8 ಶತಕೋಟಿ ಡಾಲರ್ ಚಿನ್ನದ ಕನ್ನಡಿಯ ಅಂತರಿಕ್ಷ ದೂರದರ್ಶಕ..!

Gold-Mirror-1

ಮೇರಿಲ್ಯಾಂಡ್, ಫೆ.25-ಇದು ವಿಶ್ವದ ಅತ್ಯಂತ ದುಬಾರಿ ಅಂತರಿಕ್ಷ ದೂರದರ್ಶಕ. ಎಂಟು ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಿನ್ನದ ಕನ್ನಡಿಯ ಈ ಟೆಲಿಸ್ಕೋಪ್ ಇನ್ನೆರಡು ವರ್ಷಗಳಲ್ಲಿ ಕಾರ್ಯಾರಂಭ ಮಾಡಲಿದ್ದು, ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾದ ಹೊಸ ಹೊಸ ಸಂಶೋಧನೆಗೆ ನೆರವಾಗಲಿದೆ.   ಅಮೆರಿಕದ ಮೇರಿಲ್ಯಾಂಡ್ ಗ್ರೀನ್‍ಬೆಲ್ಟ್‍ನ ಈ ದೂರದರ್ಶಕ ಈಗ ಪ್ರಯೋಗಕ್ಕೆ ಒಳಪಟ್ಟಿದೆ. ನಾಸಾದ ಗಾಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‍ನ ರಕ್ಷಣಾತ್ಮಕ ವಲಯದಲ್ಲಿ ಇದನ್ನು ವಿಜ್ಞಾನಿಗಳು ಪರೀಕ್ಷಿಸುತ್ತಿದ್ದಾರೆ.
ಈ ಟೆಲಿಸ್ಕೋಪ್ ನಿರ್ಮಾಣಕ್ಕಾಗಿ ನಾಸಾ ವಿಜ್ಞಾಗಳು ಈಗಾಗಲೇ ಸಾಕಷ್ಟು ಸಮಯ ವ್ಯಯಿಸಿದ್ದು, ಇನ್ನೆರಡು ವರ್ಷಗಳಲ್ಲಿ ಬಾಹ್ಯಾಕಾಶ ಅನ್ವೇಷಣೆಗೆ ಪರಿಪೂರ್ಣ ಸಜ್ಞಾಗಲಿದೆ. ಇದಕ್ಕೆ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಭೂಮಿಯಿಂದ ಲಕ್ಷಾಂತರ ಮೈಲಿ ದೂರದಲ್ಲಿರುವ ಆಕಾಶಕಾಯಗಳು ಮತ್ತು ಬೆಳಕಿನ ಮೇಲೆ ಅಧ್ಯಯನ ನಡೆಸಲು ನೆರವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Gold-Mirror

Sri Raghav

Admin