ಸ್ವಾತಂತ್ರ್ಯ ಅಮೃತ ಮಹೋತ್ಸವ, ಇದು ಆತ್ಮಾವಲೋಕನಕ್ಕೆ ಸಕಾಲ

Social Share

*ಸುಮ ಚಂದ್ರಶೇಖರ್
ಎಪ್ಪತ್ತೈದು ವರ್ಷಗಳ ಅನುಭವದಲ್ಲಿ ಈಗ ಕಲಿಯಬೇಕಾದ ಪಾಠವೆಂದರೆ ಗುರಿ ಮುಟ್ಟುವುದಕ್ಕಿಂತಲೂ ಗುರಿ ಮುಟ್ಟುವ ದಾರಿ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ.

ಎಲ್ಲಿಯವರೆಗೆ ಹೋರಾಟ ಗೆಲ್ಲುವವರೆಗೆ ಹೋರಾಟ ಎಂಬುದು ರಾಜಕೀಯ ಪಕ್ಷಗಳ ಮಹಾಗುರಿ. ಈ ಗುರಿ ಮುಟ್ಟಲು ಯಾವುದೇ ಮಾರ್ಗವಾದರೂ ಸರಿ ಎಂಬ ನಂಬಿಕೆಯನ್ನು ಕಿತ್ತೊಗೆಯುವುದು ಭಾರತೀಯರ ಮಟ್ಟಿಗೆ ದೊಡ್ಡ ಸವಾಲು. ಆಗ ಮಾತ್ರ ದಾಸ್ಯದಿಂದ ಪಡೆದ ವಿಮೋಚನೆ ಭಾರತೀಯರಿಗೆ ನಿಲುಕುವ ಸಾಧ್ಯತೆ ಖಚಿತ. ಅದುವೆ ಗಾಂ ಮಹಾತ್ಮ ಪ್ರತಿಪಾದಿಸಿದ ರಾಮರಾಜ್ಯದ ಸಂಸ್ಥಾಪನೆ.

ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಗಿ ಬರೋಬ್ಬರಿ 75 ವರ್ಷ. ಈ ಏಳು ದಶಕಗಳ ಅವಯಲ್ಲಿ ದೇಶ ಸಾಸಿರುವ ಪ್ರಗತಿ ಅನೇಕ. ಈ ಪ್ರಗತಿ ದಾರಿ ಸವೆಸಿರುವ ದಾರಿಯೂ ಅನೇಕ. ಸ್ವಾತಂತ್ರ್ಯಕ್ಕಾಗಿ ಅಹರ್ನಿಶಿ ಹೋರಾಡಿದ ಪ್ರಾತಃಸ್ಮರಣೀಯರು ಕನಸು ಕಂಡಿದ್ದ ದಾರಿ ಬೇರೆ. ಸ್ವಾತಂತ್ರ್ಯದ ಗುರಿಯನ್ನು ನನಸು ಮಾಡಿಕೊಳ್ಳಲು ಆಡಳಿತಗಾರರು ಕಂಡುಕೊಂಡ ದಾರಿ ಬೇರೆ. ಇದರ ಪರಿಣಾಮ ಭಾವನಾಲೋಕದ ನ್ಯಾಯದ ತಕ್ಕಡಿಯಲ್ಲಿ ಈ ಸಂಕಟ, ಸಂತಸಗಳ ತೂಕ ಅವರವರ ಭಾವ-ಭಕ್ತಿಗೆ ಬಿಟ್ಟಿದ್ದು. ಆದರೆ, ರಾಷ್ಟ್ರಪಿತ ಮಹಾತ್ಮಗಾಂೀಜಿಯವರದ್ದು ಸ್ವರಾಜ್ಯ ಭಾರತದ ಕನಸು.
ಪ್ರತಿವರ್ಷ ಆಗಸ್ಟ್ 15ರಂದು ನಾವು ಸಡಗರದಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತೇವೆ ಮತ್ತು ಈ ಸಂಭ್ರಮಾಚರಣೆಗೆ ಕಾರಣರಾದವರನ್ನು ನೆನಪು ಮಾಡಿಕೊಳ್ಳುತ್ತೇವೆ. ನಮ್ಮ ಮನೆಗೇ ಬಂದು ನಮಗೆ ಆe್ಞÉ ಮಾಡಿ 200 ವರ್ಷ ದಬ್ಬಾಳಿಕೆ ನಡೆಸಿದ ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಿದ ಈ ದಿನ ಭಾರತೀಯರೆಲ್ಲರ ಪಾಲಿಗೂ ಸುದಿನ.

1857ರಲ್ಲಿ ಪ್ರಾರಂಭವಾದ ಸ್ವಾತಂತ್ರ್ಯದ ಕಿಚ್ಚು ತೊಂಬತ್ತು ವರ್ಷಗಳವರೆಗೂ ಉರಿಯುತ್ತಲೇ ಇತ್ತು. ಆ ಜ್ವಾಲೆ ಕೊನೆಯ 30 ವರ್ಷಗಳಲ್ಲಂತೂ ಮಹಾಜ್ವಾಲೆಯಾಗಿ ಬ್ರಿಟಿಷ್ ಸರ್ಕಾರವನ್ನು ಭಾಗಶಃ ಸುಟ್ಟು ಹಾಕಿತು. ಲಾಲ್, ಪಾಲ್, ಬಾಲ್ ಎಂಬ ತ್ರಿವಳಿ ೀರ ಪುರುಷರು ಆರಂಭಿಸಿದ ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂಬ ಚಳವಳಿ, ಗಾಂೀಜಿಯವರ ಅಹಿಂಸಾತ್ಮಕ ಹೋರಾಟಗಳು, ಸುಭಾಷ್ ಚಂದ್ರ ಬೋಸರ ಮಿಲಿಟರಿ ಹೋರಾಟದ ಪರಿಣಾಮ ಬ್ರಿಟಿಷರು ನಮಗೆ 1947 ಆ.15ರಂದು ಸ್ವಾತಂತ್ರ್ಯ ಕೊಟ್ಟರು. ಸ್ವಾತಂತ್ರ್ಯ ಪಡೆಯುವುದೇ ನಮ್ಮ ಜನ್ಮಸಿದ್ಧ ಹಕ್ಕೆಂದು ಹೋರಾಡಿ ಹುತಾತ್ಮರಾದ ಚಂದ್ರಶೇಖರ್ ಅಜಾದ್, ಭಗತ್ ಸಿಂಗ್, ಮದನ್ ಲಾಲ್ ಮತ್ತು ಸಂಗೊಳ್ಳಿ ರಾಯಣ್ಣರಂಥ ಸಾವಿರಾರು ಹೋರಾಟಗಾರರು ದೇಶಭಕ್ತಿ ಬೆಳೆಸಿಕೊಳ್ಳಲು ನಮಗೆ ಚೈತನ್ಯ ಪುರುಷರು. ಒಬ್ಬೊಬ್ಬರ ಜೀವನ ಚರಿತ್ರೆಯೂ ನಮಗೆ ಮಾರ್ಗದರ್ಶಕ.

ಆತ್ಮಾವಲೋಕನಕ್ಕೆ ಇದು ಸಕಾಲ:

1919ರ ಜಲಿಯನ್ ವಾಲಾಬಾಗ್ ದುರಂತ ಹಾಗೂ ಅದೇ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವಿಧುರಾಶ್ವತ್ಥದಲ್ಲಿ 1938ರಲ್ಲಿ ನಡೆದ ಹತ್ಯಾಕಾಂಡ ಸೇರಿದಂತೆ ಹಲವಾರು ಚಳವಳಿಗಳು, ಪ್ರತಿಭಟನೆಗಳು ಹಾಗೂ ಲಕ್ಷಾಂತರ ಜನರ ಬಲಿದಾನದ ಫಲವೇ ನಾವಿಂದು ಸುಂದರ ಪ್ರಜಾಪ್ರಭುತ್ವದ ಆಡಳಿತದಲ್ಲಿ ಬದುಕುತ್ತಿದ್ದೇವೆ.

ಆದರೆ, ಸ್ವಾತಂತ್ರ್ಯ ಭಾರತದಲ್ಲಿ ನಾವು ಇಂದು ಹೇಗೆ ವರ್ತಿಸುತ್ತಿದ್ದೇವೆ, ಹೇಗೆ ಬದುಕುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯವೆಂದರೆ ತನ್ನ ಅಭ್ಯುದಯಕ್ಕೆ ಸೂಕ್ತ ಮಾರ್ಗದರ್ಶನವುಳ್ಳ ಕೆಲವು ನಿಯಮಗಳನ್ನು ಪಾಲಿಸಬೇಕಾದ ಒಂದು ವ್ಯವಸ್ಥೆಯಲ್ಲಿ ಬೇರೆಯವರಿಗೆ ಹಾಗೂ ಸಮಾಜಕ್ಕೆ ಯಾವುದೇ ತೊಂದರೆ ಮಾಡದಂತೆ ಬದುಕುವುದು ಸ್ವಾತಂತ್ರ್ಯ. ಸ್ವಾತಂತ್ರ್ಯ ಎಂದರೆ ಹೇಗೆ ಬೇಕಾದರೂ ಬದುಕಬಹುದು ಎಂಬುದಲ್ಲ.

ಹಾರಾಡುವ ಹಕ್ಕಿ, ಕಾಡಿನಲ್ಲಿ ವಾಸಿಸುವ ಪ್ರಾಣಿಗೂ ಸ್ವಾತಂತ್ರ್ಯ ಇರುತ್ತದೆ. ಆದರೆ, ಅವು ಎಂದಿಗೂ ತಮ್ಮ ಚೌಕಟ್ಟು ಮೀರುವುದಿಲ್ಲ. ಆದರೆ, ಎಲ್ಲವನ್ನೂ ತಿಳಿದ ಮನುಷ್ಯ ಮಾತ್ರ ಆ ಎಲ್ಲ ಚೌಕಟ್ಟನ್ನು ಮೀರಿ ಸ್ವಾತಂತ್ರ್ಯದ ಎಲ್ಲೆ ಮೀರಿ ವರ್ತಿಸುತ್ತಿದ್ದಾನೆ. ತನ್ನ ಮನಸ್ಸು ಏನು ಹೇಳುತ್ತದೆಯೋ ಅದರಂತೆ ನಡೆಯುವುದು ಸ್ವಾತಂತ್ರ್ಯವಾಗುವುದಿಲ್ಲ. ಬದಲಿಗೆ ಅದು ಸ್ವೇಚ್ಛಾಚಾರವಾಗುತ್ತದೆ. ಇದೇ ಸ್ವೇಚ್ಛಾಚಾರ ಎಲ್ಲರಲ್ಲೂ ಬಂದರೆ ಸಮಾಜದಲ್ಲಿ ಹಿರಿಯ-ಕಿರಿಯರೆಂಬ ಭಾವನೆಗಳು ದೂರಾಗಿ, ಪ್ರತಿಯೊಬ್ಬರಲ್ಲೂ ಸಹಕಾರದ ಬದಲಾಗಿ ಅಸಹಕಾರ ನೆಲೆಯೂರುತ್ತದೆ. ಒಗ್ಗಟ್ಟು ನಾಶವಾಗಿ ಇಕ್ಕಟ್ಟಿನ ಜೀವನ ನಡೆಸಬೇಕಾಗುತ್ತದೆ.

ಸಮಾಜದಲ್ಲಿ ಹೀಗೆಯೇ ಬದುಕಬೇಕು ಎಂದು ಸಂವಿಧಾನ, ಕಾನೂನು ಕಟ್ಟಳೆಗಳು ತಿಳಿಸಿದರೂ ಅವುಗಳಲ್ಲಿನ ಕೆಲ ದುರ್ಬಲ ಅಂಶಗಳನ್ನು ಬಳಸಿಕೊಂಡು ತಮಗೆ ತೋಚಿದಂತೆ ಸಮಾಜದಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಅಧಿಕಾರಿಗಳು ಲಂಚಕ್ಕಾಗಿ ಹಪಹಪಿಸುತ್ತಿದ್ದಾರೆ. ಕೆಲಸ-ಕಾರ್ಯಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇನ್ನು ರಾಜಕಾರಣಿಗಳಂತೂ ಎಲ್ಲ ನೀತಿ-ನಿಯಮಗಳ ಎಲ್ಲೆ ಮೀರಿದ್ದಾರೆ. ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದಿ ಆರೋಗ್ಯಕರ ಸ್ಥಿತಿಯಲ್ಲಿಡಬೇಕಾದ ಸಾಹಿತ್ಯ ವಲಯದಲ್ಲೂ ಸ್ವೇಚ್ಛಾಚಾರ ಶುರುವಾಗಿದೆ. ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣಗೊಂಡಿದ್ದು, ಹಣ ಇದ್ದವರಿಗಷ್ಟೇ ಶಿಕ್ಷಣ ಎಂಬಂತಾಗಿದೆ.

ವಿದ್ಯೆ ಕಲಿಸಬೇಕಾದ ವಿಶ್ವವಿದ್ಯಾಲಯಗಳು ಜಾತಿಯ ಕೂಪದಲ್ಲಿ ಮುಳುಗಿವೆ. ತಮಗೆ ಬೇಕಾದವರಿಗೆ ಬೇಕಾದ ಪದವಿ, ಹುದ್ದೆ ಕಲ್ಪಿಸಿಕೊಡುವ ಕಾರ್ಖಾನೆಗಳಾಗಿವೆ. ಒಬ್ಬರ ಅಥವಾ ಒಂದು ಸಂಘಟನೆ ತೃಪ್ತಿಗಾಗಿ ತಮಗೆ ಬೇಕಾದ ಹಾಗೆ ಪಠ್ಯವನ್ನು ಬದಲಿಸಿ, ಮಕ್ಕಳ ಮನಸ್ಸಿನಲ್ಲಿ ಅಸಮಾನತೆಯ ಬೀಜ ಬಿತ್ತಲಾಗುತ್ತಿದೆ. ನಮ್ಮ ಸ್ವಾತಂತ್ರ್ಯ ಎಲ್ಲಿಗೆ ಸಾಗುತ್ತಿದೆ ಎಂಬುದನ್ನು ನೆನೆದರೆ ಒಂದು ಕ್ಷಣ ಭಯವಾಗುತ್ತದೆ.

ಗಾಂಧೀಜಿಯವರ ನಿರೀಕ್ಷೆಗಳು :

ನಾನು ಸ್ವತಂತ್ರ್ಯ ಭಾರತದ ಮುಕ್ತಿಗಾಗಿ ಹೋರಾಡಬಯಸುತ್ತೇನೆ. ಈ ಹೋರಾಟಕ್ಕೆ ಅವಶ್ಯಬಿದ್ದಲ್ಲಿ ಪಾಪ ಮಾಡುವಲ್ಲಿ ಹೇಸುವುದಿಲ್ಲ. ಈ ದೇಶದ ಮುಕ್ತಿಗಾಗಿ ಹೋರಾಡಿ ಯಾವುದೇ ಕಡುಬಡವನು ಈ ದೇಶ ನನ್ನದು ಎನ್ನುವ ಭಾವನೆ ಬರುವ ಹಾಗೆ ಪ್ರಯತ್ನಿಸುತ್ತೇನೆ. ಹಾಗೆಯೇ ದೇಶದಲ್ಲಿ ಯಾವುದೇ ಅತಿ ಶ್ರೀಮಂತ ಅಥವಾ ಅತಿಬಡವನಿಲ್ಲದ ಸಮಾಜ ನಿರ್ಮಾಣ ಮಾಡುವುದೇ ನನ್ನ ಉದ್ದೇಶ. ಸರ್ವಜನಾಂಗಗಳು ಸಾಮರಸ್ಯದಿಂದ ಬಾಳುವುದೇ ಮುಖ್ಯ.

ಈ ದೇಶದಲ್ಲಿ ಅಸ್ಪೃಶ್ಯತೆ ತೊಲಗಿಸುವುದು, ಮದ್ಯಪಾನ ರಹಿತ ಸಮಾಜದ ನಿರ್ಮಾಣ ಮಾಡುವುದು, ಮಹಿಳೆಯರಿಗೆ ಸಮಾನ ಹಕ್ಕು ನೀಡುವುದು. ಈ ದೇಶವು ಶಾಂತಿಪ್ರಿಯವಾಗಿದ್ದು, ಪ್ರಪಂಚದ ಯಾವ ದೇಶವನ್ನು ಅತಿಕ್ರಮಣ ಮಾಡಿ ಶೋಷಣೆ ಮಾಡುವುದು ಅಥವಾ ಶೋಷಣೆಗೊಳಪಡಬಾರದು.
ಈ ದೇಶಕ್ಕೊಂದು ಪುಟ್ಟದೊಂದು ಸೇನೆಯಿರಬೇಕು. ಎಲ್ಲಾ ಅಮಾಯಕ ಜನರ ಶ್ರೇಯಸ್ಸು ಬಯಸುವ ಆತ್ಮಸಾಕ್ಷಿಗನುಗುಣವಾಗಿ ಯಾವುದೇ ಭಿನ್ನ-ಬೇಧವಿಲ್ಲದೆ ವಾಸಿಸುವ ಎಲ್ಲಾ ದೇಶಿ ವಿದೇಶಿ ಜನರ ಕಲ್ಯಾಣ ಬಯಸುವ ದೇಶ ನಿರ್ಮಾಣವಾಗಬೇಕು. ನಾನು ವೈಯಕ್ತಿಕವಾಗಿ ವಿದೇಶಿ ಹಾಗೂ ದೇಶಿ ಎಂಬ ಸಂಕುಚಿತ ಭಾವನೆಯಿಲ್ಲದೆ ಕನಸಿನ ರಾಜ್ಯದ ನಿರ್ಮಾಣವೇ ನನ್ನ ಗುರಿ. ಬೇರೇನು ಅಲ್ಲ.

Articles You Might Like

Share This Article