ದೆಹಲಿಯ ಕರ್ತವ್ಯ ಪಥದಲ್ಲಿ ಸೇನಾಶಕ್ತಿ ಅನಾವರಣ

Social Share

ನವದೆಹಲಿ,ಜ.26- ದೇಶದ 74ನೇ ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪ್ರದರ್ಶನಗಳಲ್ಲಿ ದೇಶದ ಸೇನಾ ಶಕ್ತಿ ಮತ್ತು ನಾರಿ ಶಕ್ತಿ ಅನಾವರಣಗೊಂಡಿತ್ತು.

ಮಂಜುಕವಿದ ಮಸುಕಿನ ವಾತವರಣದಲ್ಲೂ ವಿವಿಧ ಭದ್ರತಾಪಡೆಗಳ ಶಿಸ್ತುಬದ್ಧ ಪಥಸಂಚಲನ, ಕಸರತ್ತು, ಸಾಂಸ್ಕøತಿಕ ಕಾರ್ಯಕ್ರಮಗಳು ರೋಮಾಂಚನೀಯ ಅನುಭವ ನೀಡಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರಕ್ಷಣಾ ಸಚಿವರ ರಾಜನಾಥ್ ಸಿಂಗ್, ಈಜಿಪ್ಟ್ ಅಧ್ಯಕ್ಷ
ಅಬೆಡೆಲ್ ಫಹಾ ಎಲ್-ಸಿಸಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇಶಭಕ್ತಿ ಉಮ್ಮಳ್ಳಿಸುವ ಭಾವೋದ್ವೇಗಕ್ಕೆ ಸಾಕ್ಷಿಯಾದರು.

ಇದಕ್ಕೂ ಮೊದಲು ಪ್ರಧಾನಿ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿಕ ದೇಶಕ್ಕಾಗಿ ಸಮರ್ಪಿತಗೊಂಡ ವೀರ ಯೋಧರಿಗೆ ಗೌರವ ಸಮರ್ಪಿಸಿದರು. ಕೆಂಪುಕೋಟೆಯ ಮೇಲೆ ರಾಷ್ಟ್ರಪತಿ ಮುರ್ಮು ತ್ರಿವರ್ಣ ಧ್ವಜಾರೋಹಣ ಮಾಡಿ, ಪಥ ಸಂಚಲನಕ್ಕೆ ಅನುಮತಿಸಿದರು.

ಗಣರಾಜ್ಯೋತ್ಸವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಕರ್ನಾಟಕ ದಾಖಲೆ

ಪ್ರತಿಶಿಷ್ಠಿತ ಕರ್ತವ್ಯಪಥದಲ್ಲಿ ಯುದ್ಧ ಟ್ಯಾಂಕರ್‍ಗಳು, ಕ್ಷಿಪಣಿಗಳ ಪ್ರದರ್ಶನದ ಮೂಲಕ ಸೇನಾ ಶಕ್ತಿ ಅನಾವರಣಗೊಂಡಿತ್ತು. ಇದೇ ಮೊದಲ ಬಾರಿಗೆ ಕರ್ತವ್ಯಪಥ 21 ಬಂದೂಕು ವಂದನೆಗೆ ಸಾಕ್ಷಿಯಾಯಿತು. ಮತ್ತೊಂದು ವಿಶೇಷವೆಂದರೆ ಬ್ರಿಟಿಷ್ ನಿರ್ಮಿತ 25 ಫೌಂಡರ್ ಗನ್‍ಗಳ ಬದಲಿಗೆ ಈ ಬಾರಿ 105ಎಂಎಂ ಭಾರತ ನಿರ್ಮಿತ ಬಂದೂಕುಗಳನ್ನು ಬಳಸಿ ರಾಷ್ಟ್ರಪತಿ ಅವರಿಗೆ ಬಂದೂಕು ವಂದನೆ ಸಲ್ಲಿಸಲಾಯಿತು.

ಸ್ವತಂತ್ರ್ಯ ಭಾರತದಲ್ಲಿ ಮೊದಲ ಬಾರಿಗೆ ನೇಮಕಗೊಂಡ ಅಗ್ನಿವೀರ್ ತಂಡ ಪಥಸಂಚಲನದಲ್ಲಿ ತೊಡಗಿಸಿಕೊಂಡಿತ್ತು. ಮೂವರು ಮಹಿಳಾ ಆಗ್ನಿವೀರ್‍ರು ಸೇರಿ ಕಿರಿಯ ಅಗ್ನಿವೀರರು ಕಟ್ಟುನಿಟ್ಟಿನ ಹೆಜ್ಜೆಗಳ ಮೂಲಕ ಗಮನ ಸೆಳೆದರು. ಗಣರಾಜ್ಯೋತ್ಸವದ ಗೌರವಾರ್ಥ ಈಜಿಪ್ಟ್‍ನ ಸೇನಾಪಡೆಯೊಂದು ಪಥಸಂಚಲನದಲ್ಲಿ ಭಾಗವಹಿಸಿತ್ತು.

ಆತ್ಮನಿರ್ಭರ ಭಾರತ್ ಅಡಿ ದೇಶಿ ನಿರ್ಮಿತ ಯುದ್ಧ ಸಲಕರಣೆಗಳ ಪ್ರದರ್ಶನವಾಯಿತು. ವಾಯುಸೇನೆಯ ಆಕಾಶ್ ಆಯುಧ ವ್ಯವಸ್ಥೆಯ 27 ಮಿಸೈಲ್ ರೆಜಿಮೆಂಟ್‍ಗಳು ಕ್ಯಾಪ್ಟನ್ ಸುನೀಲ್ ದಶರಥ್ ಮತ್ತು ಲೆಫಿನೆಂಟ್ ಚೇತನ ಶರ್ಮಾರ ನೇತೃತ್ವದಲ್ಲಿ ಪೆರೆಡ್‍ನಲ್ಲಿ ಪ್ರದರ್ಶನಗೊಂಡಿತ್ತು. ಲೆಫ್ಟಿನೆಂಟ್ ಪ್ರಜ್ವಲ್ ಕಲ ಅವರು ನೇತೃತ್ವದಲ್ಲಿ 816 ಮಿಸೈಲ್ ರೆಜಿಮೆಂಟ್ನ್ ಬ್ರಮೋಸ್, ಕ್ಷೀಪ್ರ ಕಾರ್ಯಾಪಡೆಯ ಸಮರ ವಾಹನಗಳು, ಎನ್‍ಎಜಿ ಮಿಸೈಲ್‍ಗಳು, ಯುದ್ಧ ಟ್ಯಾಂಕರ್ ಅರ್ಜುನ್ ಸೇರಿದಂತೆ ಅನೇಕ ಸಲಕರಣೆಗಳು ಪ್ರದರ್ಶನಗೊಂಡವು.

ಪದ್ಮವಿಭೂಷಣ ಬಯಸದೆ ಬಂದ ಭಾಗ್ಯ : ಎಸ್.ಎಂ.ಕೃಷ್ಣ

ಅಶ್ವಾರೂಢ ಯಶೋಬಲ್ ಸೈನಿಕರು, ಒಂಟೆ ಪದಾತಿದಳು ಸೇರಿದಂತೆ ಯೋಧರು, ಬಿಎಸ್‍ಎಫ್, ಸಿಆರ್‍ಪಿಎಫ್, ಬಂಗಾಳ್, ಅಸ್ಸಾಂ ರೆಜಿಮೆಂಟ್‍ಗಳು ಅಚ್ಚುಕಟ್ಟಾದ ಮಾರ್ಚ್‍ಫಾಸ್ಟ್ ನಿಂದ ಗಮನ ಸೆಳೆದವು. ವಿವಿಧ ರಾಜ್ಯಗಳ ಸಾಂಸ್ಕøತಿ ಕಾರ್ಯಕ್ರಮಗಳು, ಸ್ಥಬ್ಧ ಚಿತ್ರಗಳು ಕಣ್ಮನ ಸೆಳೆದವು. ಲಡಾಕ್,

ಅಸ್ಸಾ, ಹರ್ಯಾಣ, ಆಂಧ್ರ ಪ್ರದೇಶ, ತಮಿಳುನಾಡು, ಪಶ್ಚಿಮಬಂಗಾಳ, ಲಡಾಕ್, ಜಮ್ಮು-ಕಾಶ್ಮೀರ, ಗುಜರಾತ್, ತ್ರಿಪುರ, ಮಹಾರಾಷ್ಟ್ರ, ಕೇರಳ, ಕರ್ನಾಟಕದ ಸ್ಥಬ್ಧ ಚಿತ್ರಗಳು ಜನಾಕರ್ಷಣೆಗೆ ಕಾರಣವಾದವು. ಬಹುತೇಕ ಸ್ಥಬ್ಧ ಚಿತ್ರಗಳಲ್ಲಿ ನಾರಿ ಶಕ್ತಿ ಅನಾವರಣಗೊಂಡಿತ್ತು.

ಮಹಾರಾಷ್ಟ್ರ, ಕೇರಳ, ಗುಜರಾತ್, ಮಹಾರಾಷ್ಟ್ರ, ಕೇಂದ್ರ ಸಂಸ್ಕøತಿ ಸಚಿವಾಲಯ,ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಭಾರತೀಯ ನೌಕಾದಳ ಸೇರಿದಂತೆ ಅನೇಕ ರಾಜ್ಯಗಳ ಸ್ಥಬ್ದ ಚಿತ್ರಗಳು ಸ್ಥಳೀಯ ಮಹಿಳಾ ಸಾಧಕರನ್ನು ಪ್ರತಿಬಿಂಬಿಸಿದ್ದವು. ಅರ್ಥ ಪೂರ್ಣ ಹಾಗೂ ಪ್ರೇರಣಾತ್ಮಕ ಸ್ಥಬ್ದ ಚಿತ್ರಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

74th Republic Day, celebrations, Kartavya Path, Delhi,

Articles You Might Like

Share This Article