ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಗೆ ಬಸ್ ಡಿಕ್ಕಿ, 7 ಮಂದಿ ಬಲಿ..!

Social Share

ಪಕೂರ್,ಜ.5- ಗ್ಯಾಸ್ ಸಿಲಿಂಡರ್‍ಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತು ಪ್ರಯಾಣಿಕರ ಬಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸಾವಿಗೀಡಾಗಿ ಇತರ 24 ಜನರು ಗಾಯಗೊಂಡಿರುವ ಘಟನೆ ಜಾರ್ಖಂಡ್‍ನ ಪಕೂರ್‍ನಲ್ಲಿ ಇಂದು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಹಲವಾರು ಜನರು ಬಸ್ ನೊಳಗಡಯೇ ಸಿಲುಕಿಕೊಂಡಿದ್ದು, ಗ್ಯಾಸ್ ಕಟರ್‍ಗಳಿಂದ ಬಸ್‍ನ್ನು ಕತ್ತರಿಸಿ ಅವರನ್ನು ಹೊರತರುವ ಕಾರ್ಯ ಸಾಗುತ್ತಿದೆ ಎಂದು ಪವಿಭಾಗೀಯ ಪೊಲೀಸ್ ಅಧಿಕಾರಿ ಅಜಿತ್‍ಕುಮಾರ್ ವಿಮಲ್ ಹೇಳಿದ್ದಾರೆ.
ಅಪಘಾತ ಎಷ್ಟು ತೀವ್ರವಾಗಿದೆಯೆಂದರೆ ಎರಡೂ ವಾಹನಗಳ ಮುಂಭಾಗ ಒಂದರೊಳಗೊಂದು ಸಿಲುಕಿಕೊಂಡಿವೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಗ್ಯಾಸ್ ಸಿಲಿಂಡರ್‍ಗಳು ಸೀಟಿಸಿಲ್ಲ. ಇಲ್ಲವಾದರೆ ಅಪಘಾತಕ್ಕೆ ಇನ್ನಷ್ಟು ಜೀವಗಳು ಬಲಿಯಾಗುತ್ತಿದ್ದವು ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಸನ್ನಿವೇಶವನು ಪರಿಗಣಿಸಿದರೆ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವಿಮಲ್ ನುಡಿದಿದ್ದಾರೆ.

Articles You Might Like

Share This Article