700 ಕಿ.ಮೀ.ದೂರದಲ್ಲಿರುವ ವೈರಿಯನ್ನು ಉಡಾಯಿಸಬಲ್ಲ ಅಗ್ನಿ-1 ಕ್ಚಿಪಣಿ ಪರೀಕ್ಷೆ ಯಶಸ್ವಿ

Agni-1

ಬಾಲಸೋರ್, ನ.22-ಭಾರತದ ಅಣ್ವಸ್ತ್ರ ಸಾಮಥ್ರ್ಯದ ಕ್ಷಿಪಣಿ ಪ್ರಯೋಗದಲ್ಲಿ ಇಂದು ಮತ್ತೊಂದು ಮಹತ್ವದ ಮೈಲಿಗಲ್ಲು. ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಗೊಳಿಸಲಾದ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-1 ಕ್ಚಿಪಣಿಯನ್ನು ಇಂದು ಒಡಿಶಾದ ಕರಾವಳಿಯ ಚಂಡಿಪುರ್‍ನ ಪ್ರಯೋಗ ವಲಯದಲ್ಲಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದೆ. ನಿನ್ನೆ ಪೃಥ್ವಿ-2 ಅವಳಿ ಅಣ್ವಸ್ತ್ರ ಕ್ಷಿಪಣಿ ಉಡಾವಣೆಯನ್ನು ಯಶಸ್ವಿಯಾಗಿ ನಡೆದ ಮರುದಿನವೇ ಅಗ್ನಿ-1 ಪ್ರಯೋಗವೂ ಸಫಲವಾಗಿದೆ.  ಸಮಗ್ರ ಪ್ರಯೋಗ ವಲಯದ (ಐಟಿಆರ್) ಉಡಾವಣೆ ಸಂಕೀರ್ಣ-3ರಲ್ಲಿ ಸಂಚಾರಿ ವಾಹಕ-4ರ ಮೂಲಕ ಬೆಳಗ್ಗೆ 10.10ರಲ್ಲಿ ಅಗ್ನಿ ಕ್ಷಿಪಣಿ ಪರೀಕ್ಷೆ ಉಡಾವಣೆ ಸಫಲವಾಗಿದೆ ಎಂದು ರಕ್ಷಣಾ ಮೂಲಗಳು ಹೇಳಿವೆ.

ಈ ಖಂಡಾಂತರ ಕ್ಷಿಪಣಿಯು 700 ಕಿ.ಮೀ.ದೂರದಲ್ಲಿರುವ ವೈರಿ ಗುರಿಯನ್ನು ಚಿಂದಿ ಉಡಾಯಿಸಬಲ್ಲಷ್ಟು ಸಮರ್ಥವಾಗಿವೆ.  ಅಗಾಧ ಸಾಮಥ್ರ್ಯದ ಕ್ಷಿಪಣಿ ಬಳಕೆಯನ್ನು ಪರೀಕ್ಷಿಸುವ ಭಾಗವಾಗಿ ನಡೆದ ಪರೀಕ್ಷಾರ್ಥ ಪ್ರಯೋಗದಲ್ಲಿ ಸೇನೆಯು ಅಗ್ನಿ-1 ಕ್ಷಿಪಣಿಯನ್ನು ನಿಖರ ಗುರಿಯತ್ತ ಉಡಾಯಿಸುವಲ್ಲಿ ಯಶಸ್ವಿಯಾಗಿದೆ.  ಪೃಥ್ವಿ-2 ಕ್ಷಿಪಣಿ ಭೂಮಿಯಿಂದ ಭೂಮಿಗೆ ಚಿಮ್ಮುವ ಈ ಎರಡು ಕ್ಷಿಪಣಿಗಳು 350 ಕಿ.ಮೀ.ದೂರದಲ್ಲಿರುವ ವೈರಿ ಗುರಿಯನ್ನು ಕರಾರುವಕ್ಕಾಗಿ ಧ್ವಂಸ ಮಾಡುವ ಶಕ್ತಿ ಹೊಂದಿದೆ. 500 ರಿಂದ 1,000 ಕೆ.ಜಿ. ಸಿಡಿತಲೆಗಳನ್ನು ಹೊರುವ ಸಾಮಥ್ರ್ಯವನ್ನೂ ಹೊಂದಿದೆ.

► Follow us on –  Facebook / Twitter  / Google+

Sri Raghav

Admin