಘ್ರದಲ್ಲೇ ಪ್ರತಿಕ್ರಿಯೆಯಾಗಿ ತಕ್ಷಣದ ಕ್ರಮಗಳನ್ನು ಘೋಷಿಸಲಿದ್ದಾರೆ ಮತ್ತು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಡಿ ಎಂದು ಇಸ್ರೇಲಿಗಳನ್ನು ಒತ್ತಾಯಿಸಿದ್ದಾರೆ.
7 Israelis, killed, synagogue, attack, Palestinian, terrorist,