ಭೀಕರ ಅಪಘಾತದಲ್ಲಿ ಅಯೋಧ್ಯೆಗೆ ತೆರಳುತ್ತಿದ್ದ ಕರ್ನಾಟಕದ 7 ಮಂದಿ ಸಾವು..!

Spread the love

ಲಕ್ನೋ,ಮೇ.29- ಉತ್ತರ ಪ್ರದೇಶದ ಬಹರಿಚ್-ಲಖೀಂಪುರ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆಯೋಧ್ಯೆಗೆ ತೆರಳುತ್ತಿದ್ದ ರಾಜ್ಯದ ಏಳು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಲಖೀಂಪುರ್ ಹೆದ್ದಾರಿಯಲ್ಲಿ ಇಂದು ಮುಂಜಾನೆ ರಾಜ್ಯದ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಟೂರಿಸ್ಟ್ ಬಸ್‍ಗೆ ಟ್ರಕ್ ಅಪ್ಪಳಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದು, ಇತರ ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಧಿಷ್ಠಾಕಾರಿ ಆಶೋಕ್‍ಕುಮಾರ್ ಪಿಟಿಐಗೆ ತಿಳಿಸಿದ್ದಾರೆ. ಕರ್ನಾಟಕದಿಂದ ಆಯೋಧ್ಯೆಗೆ 16 ಮಂದಿ ಪ್ರಯಾಣೀಕರು ಟೂರಿಸ್ಟ್ ಬಸ್‍ನಲ್ಲಿ ಸಂಚರಿಸುತ್ತಿದ್ದರೂ ಇಂದು ಮುಂಜಾನೆ ಮೋತಿಪುರ್ ಪ್ರದೇಶದ ನನಿಹಾ ಮಾರುಕಟ್ಟೆ ಸಮೀಪ ಎದುರಿನಿಂದ ಬಂದ್ ಟ್ರಕ್ ಅಪ್ಪಳಿಸಿದ ಪರಿಣಾಮ ಈ ಭೀಕರ ದುರಂತ ನಡೆದಿದೆ.

ಟ್ರಕ್ ಅಪ್ಪಳಿಸಿದ ರಭಸಕ್ಕೆ ಟೂರಿಸ್ಟ್ ಬಸ್ ಚಾಲಕ ಸೇರಿದಂತೆ 5 ಮಂದಿ ಸ್ಥಳದಲ್ಲೇ ಸಾವನ್ನಪಿದ್ದಾರೆ. ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದು, ಇತರ 9 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೆ ಕಾರಣಕರ್ತನಾದ ಟ್ರಕ್ ಚಾಲಕ ಪರಾರಿಯಾಗಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಲಾಗಿದೆ. ಅಪಘಾತದಲ್ಲಿ ಕರ್ನಾಟಕದ ಏಳು ಪ್ರಯಾಣಿಕರು ಸಾವನ್ನಪ್ಪಿರುವುದಕ್ಕೆ ಸಂತಾಪ ವ್ಯಕ್ತಪಡಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Facebook Comments