ಮನೆಯವರ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದ 7 ದರೋಡೆ ಕೋರರು

Social Share

ಬೆಂಗಳೂರು, ಜ.13- ಮನೆಯವರ ಸಮಯ ಪ್ರಜ್ಞೆಯಿಂದಾಗಿ ಒಳಗೆ ನುಗ್ಗಿ ದರೋಡೆಗೆ ಯತ್ನಿಸಿ ಅವಿತು ಕುಳಿತಿದ್ದ ಐದು ಮಂದಿ ದರೋಡೆಕೋರರು ಸೇರಿದಂತೆ ಏಳು ಮಂದಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರ ಪೈಕಿ ಆರು ಮಂದಿ ಹೊರರಾಜ್ಯದವರಾಗಿದ್ದು, ಒಬ್ಬಾತ ಬೆಂಗಳೂರು ನಿವಾಸಿ. ಎಲೆಕ್ಟ್ರಾನಿಕ್ ಸಿಟಿಯ ಶೇಕ್ ಕಲೀಂ(22) ಬಿಹಾರ ಮೂಲದ ಮೊಹಮ್ಮದ್ ನಿನಾಜ್ ಅಲಿಯಾಸ್ ಮಿರಾಜ್(21), ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಇಮ್ರಾನ್ ಶೇಕ್(24), ಸೈಯ್ಯದ್ ಫೈಜಲ್ ಆಲಿ ಅಲಿಯಾಸ್ ಫೈಜಲ್ (23), ರಾಜಸ್ಥಾನ ಮೂಲದ ರಾಮ್ ಬಿಲಾಸ್(27), ಮಧ್ಯಪ್ರದೇಶದ ಸುನೀಲ್ ಡಾಂಗಿ(20) ಮತ್ತು ಒಡಿಸ್ಸಾ ಮೂಲದ ರಜತ್ ಮಲ್ಲಿಕ್(21) ಬಂಧಿತ ದರೋಡೆಕೋರರು.

ಕನಕಪುರ ರಸ್ತೆಯ ನಾರಾಯಣ ನಗರದ ನಿವಾಸಿ ರಾಹುಲ್ ಬಾಲಗೋಪಾಲ್ ಎಂಬುವರು ಜ. 11ರಂದು ಬೆಳಗಿನ ಜಾವ 5.20ರ ಸುಮಾರಿಗೆ ಎದ್ದು, ಕಾಫಿ ಮಾಡಿಕೊಳ್ಳಲು ಅಡಿಗೆ ಮನೆಗೆ ಹೋಗಿದ್ದಾರೆ. ಆ ವೇಳೆ ಫ್ರಿಡ್ಜ್‍ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ.

ಆದಿಯೋಗಿ ಪ್ರತಿಮೆ ಉದ್ಘಾಟನೆಗೆ ಹೈಕೋರ್ಟ್ ಹಸಿರು ನಿಶಾನೆ

ಮನೆಯೊಳಗೆ ಯಾರೋ ಕಳ್ಳರು ಬಂದಿರಬಹುದೆಂದು ಅನುಮಾನಗೊಂಡು ನಂತರ ತಮ್ಮ ಬೆಡ್‍ರೂಂ ಗೆ ಹೋಗಿ ಸಿಸಿ ಕ್ಯಾಮೆರಾ ಚೆಕ್ ಮಾಡಿದಾಗ ಐದು ಜನ ಕಳ್ಳರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮನೆಯೊಳಗೆ ಫರ್ನಿಚರ್‍ಗಳ ಹಿಂದೆ ಮರೆಯಾಗಿ ನಿಂತಿರುವುದು ಕಂಡು ಬಂದಿದೆ.

ತಕ್ಷಣ ರಾಹುಲ್ ಅವರು ತಮ್ಮ ತಂದೆಯವರಿಗೆ ಈ ಬಗ್ಗೆ ತಿಳಿಸಿ ಪಕ್ಕದ ಮನೆಯ ಸೆಕ್ಯುರಿಟಿ ಗಾರ್ಡ್‍ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸ್ ಕಂಟ್ರೋಲ್ ರೂಂ 112ಗೆ ಕರೆ ಮಾಡಿದ್ದು, 10 ನಿಮಿಷಗಳಲ್ಲಿ ತಲಘಟ್ಟ ಪೆಪೊಲೀಸ್ ಠಾಣೆಯ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದು ಸಿನಿಮೀಯ ರೀತಿ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಸ್ಥಳದಿಂದ ತಪ್ಪಿಸಿಕೊಂಡು ಹೋಗಿದ್ದ ಇನ್ನಿಬ್ಬರು ಆರೋಪಿಗಳನ್ನು ಆನೆಕಲ್ ಬಸ್ ನಿಲ್ದಾಣದ ಬಳಿ ಬಂಧಿಸಿ ಕಬ್ಬಿಣದ ಲಾಂಗು, ಎರಡು ರಾಡು, ಎರಡು ಕಬ್ಬಿಣದ ಪೈಪು, ಮೂರು ಖಾರದ ಪುಡಿ ಪೊಟ್ಟಣಗಳು, ಒಂದು ಹಗ್ಗವನ್ನು ವಶಪಡಿಸಿಕೊಂಡಿದ್ದಾರೆ.

ಮೆಟ್ರೋ ಪಿಲ್ಲರ್ ದುರಂತ : ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್

ಆರೋಪಿಗಳು ಮೂಲತಃ ಹೊರ ರಾಜ್ಯರಾದವರಾಗಿದ್ದು, ಹಗಲಿನಲ್ಲಿ ನಗರದ ಹೊರ ವಲಯದಲ್ಲಿರುವ ಒಂಟಿ ಮನೆಗಳನ್ನು ಗುರುತಿಸಿ ಮನೆಯವರ ಚಲನವಲನಗಳನ್ನು ಆಲಿಸಿ ರಾತ್ರಿ ಸಮಯದಲ್ಲಿ ಮನೆಯ ಕಿಟಕಿ ಮೇಲಿನ ಸಜ್ಜಾದ ಸಹಾಯದಿಂದ ಟೆರೆಸ್‍ಗೆ ಹೋಗಿ ಬಾಗಿಲಿನ ಚಿಲಕವನ್ನು ಮುರಿದು ಒಳಗೆ ನುಗ್ಗಿ ಮನೆಯವರ ಮೇಲೆ ಹಲ್ಲೆ ಮಾಡಿ ದರೋಡೆ ನಡೆಸುವ ಪ್ರವೃತ್ತಿವುಳ್ಳವರಾಗಿರುತ್ತಾರೆ.

ಈ ಪೈಕಿ ಇಬ್ಬರು ಆರೋಪಿಗಳು ಮನೆಯ ಮೇಲ್ಭಾಗದಿಂದ ಹೊರಗಿನಿಂದ ಯಾರಾದರೂ ಬರಬಹುದೇ ಎಂಬುದನ್ನು ಗಮನಿಸುತ್ತಾರೆ. ಉಳಿದವರು ಡಕಾಯಿತಿ ಮಾಡಲು ಮನೆಯೊಳಗೆ ನುಗ್ಗುತ್ತಾರೆ. ಮನೆಯವರು ಎಚ್ಚರಗೊಂಡಿದ್ದರಿಂದ ಅಲ್ಲೇ ಒಂದು ಕೋಣೆಯಲ್ಲಿ ಅವಿತುಕೊಂಡಿದ್ದು, ಆ ಸಮಯದಲ್ಲಿ ಕುಟುಂಬ ಸದಸ್ಯರ ಸಮಯ ಪ್ರಜ್ಞೆಯಿಂದ ಕಂಟ್ರೋಲ್ ರೂಂಗೆ ಮಾಹಿತಿ ನೀಡಿರುವುದರಿಂದ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರಿಗೆ ನೆರವಾಯಿತು.

ಹೊಯ್ಸಳ ವಾಹನ ಕರ್ತವ್ಯದಲ್ಲಿದ್ದ ಎಎಸ್‍ಐಗಳಾದ ಶಿವಕುಮಾರ್, ಮಹದೇವ್ ಮತ್ತು ಚಾಲಕರಾದ ಚೆನ್ನಪ್ಪ, ಚೆನ್ನವೆಂಕಟಯ್ಯ ಅವರು ಕ್ಷಣಾರ್ಧದಲ್ಲಿ ಸ್ಥಳಕ್ಕೆ ಹೋಗಿ ರಾಹುಲ್ ಅವರನ್ನು ಭೇಟಿ ಮಾಡಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿ ಡಕಾಯಿತಿ ಮಾಡಲು ಬಂದಿದ್ದ ಐದು ಮಂದಿಯನ್ನು ಬಂಧಿಸಿದ್ದಾರೆ.

ಆ ಸಮಯದಲ್ಲಿ ಟೆರೆಸ್ ಮೇಲೆ ನಿಂತಿದ್ದ ಇಬ್ಬರು ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದರು. ಕೇವಲ 9 ಗಂಟೆಯೊಳಗೆ ಸತತ ಕಾರ್ಯಾಚರಣೆ ನಡೆಸಿ ಆ ಇಬ್ಬರನ್ನು ಸಹ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೆಯವರ ಸಮಯ ಪ್ರಜ್ಞೆ ಮತ್ತು 112 ಕಂಟ್ರೋಲ್ ರೂಂನಿಂದ ಬಂದ ಮಾಹಿತಿ ಮೇರೆಗೆ ಕರ್ತವ್ಯದಲ್ಲಿದ್ದ ಹೊಯ್ಸಳ ವಾಹನದ ಅಧಿಕಾರಿ ಮತ್ತು ಸಿಬ್ಬಂದಿಯವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿ ಡಕಾಯಿತಿ ಮಾಡಲು ಬಂದಿದ್ದ ಆರೋಪಿತರನ್ನು ವಶಕ್ಕೆ ಪಡೆದಿರುತ್ತಾರೆ.

ಗೃಹಜ್ಯೋತಿ ಭರವಸೆ ಈಡೇರಿಸಲು ಕಾಂಗ್ರೆಸ್ ಬದ್ಧ

ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪವನ್ ಅವರ ನೇತೃತ್ವದಲ್ಲಿ ತಲಘಟ್ಟ ಪುರ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಜಗದೀಶ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

7 robbers, arrested, house, Bangalore,

Articles You Might Like

Share This Article