7 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಕಂದಾಯ ವ್ಯಾಪ್ತಿಗೆ

Social Share

ಬೆಳಗಾವಿ,ಡಿ.29-ರಾಜ್ಯದಲ್ಲಿ 3,30186.93 ಹೆಕ್ಟರ್ ಪ್ರದೇಶವನ್ನು ಮಾತ್ರ ಡಿಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿದ್ದು, ಉಳಿದೆಲ್ಲಾ ಜಮೀನನ್ನು ಕಂದಾಯ ಇಲಾಖೆಗೆ ವಾಪಾಸ್ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ.

ವಿಧಾನಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿಂದು ಕೇಳಲಾದ ಪ್ರಶ್ನೆಗೆ ಸರ್ಕಾರದ ಪರವಾಗಿ ಇಬ್ಬರು ಸಚಿವರು ಉತ್ತರಿಸಿದ್ದಾರೆ. ಸದಸ್ಯ ಕೆ.ಕೆ.ಹರೀಶ್‍ಕುಮಾರ್, ರಾಜ್ಯದಲ್ಲಿ 9,94,881.11 ಹೆಕ್ಟರ್ ಪ್ರದೇಶವನ್ನು ಡಿಮ್ಡ್ ಫಾರೆಸ್ಟ್ ಸ್ಥಾನದಿಂದ ಹಿಂಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು.

ಆರಂಭದಲ್ಲಿ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿರುವ ಜಿಲ್ಲಾ ಮಟ್ಟದ ಸಮಿತಿಗಳು ಸುಪ್ರೀಂಕೋರ್ಟ್ ತೀರ್ಪನ್ನು ಆಧರಿಸಿ ಅರಣ್ಯ ಪ್ರದೇಶವನ್ನು ಗುರುತಿಸಿವೆ.

ಅದರ ಪ್ರಕಾರ ರಾಜ್ಯದಲ್ಲಿ ಒಟ್ಟು 3,30,186 ಲಕ್ಷ ಹೆಕ್ಟೇರ್ ಪ್ರದೇಶ ಡಿಮ್ಡ್ ಫಾರೆಸ್ಟ್‍ಗೆ ಸೀಮಿತವಾಗಿದೆ. ಇದಕ್ಕೂ ಮೊದಲು ಡಿಮ್ಡ್ ಫಾರೆಸ್ಟ್ ವಿಸ್ತೀರ್ಣ 11 ಲಕ್ಷ ಹೆಕ್ಟರ್ ಇತ್ತು. ನಂತರ ಅದರ ಗಾತ್ರ 9 ಲಕ್ಷ ಹೆಕ್ಟರ್‍ಗೆ ಇಳಿದಿತ್ತು. ಪ್ರಸ್ತುತ ಡಿಮ್ಡ್ ಫಾರೆಸ್ಟ್‍ನ ವಿಸ್ತೀರ್ಣ 3.30 ಲಕ್ಷ ಹೆಕ್ಟೇರ್ ಆಗಿದೆ ಎಂದರು.

ಸುಪ್ರೀಂಕೋರ್ಟ್‍ನಲ್ಲಿ ಈ ಕುರಿತು ವಿಚಾರಣೆ ಬಾಕಿ ಇರಲಿಲ್ಲ. ಆದರೂ ಹಿಂದಿನ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವಾಗ ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಉಲ್ಲೇಖಿಸಲಾಗಿತ್ತು.
ಅದರ ಪ್ರಕಾರ ನಮ್ಮ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸಿದೆ. ಇದರ ಮೇಲೆ ತೀರ್ಪು ಪ್ರಕಟವಾಗುವ ಅಗತ್ಯ ಇಲ್ಲ.

ನಿಮ್ಮ ಸಂಕಲ್ಪ, ನಮ್ಮ ಹೊಣೆ: ಕಾಂಗ್ರೆಸ್ ಪ್ರಣಾಳಿಕೆ ತಯಾರಿ ಆರಂಭ

ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕಿರಲಿಲ್ಲ. ಸಂಪುಟ ಸಭೆಯಲ್ಲಿ ಆ ರೀತಿ ನಿರ್ಣಯ ಕೈಗೊಂಡಿದ್ದರಿಂದ ಅದರಂತೆ ನಡೆದುಕೊಂಡಿದ್ದೇವೆ, ವಿಷಯ ಇತ್ಯಥ್ರ್ಯವಾಗಿದೆ. ಜಂಟಿ ಸರ್ವೇ ಹಾಗೂ ಇತರ ವಿಷಯಗಳ ಕುರಿತು ಕಂದಾಯ ಇಲಾಖೆ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದರು.

ಮಧ್ಯ ಪ್ರವೇಶಿಸಿದ ಕಂದಾಯ ಸಚಿವ ಆರ್.ಅಶೋಕ್, ಕರೆಯಲ್ಲಿ 50 ಮರಕ್ಕಿಂತ ಹೆಚ್ಚಿದ್ದ ಭಾಗವನ್ನು ಅರಣ್ಯ ಎಂದು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಅದನ್ನು ಆಧರಿಸಿ ಜಿಲ್ಲಾಧಿಕಾರಿಗಳ ಸಮಿತಿ ಡಿಮ್ಡ್ ಪ್ರದೇಶವನ್ನು ಗುರುತಿಸಿದೆ. 3.30 ಲಕ್ಷ ಹೆಕ್ಟರ್ ಬಿಟ್ಟು, ಉಳಿದ 7.73 ಲಕ್ಷ ಹೆಕ್ಟರ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಾಸ್ ನೀಡಲಾಗಿದೆ. ಈ ವಿಷಯ ಸುಪ್ರೀಂಕೋರ್ಟ್‍ಗೆ ಹೋಗಬೇಕಿರಲಿಲ್ಲ. ಅದು ಅಧಿಕಾರಿಗಳು ಮಾಡಿದ ತಪ್ಪು ಎಂದರು.

BIG NEWS: ಕಳಸಾ-ಬಂಡೂರಿ ನಾಲಾ ಯೋಜನೆಯ ಕೇಂದ್ರ ಗ್ರೀನ್ ಸಿಗ್ನಲ್

ಈ ಹಿಂದೆ ನಿಯಮ 50-53ರಡಿ ಅರ್ಜಿ ಹಾಕಿದ್ದ ರೈತರಿಗೆ ಭೂಮಿ ಮಂಜೂರಾಗಿದೆ. ಅದರ ಪ್ರಮಾಣ 30615.20 ಎಕರೆಯಿದೆ. ಅರ್ಜಿ ಹಾಕಿದ ರೈತರಿಗೆ ಜಮೀನು ಉಳಿದಿದೆ. ಕೆರೆ, ಶಾಲೆ ನಡುತೋಪು ಸೇರಿದಂತೆ 21 ಸಾವಿರ ಎಕರೆ ಕಂದಾಯ ಇಲಾಖೆಗೆ ವಾಪಾಸ್ ಬಂದಿದೆ. ಉಳಿದಂತೆ 1,63,073 ಎಕರೆಯೂ ಬೇರೆ ಮಾದರಿಯಲ್ಲಿ ವಾಪಾಸ್ ಬಂದಿದೆ ಎಂದರು.

ಬಹಳ ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಸಣ್ಣ ರೈತರಿಗೆ ಈಗ ಭೂಮಿ ಲಭ್ಯವಾಗಲಿದೆ ಎಂದು ಸ್ಪಷ್ಟ ಪಡಿಸಿದರು.

7 lakh hectares, forest land, government, Legislative Council,

Articles You Might Like

Share This Article