ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮೇಳೈಸಿದ ಮಕ್ಕಳ ಕಲರವ

Social Share

ಬೆಂಗಳೂರು,ಜ.26- ಮೈನವಿರೇಳಿಸುವಂತ ಬೈಕ್ ಮೇಲಿನ ವೈವಿಧ್ಯಮಯ ಕಸರತ್ತು, ಶ್ವಾನದಳದ ಆಕರ್ಷಕ ಪಥ ಸಂಚಲ, ಶಾಲಾ ಮಕ್ಕಳ ಚಿತ್ತಾಕರ್ಷಕ ಸಾಂಸ್ಕøತಿಕ ಕಾರ್ಯಕ್ರಮ ಗಳು ಇಂದು ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ 74ನೇ ಗಣರಾಜ್ಯೋತ್ಸವದ ವಿಶೇಷ ಆಕರ್ಷಣೆಯಾಗಿದ್ದವು.

ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಗೌರವ ರಕ್ಷೆ ಸ್ವೀಕರಿಸಿ, ತೆರೆದ ವಾಹನದಲ್ಲಿ ಪೆರೇಡ್ ವೀಕ್ಷಣೆ ಮಾಡಿದರು. ರಾಜ್ಯಪಾಲರ ಭಾಷಣದ ನಂತರ ಪೆರೇಡ್ ಕಮಾಂಡರ್, ಕೇರಳ ರಾಜ್ಯ ಪೆÇಲೀಸ್, ಶ್ವಾನದಳ, ಬಿಎಸ್‍ಎಫ್, ಸಿಆರ್‍ಪಿಎಫ್, ಕೆಎಸ್‍ಆರ್ ಪಿ,ಕೆಎಸ್‍ಐಸಿ, ಬೆಂಗಳೂರು ನಗರ ಮಹಿಳಾ ಪೆÇಲೀಸ್, ಸಂಚಾರ ಪೊಲೀಸ್, ಗೃಹರಕ್ಷಕ ದಳ, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ರಮಣ ಮಹರ್ಷಿ ಅಂಧರ ಶಾಲೆ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಶಿಸ್ತುಬದ್ಧ ಆಕರ್ಷಕ ಪಥಸಂಚಲದಲ್ಲಿ ಭಾಗಿಯಾಗಿದ್ದರು.

ಇದಾದ ನಂತರ ನಾಡಗೀತೆ ಹಾಗೂ ರೈತಗೀತೆ ಹಾಡಲಾಯಿತು. ಉತ್ತರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್ ಪ್ರದರ್ಶನವು ಮನಸೂರೆಗೊಂಡಿತು. ಮಾಗಡಿ ರಸ್ತೆಯ ಬಿಬಿಎಂಪಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ವಿಜಯನಗರದ ಬಿಬಿಎಂಪಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್ ಪ್ರದರ್ಶ ನೃತ್ಯವು ಮನಮೋಹಕವಾಗಿತ್ತು.

ಲಗ್ಗರೆಯ ವಿವಿಧ ಶಾಲಾ ಮಕ್ಕಳು ಭಾರತಾಂಬೆ ನಿನ್ನ ಜನ್ಮದಿನ ಪ್ರದರ್ಶನದಲ್ಲಿ ನವಿಲನಂತೆ ನರ್ತಿಸಿದರು. ಜತೆಗೆ ಎಂಇಜಿ ಅಂಡ್ ಸೆಂಟರ್ ವತಿಯಿಂದ ಕಲರಿ ಪೈಟು ಪ್ರದರ್ಶಿಸಲಾಯಿತು.

ಗಣರಾಜ್ಯೋತ್ಸವ ಸಂಧರ್ಭದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಾಜ್ಯಪಾರು

ಬಳಿಕ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ತೀವ್ರ ಕುತೂಹಲ ಕೆರಳಿಸಿದ್ದ ದಿ ಆರ್ಮಿ ಸರ್ವೀಸ್ ಕಾಪ್ರ್ಸ್‍ನ ಎಎಸ್‍ಸಿ ದಿ ಟೋರ್ನಾಡಸ್‍ನ ಯೋಧರ ವೈವಿಧ್ಯಮಯವಾದ ಬೈಕ್ ಮೇಲಿನ ಪ್ರದರ್ಶನಗಳು ರೋಮಾಂಚನಗೊಳಿಸಿದವು. ಹಿಮ್ಮುಖ ಬೈಕ್ ಚಲನ,

ಬೈಕ್ ಮೇಲೆ ಪತ್ರಿಕೆ ಓದುವುದು, ಬೆಂಕಿಯ ವೃತ್ತದಲ್ಲಿ ಬೈಕ್ ಜಿಗಿತ, ಬೈಕ್ ಮೇಲಿನ ಏಣಿಯಲ್ಲಿ ಕುಳಿತು ಚಲಾಯಿಸುವುದು, ಕತ್ತರಿಯ ಮಾದರಿಯಲ್ಲಿ ಬೈಕ್ ಚಲನೆ- ಹೀಗೆ ಒಂದಕ್ಕಿಂತ ಮತ್ತೊಂದು ಕಸರತ್ತು ಪ್ರೇಕ್ಷಕರಿಗೆ ಮನರಂಜನೆ ನೀಡಿದವು. ಯೋಧರ ನಡೆಸಿದ ಸಾಹಸಮಯ ಕಸರತ್ತಿಗೆ ಪ್ರೆಕ್ಷಕರ ಮೆಚ್ಚುಗೆ ವ್ಯಕ್ತವಾಯಿತು.

ಗಣರಾಜ್ಯೋತ್ಸವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಕರ್ನಾಟಕ ದಾಖಲೆ

ರಾಜ್ಯಪಾಲರು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತವಾಗಿದ್ದ ನಾಡಗೀತೆ ಮತ್ತು ರೈತಗೀತೆ ತಂಡಕ್ಕೆ ಪ್ರಥಮ, ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್ ಪ್ರದಶಿಸಿದ ತಂಡಕ್ಕೆ ದ್ವಿತೀಯ ಹಾಗೂ ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್ ಪ್ರದರ್ಶನ ನೀಡಿದ ತಂಡಕ್ಕೆ ತೃತೀಯ ಬಹುಮಾನ ವಿತರಿಸಿದರು. ಕವಾಯತಿನಲ್ಲಿ ಭಾಗವಹಿಸಿ ವಿವಿಧ ಸಮೂಹದ ತುಕಡಿಗಳಿಗೂ ರಾಜ್ಯಪಾಲರು ಬಹುಮಾನ ನೀಡಿದರು.

74th Republic Day, celebrations, Manekshaw Parade ground, Bengaluru,

Articles You Might Like

Share This Article