7ನೇ ವೇತನ ಆಯೋಗ ರಚನೆ, ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ

Social Share

ಬೆಂಗಳೂರು,ನ.9- ವಿಧಾನಸಭೆ ಚುನಾವಣೆ ಸಮೀಪ ಇರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚನೆ ಮಾಡುವ ಮೂಲಕ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಿದೆ. ಬಹುದಿನಗಳ ಬೇಡಿಕೆಯಂತೆ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಣೆ ಮಾಡುವ ಕುರಿತು 7ನೇ ವೇತನ ಆಯೋಗ ರಚನೆ ಮಾಡಲಾಗಿದೆ.

ದಾವಣಗೆರೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಏಳನೇ ವೇತನ ಆಯೋಗ ರಚಿಸಬೇಕೆಂದು ಸರ್ಕಾರಿ ನೌಕರರ ಸಂಘ ಒತ್ತಾಯಿಸುತ್ತಲೇ ಬಂದಿತ್ತು. ಕಳೆದ ಸೆಪ್ಟೆಂಬರ್‍ನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲೂ ಮುಖ್ಯಮಂತ್ರಿಗಳು ಅಕೋಬರ್‍ನಲ್ಲಿ ಏಳನೇ ವೇತನ ಆಯೋಗ ರಚಿಸಲಾಗುವುದೆಂದು ಪ್ರಕಟಿಸಿದ್ದರು.

ಆರ್ಥಿಕ ದುರ್ಬಲರ ಮೀಸಲಾತಿ ಅನುಷ್ಠಾನಕ್ಕೆ ವಿಶೇಷ ಕಾಯ್ದೆ

ವೇತನ ಆಯೋಗಕ್ಕೆ ವೇತನ ಪರಿಷ್ಕರಿಸಿ ಶಿಫಾರಸಲು ಮಾಡಲು ನಾಲ್ಕು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ನವೆಂಬರ್‍ನಲ್ಲಿ ಆಯೋಗ ರಚನೆಯಾದರೆ 2023ರ ಮಾರ್ಚ್ ಒಳಗೆ ಆಯೋಗ ವರದಿ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 7 ನೇ ವೇತನ ಆಯೋಗ ರಚನೆಯನ್ನು ಬಜೆಟ್‍ನಲ್ಲಿ ಘೋಷಿಸಲು ಸರ್ಕಾರ ಸಿದ್ಧತೆ ನಡೆಸಿರುವಂತೆಯೇ, ನೌಕರರು ಕೇಂದ್ರ ಮಾದರಿ ವೇತನ ಸಿಗುವುದೇ? ಇಲ್ಲವೇ ಎಂಬ ಆತಂಕದಲ್ಲಿದ್ದಾರೆ.

ರಾಜ್ಯದಲ್ಲಿ 7 ನೇ ವೇತನ ಆಯೋಗ 2022ರ ಜುಲೈನಿಂದ ಜಾರಿಗೆ ಬರಬೇಕಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಬೇಡಿಕೆಯಾದ ಕೇಂದ್ರದ ಮಾದರಿ ವೇತನ ಕ್ಕಾಗಿ ನೌಕರರು ಒತ್ತಡ ತರುತ್ತಿದ್ದಾರೆ. ಆದರೆ ಆ ವೇತನ ಸಿಕ್ಕುವುದೇ ಅಥವಾ ಸರ್ಕಾರ ಆಯೋಗದ ಮೂಲಕ ಮೂಗಿಗೆ ತುಪ್ಪ ಸವರುವುದೇ ಎಂಬುದು ನೌಕರರ ಪ್ರಶ್ನೆಯಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಮುಕುಟ

5 ಆಯೋಗ ರಚನೆಯಾಗಿಲ್ಲ:
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಸಿದಂತೆ 1966ರಿಂದ 2017ರ ಅವ ಯಲ್ಲಿ 11 ವೇತನ ಆಯೋಗ ರಚನೆಯಾಗಬೇಕಾಗಿತ್ತು. ಆದರೆ ರಚನೆಯಾಗಿರುವುದು 6 ಮಾತ್ರ. 3 ಅಕಾರಿ ಸಮಿತಿ ಹಾಗೂ ಒಂದು ಸಂಪುಟ ಉಪಸಮಿತಿ ರಚನೆಯಾಗಿದೆ. ಇದರಿಂದ ಅನ್ಯಾಯವಾಗಿದೆ. ವೇತನ ಪರಿಷ್ಕರಣೆ ವೈಜ್ಞಾನಿಕವಾಗಿ ಆಗದೆ ಅವೈಜ್ಞಾನಿಕವಾಗಿದೆ ಎಂದು ನೌಕರರು ಹೇಳುತ್ತಾರೆ.

ಉಳಿತಾಯ: ರಾಜ್ಯದಲ್ಲಿ ಸರ್ಕಾರಿ ನೌಕರರ ಹುದ್ದೆ ಖಾಲಿಯಾದಂತೆ ಬೊಕ್ಕಸಕ್ಕೆ ಉಳಿತಾಯ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ 7,79,439 ಮಂಜೂರಾದ ಹುದ್ದೆಗಳಿವೆ. ಅದರಲ್ಲಿ 2,69,572 ಹುದ್ದೆ ಖಾಲಿ ಇವೆ. ಇದರಿಂದಾಗಿ ವರ್ಷಕ್ಕೆ 8257 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತ ಬದ್ಧವೆಚ್ಚಗಳಲ್ಲಿ ಉಳಿತಾಯವಾಗುತ್ತಿದೆ. ಆ ಹಣವನ್ನು ಕೇಂದ್ರ ಮಾದರಿ ವೇತನಕ್ಕೆ ನೀಡಿ ಎಂಬ ಒತ್ತಾಯ ಕೇಳಿಬರುತ್ತಿದೆ.

ಸಚಿವ ಸಂಪುಟ ಸೇರಲು ಶಾಸಕರು ಹಿಂದೇಟು

ಎಷ್ಟು ಹೊರೆ?: ಕೇಂದ್ರ ಮಾದರಿ ವೇತನ ಜಾರಿ ಮಾಡಿದರೆ ವಾರ್ಷಿಕ ಸುಮಾರು 7,500 ಕೋಟಿ ರೂ. ಹೆಚ್ಚಿನ ಮೊತ್ತದ ಅಗತ್ಯವಿದೆ. ಗ್ರೇಡ್ ಪೇ ಹಾಗೂ ಇತರ ಭತ್ಯೆ ನೀಡಿದರೆ ಆ ಮೊತ್ತ 15 ಸಾವಿರ ಕೋಟಿ ರೂ. ಮೀರಲಿದೆ ಎಂಬುದು ಹಣಕಾಸು ಇಲಾಖೆ ಮೂಲಗಳ ಮಾಹಿತಿಯಾಗಿದೆ.

Articles You Might Like

Share This Article