ಬಾಡ ಗ್ರಾಮದ ಬಳಿ ಭೀಕರ ಅಪಘಾತ : ಮೂವರು ಮಕ್ಕಳು ಸೇರಿ 7 ಮಂದಿ ದುರ್ಮರಣ

Spread the love

ಧಾರವಾಡ, ಮೇ 21- ಮದುವೆ ನಿಶ್ಚಿತಾರ್ಥ ಮುಗಿಸಿಕೊಂಡು ಬರುತ್ತಿದ್ದ ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬಾಡಾ ಗ್ರಾಮದ ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸಂಭವಿಸಿದೆ.

ಮೃತರನ್ನು ಮಹೇಶ್ವರಯ್ಯ (11), ಹರೀಶ್ (13), ಅನನ್ಯ (14), ಶಿಲ್ಪಾ (34), ನೀಲವ್ವ (60), ಮಧುಶ್ರೀ (20), ಶಂಭುಲಿಂಗಯ್ಯ (35) ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದು, ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನಸೂರು ಗ್ರಾಮದಿಂದ 21 ಜನರಿದ್ದ ಕ್ರೂಸರ್ ವಾಹನ (ನಿಗದಿ) ಬೆನಕನಹಟ್ಟಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ಕೃಷ್ಣಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

# ಮುಗಿಲು ಮುಟ್ಟಿದ ರೋಧನ:
ಘಟನೆಯಿಂದ ಎರಡೂ ಕಡೆಯ ಸಂಬಂಕರು ದಿಗ್ಭ್ರಾಂತರಾಗಿದ್ದಾರೆ. ಮೃತರ ಸಂಬಂಕರ ರೋಧನ ಮುಗಿಲುಮುಟ್ಟಿದೆ. ಮೃತ ದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು, ಶವಾಗಾರದ ಮುಂದೆ ಸಂಬಂಕರ ರೋಧನ ಮುಗಿಲು ಮುಟ್ಟಿತ್ತು. ಭೀಕರ ರಸ್ತೆ ಅಪಘಾತಕ್ಕೆ ಕ್ರೂಸರ್ ಚಾಲಕನ ಬದಲಾವಣೆ ಮಾಡಿದ್ದೇ ಕಾರಣವಾಗಿಯೇ ಎಂಬ ಮಾತುಗಳು ಕೂಡ ಕೇಳಿಬಂದವು.

ಮೊದಲಿದ್ದ ಕ್ರೂಸರ್ ಚಾಲಕನನ್ನು ಬದಲಾಯಿಸಿದ್ದ ಕಾರಣಕ್ಕೆ ಈ ಅಪಘಾತ ಸಂಭವಿಸಿ ಸುಮಾರು ಏಳು ಜನ ಬಲಿಯಾಗಬೇಕಾಯಿತು.
ಮಸಣೂರು ಮತ್ತು ನಿಗೆ ಗ್ರಾಮದಲ್ಲಿ ಶೋಕದ ವಾತಾವರಣ ಮನೆ ಮಾಡಿತ್ತು.

Facebook Comments