ಸ್ಯಾನ್ ಡಿಯಾಗೋ , ಮಾ. 13-ದಟ್ಟ ಮಂಜಿನ ನಡುವೆ ಎರಡು ವಲಸಿಗ ಕಳ್ಳಸಾಗಣೆ ದೋಣಿಗಳು ಮುಳುಗಿ ಸುಮಾರು ಎಂಟು ಜನರು ಸಾವನ್ನಪ್ಪಿರುವ ಘಟನೆ ಅಮೇರಿಕದ ಕರಾವಳಿಯ ಬ್ಲ್ಯಾಕ್ಸ್ ಬೀಚ್ ಬಳಿ ನಡೆದಿದೆ.
ಮಾರಕ ಸಮುದ್ರ ಎಂದು ಕರೆಯುವ ಈ ಪ್ರದೇಶದಲ್ಲಿ ಅಮೆರಿಕಕ್ಕೆ ಮಾನವ ಕಳ್ಳಸಾಗಣೆ ಮಾಡುವ ದಾರಿಯಲ್ಲಿ ಒಂದಾಗಿದೆ. ಬೀಚ್ ಬಳಿ ಹಡಗೊಂದು ಭರಿ ಅಲೆಗಳಗೆ ಉರುಳಿಬಿದ್ದಿದೆ ಎಂದು ಮಾಹಿತಿ ಬಂದ ತಕ್ಚಣ ಕರಾವಳಿ ಪಡೆ ಅಧಿಕಾರಿಗಳು ಮಗುಚಿದ ಹಡಗಿನಲ್ಲಿ 23 ಜನರು ಇದ್ದರು ಎಂಟು ಜನರು ಅದರ ಮೇಲೆ ಕೂತು ಜೀವ ಉಳಿಸಿಕೊಳ್ಳಲು ಸಾಹಸಪಡುತ್ತಿದ್ದರು.
BIG NEWS: ಆಸ್ಕರ್ ಗೆದ್ದ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಹಾಡು
ಸ್ಯಾನ್ ಡಿಯಾಗೋ ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ಕರಾವಳಿ ಪಡೆ ಎಂಟು ದೇಹಗಳನ್ನು ನೀರಿನಿಂದ ಹೊರತೆಗೆದ್ದಿದ್ದು ಆದರೆ ಮಂಜು ಹೆಚ್ಚುವರಿಯಾಗಿರುವ ಕಾರಣ ಬದುಕಿರುವವರ ಹುಡುಕಾಟಕ್ಕೆ ಅಡ್ಡಿಯಾಯಿತು ಆದರೂ ಪ್ರಯತ್ನ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೆ ಮಾಡಿದ ಮಹಿಳೆ ಸೇರಿದಂತೆ ಕೆಲವರು ಪರಾರಿಯಾಗಿರಬಹುದು. ಎಲ್ಲಿದ್ದಾರೆಂದು ತಿಳಿದಿರಲಿಲ್ಲ ಎಂದು ಸ್ಯಾನ್ ಡಿಯಾಗೋ ಲೈಫ್‍ಗಾರ್ಡ್ ಮುಖ್ಯಸ್ಥ ಜೇಮ್ಸ ಗಾರ್ಟ್‍ಲ್ಯಾಂಡ್ ತಿಳಿಸಿದ್ದಾರೆ.
ಆ ಪ್ರದೇಶವು ತುಂಬಾ ಅಪಾಯಕಾರಿಯಾಗಿದೆ, ಸ್ಯಾನ್ ಡಿಯಾಗೋ ಡೌನ್‍ಟೌನ್‍ನಿಂದ ಉತ್ತರಕ್ಕೆ ಸುಮಾರು 15 ಮೈಲುಗಳು ಕರಾವಳಿಯಲ್ಲಿ ಎಚ್ಚರಿಕೆ ಅಗತ್ಯ ಎಂದರು. ಕಡಲ ಕಳ್ಳಸಾಗಣೆ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಪ್ರತಿ ವರ್ಷ ನೂರಾರು ಪ್ರಕರಣಗಳು ಸಂಭವಿಸುತ್ತವೆ ಮತ್ತು ಕೆಲವೊಮ್ಮೆ ಮಾರಕವಾಗುತ್ತವೆ. ಪ್ರಸ್ತುತ ಮೃತರು ಮೆಕ್ಸಿಕೂ ಪ್ರಜೆಗಳು ಎಂದು ಹೇಳಲಾಗುತ್ತಿದೆ.
8 dead, ‘worst, maritime, smuggling, tragedies, San Diego, beach,